ನವದೆಹಲಿ, ಫೆಬ್ರವರಿ 19: ಭಾರತ ದೆಹಲಿಯಲ್ಲಿ ಆಯೋಜಿಸಿರುವ AI ಇಂಪ್ಯಾಕ್ಟ್ ಶೃಂಗಸಭೆ (AI Impact Summit) ಪ್ರತಿದಿನ ವಿಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಜಾಗತಿಕ ನಾಯಕರು ಈ ಶೃಂಗಸಭೆಯಲ್ಲಿ ಭಾರತದ ಆವಿಷ್ಕಾರಗಳನ್ನು ಮತ್ತು ಎಐ ಅಳವಡಿಕೆಯಲ್ಲಿ ಭಾರತದ ಪ್ರಯೋಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೃಂಗಸಭೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ AI ಶೃಂಗಸಭೆಯಲ್ಲಿ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ 8 ವರ್ಷದ ಬಾಲಕ ರಣವೀರ್ ಸಚ್‌ದೇವ ಭಾವಹಿಸಿದ್ದಾನೆ. ಆತನನ್ನು ಬಾಲ ಪ್ರತಿಭೆ ಎಂದು ಪ್ರಶಂಸಿಸಲಾಗುತ್ತಿದೆ. ಈ ವರ್ಷದ AI ಶೃಂಗಸಭೆಯಲ್ಲಿ ರಣವೀರ್ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿದ್ದು, ಭಾರತೀಯ AI ಮಾದರಿಯ ಬಗ್ಗೆ ಮಾತನಾಡಿರುವುದು ವಿಶೇಷ.
ಈ ಬಗ್ಗೆ ಮಾಹಿತಿ ನೀಡಿರುವ ರಣವೀರ್ ಸಚದೇವ್, “ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಾನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ ಭಾಗವಹಿಸಲು ಬಂದಿದ್ದೇನೆ. ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ಹೇಗೆ ಲಿಂಕ್ ಮಾಡಬಹುದು ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಉಳಿದ ರಾಷ್ಟ್ರಗಳು AI ಅನ್ನು ಹೇಗೆ ನಿರ್ಮಿಸುತ್ತಿವೆ ಎಂಬುದರ ಕುರಿತು ಕೂಡ ನಾನು ಮಾತನಾಡಿದ್ದೇನೆ. ನಾನು ಇದೀಗ ಬಿಡುಗಡೆಯಾದ ಭಾರತೀಯ AI ಮಾದರಿಯ ನನ್ನ ಸ್ವಂತ ಬಳಕೆಯ ಕೇಸನ್ನು ಕೂಡ ಹಂಚಿಕೊಂಡಿದ್ದೇನೆ. ನಾನು ಭಾರತದ GDPಗೆ ಹೇಗೆ ಕೊಡುಗೆ ನೀಡುತ್ತಿದ್ದೇನೆ ಮತ್ತು ಅದರೊಂದಿಗೆ AI ಸಾಕ್ಷರತೆಯನ್ನು ಹೇಗೆ ಹೆಚ್ಚಿಸುತ್ತಿದ್ದೇನೆ ಎಂಬುದರ ಮಾಹಿತಿಯನ್ನು ಹಂಚಿಕೊಂಡಿದ್ದೇನೆ” ಎಂದು ವಿವರಿಸಿದ್ದಾನೆ.
#WATCH | Delhi: At #IndiaAIImpactSummit2026, Ranvir Sachdeva, Child Prodigy, Technologist, Global Author says, “I’m here as the youngest keynote speaker at the India AI Impact Summit. I’m talking about how I’m linking ancient Indian philosophies to modern-day technologies. I’m… pic.twitter.com/e3OGgtxyDK
— ANI (@ANI) February 19, 2026
ಇದನ್ನೂ ಓದಿ: Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?
ಅಂದಹಾಗೆ, ರಣವೀರ್ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲಿ ಸ್ವಿಜರ್ಲೆಂಡ್‌ನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ AI ಫಾರ್ ಗುಡ್ ಗ್ಲೋಬಲ್ ಶೃಂಗಸಭೆಯಲ್ಲಿ ಆತನನ್ನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಆಗ ಆತನಿಗೆ ಕೇವಲ 7 ವರ್ಷವಾಗಿತ್ತು.
VIDEO | Delhi: Ranvir Sachdeva, youngest keynote speaker at AI Impact Summit 2026, speaks to PTI on his participation.
He says, “I definitely believe that AI is becoming very important in the world ahead. Our generation will shape what is being built today, and we will be the… pic.twitter.com/77S27SA5Si
— Press Trust of India (@PTI_News) February 19, 2026
ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಸಹ, ರಣವೀರ್ ಸಚ್ದೇವ್ 180ಕ್ಕೂ ಹೆಚ್ಚು ದೇಶಗಳು, 53 ವಿಶ್ವಸಂಸ್ಥೆಯ ಪಾಲುದಾರ ಸಂಸ್ಥೆಗಳು ಮತ್ತು ಜಾಗತಿಕ AI ನಾಯಕರನ್ನು ವಿಶ್ವಾಸದಿಂದ ಉದ್ದೇಶಿಸಿ ಮಾತನಾಡಿದ್ದು ವಿಶೇಷವಾಗಿತ್ತು. “ಬದಲಾವಣೆಯ ಏಜೆಂಟ್‌ಗಳು: ಜನರೇಷನ್ AI ಫಾರ್ ಗುಡ್” ಎಂಬ ವಿಷಯ ಕುರಿತು ರಣವೀರ್ 20 ನಿಮಿಷಗಳ ಕಾಲ ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು, ಮೆಚ್ಚುಗೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ: AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ
ರಣವೀರ್ ಆಪಲ್ ಸಿಇಒ ಟಿಮ್ ಕುಕ್ ನಡೆಸಿದ ಅಧಿವೇಶನದಲ್ಲಿ ಅವರನ್ನು ಭೇಟಿಯಾಗಿದ್ದ. ಅಲ್ಲಿ ಆತನನ್ನು ನೋಡಿ ಕುಕ್ ಬಹಳ ಪ್ರಭಾವಿತರಾಗಿದ್ದರು. ಆಪಲ್ ಸಿಇಒ ಕ್ಯುಪರ್ಟಿನೊದಲ್ಲಿರುವ ಆಪಲ್ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ ಕಾನ್ಫರೆನ್ಸ್ 2023ರಲ್ಲಿ ಭಾಗವಹಿಸಲು ರಣವೀರ್ಗೆ ವೈಯಕ್ತಿಕ ಆಹ್ವಾನವನ್ನು ನೀಡಿದ್ದರು ಎಂಬುದು ವಿಶೇಷ.
Delhi: At the AI Summit, student Ranvir Singh Sachdeva says, “I think that it’s changing so rapidly that not only will it be the Millennials and that generation, but also the Generation Z and Generation Alpha who will be the true change makers that will change and adapt to what… pic.twitter.com/pVBI388XBv
— IANS (@ians_india) February 19, 2026
ರಣವೀರ್ನ ಹೆಸರನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆತ ಏಷ್ಯಾದ ಅತ್ಯಂತ ಕಿರಿಯ TEDx ಭಾಷಣಕಾರ. AI ಫಾರ್ ಗುಡ್ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ರಣವೀರ್ ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಯಂತ್ರ ಕಲಿಕೆ ಕೋರ್ಸ್ ಮಾಡುತ್ತಿದ್ದಾನೆ. ಆತ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ITU160 ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ರಣವೀರ್ “ಆರ್ ಯು ಬಾರ್ನ್ ವಿಥ್ AI?” ಎಂಬ ಪುಸ್ತಕ ಕೂಡ ಬರೆದಿದ್ದಾನೆ. ಇದು ವಿಶ್ವಾದ್ಯಂತ Amazonನಲ್ಲಿ ಲಭ್ಯವಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಪುಸ್ತಕಕ್ಕಾಗಿ ರಣವೀರ್ನನ್ನು ವೈಯಕ್ತಿಕವಾಗಿ ಅಭಿನಂದಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ