‘ಧುರಂದರ್ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ಇರೋದು ಖಚಿತ; ಸಿಕ್ತು ಪಕ್ಕಾ ಸಾಕ್ಷಿ – Kannada News | Akshaye Khanna returns in Dhurandhar 2 Team confirms by tagging

2025ರಲ್ಲಿ ಭಾರಿ ಯಶಸ್ಸು ಕಂಡ ಸಿನಿಮಾ ಎಂದರೆ ಅದು ‘ಧುರಂಧರ್’. ಈ ಸಿನಿಮಾದಲ್ಲಿ ಹೀರೋ ರಣವೀರ್ ಸಿಂಗ್. ಆದರೆ ಹೆಚ್ಚು ಹೈಲೈಟ್ ಆಗಿದ್ದು ಖಳನಟ ಅಕ್ಷಯ್ ಖನ್ನಾ. ಪ್ರೇಕ್ಷಕರು ಅಕ್ಷಯ್ ಖನ್ನಾ (Akshaye Khanna) ನಟನೆಯನ್ನು ಸಖತ್ ಇಷ್ಟಪಟ್ಟರು. ಈ ಚಿತ್ರದಿಂದಾಗಿ ಅಕ್ಷಯ್ ಖನ್ನಾ ಅವರ ಖ್ಯಾತಿ ಹೆಚ್ಚಾಯಿತು. ಈಗ ‘ಧುರಂದರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಇರುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದುರಾಗಿತ್ತು. ಯಾಕೆಂದರೆ, ‘ಧುರಂದರ್’ ಕ್ಲೈಮ್ಯಾಕ್ಸ್​​ನಲ್ಲಿ ಅಕ್ಷಯ್ ಖನ್ನಾ ಪಾತ್ರ ಸಾಯುತ್ತದೆ. ಹಾಗಾದರೆ ಅವರು ‘ಧುರಂಧರ್ 2’ (Dhurandhar 2) ಸಿನಿಮಾದಲ್ಲಿ ಹೇಗೆ ಇರಲು ಸಾಧ್ಯ? ಅದಕ್ಕೆ ಈಗ ಉತ್ತರ ಸಿಕ್ಕಿದೆ.

‘ಧುರಂಧರ್ 2’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರ ಪಾತ್ರ ಇರುತ್ತದೆ ಎಂಬುದು ಖಚಿತವಾಗಿದೆ. ಪಾಕಿಸ್ತಾನದ ಲಿಯಾರಿ ಪ್ರಾಂತ್ಯದ ಗ್ಯಾಂಗ್​ಸ್ಟರ್ ರೆಹಮಾನ್ ಡಕಾಯಿತ್ ಅಲಿಯಾಸ್ ರೆಹಮಾನ್ ಬಲೋಚ್ ಎಂಬ ಪಾತ್ರವನ್ನು ಅಕ್ಷಯ್ ಖನ್ನಾ ‘ಧುರಂಧರ್’ ಸಿನಿಮಾದಲ್ಲಿ ನಿಭಾಯಿಸಿದ್ದರು. ಕ್ಲೈಮ್ಯಾಕ್ಸ್​​ನಲ್ಲಿ ಆ ಪಾತ್ರ ಅಂತ್ಯವಾಗಿದ್ದರೂ ಕೂಡ ಈಗ ಸೀಕ್ವೆಲ್​​ನಲ್ಲಿ ಫ್ಲ್ಯಾಶ್​​ನಬ್ಯಾಕ್ ದೃಶ್ಯಗಳ ಮೂಲಕ ಮತ್ತೆ ಅವರನ್ನು ತೋರಿಸಲಾಗುವುದು.

ಇಂದು (ಫೆಬ್ರವರಿ 3) ‘ಧುರಂಧರ್ 2’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅಲ್ಲದೇ, ಟೀಸರ್ ಕೂಡ ರಿಲೀಸ್ ಆಗಲಿದೆ. ಇದನ್ನು ತಿಳಿಸಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಚಿತ್ರತಂಡದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರನ್ನು ಟ್ಯಾಗ್ ಮಾಡಲಾಗಿದೆ. ಅಕ್ಷಯ್ ಖನ್ನಾ ಅವರ ಹೆಸರನ್ನೂ ಕೂಡ ಹ್ಯಾಶ್​ಟ್ಯಾಗ್ ಮೂಲಕ ಪ್ರಸ್ತಾಪಿಸಲಾಗಿದೆ.

ಅಕ್ಷಯ್ ಖನ್ನಾ ಅವರು ‘ಧುರಂಧರ್ 2’ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಖಚಿತ ಆದ್ದರಿಂದಲೇ ಅವರ ಹೆಸರನ್ನು ಈ ಪೋಸ್ಟ್​ನಲ್ಲಿ ಬರೆಯಲಾಗಿದೆ. ಇದರಿಂದ ಅಭಿಮಾನಿಗಳಿಗೆ ಖುಷಿ ಆಗಿದೆ. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಅದೇ ದಿನ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗಲಿದೆ. ಹಾಗಾಗಿ ಭಾರಿ ಪೈಪೋಟಿ ಏರ್ಪಡಲಿದೆ.

ಇದನ್ನೂ ಓದಿ: 2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ

2025ರ ಡಿಸೆಂಬರ್ 5ರಂದು ರಿಲೀಸ್ ಆಗಿದ್ದ ‘ಧರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದ್ದರಿಂದ ಸೀಕ್ವೆಲ್ ಮೇಲೆ ಬಹಳ ನಿರೀಕ್ಷೆ ಮನೆ ಮಾಡಿದೆ. ಆದಿತ್ಯ ಧಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್​​ಪಾಲ್ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:45 am, Tue, 3 February 26

Source link

Leave a Reply

Your email address will not be published. Required fields are marked *