Headlines

‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ – Kannada News | Toxic Teaser vs Dhurandhar 2: Yash’s Film Dominates with 97M Views, What Went Wrong?

‘ಟಾಕ್ಸಿಕ್’ ಟೀಸರ್ (Toxic Movie) ರಿಲೀಸ್ ಆದಾಗ ಶುರುವಾದ ಒಂದು ಹಲ್​ಚಲ್ ಇದೆಯಲ್ಲ ಅದು ತುಂಬಾನೇ ದೊಡ್ಡದು. ಈ ಟೀಸರ್​​ನಲ್ಲಿ ಬಂದ ಯಾರೂ ಊಹಿಸದ ದೃಶ್ಯದಿಂದ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಆಯಿತು. ಆದರೆ, ‘ಧುರಂಧರ್ 2’ ಸಿನಿಮಾದ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಎರಡೂ ಟೀಸರ್ ವೀಕ್ಷಣೆಯ ವೀವ್ಸ್ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ, ಯಾವ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ.

‘ಟಾಕ್ಸಿಕ್’ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅಂದು ಯಶ್ ಜನ್ಮದಿನ. ಈ ಟೀಸರ್ 24 ಗಂಟೆಯಲ್ಲಿ ಯೂಟ್ಯೂಬ್ ಒಂದರಲ್ಲೇ ಸುಮಾರು 50 ಮಿಲಿಯನ್ಸ್ ವೀವ್ಸ್ ಕಂಡಿತ್ತು. ಅಂದರೆ 5 ಕೋಟಿ. ಇದು ಟಾಕ್ಸಿಕ್ ಚಿತ್ರದ ನಿಜವಾದ ಕ್ರೇಜ್ ಏನು ಎಂಬುದನ್ನು ತೋರಿಸಿತ್ತು. ಈ ಟೀಸರ್ ಈವರೆಗೆ ಸುಮಾರು 97 ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.

ಇದನ್ನೂ ಓದಿ: ‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ

ಆದರೆ, ಈ ದಾಖಲೆಯ ಹತ್ತಿರ ಬರಲು ‘ಧುರಂಧರ್ 2’ ಟೀಸರ್ ಬಳಿ ಸಾಧ್ಯವಾಗಿಲ್ಲ. ಹಿಂದಿ ಟೀಸರ್ 24 ಗಂಟೆಯಲ್ಲಿ 9 ಮಿಲಿಯನ್​​ಗೂ ಕಡಿಮೆ ವೀಕ್ಷಣೆ ಕಂಡಿದೆ. ಇನ್ನು, ಉಳಿದ ಭಾಷೆಯ ಟೀಸರ್ ಸೇರಿಸಿದರೆ ಹೆಚ್ಚುವರಿಯಾಗಿ ಎರಡು ಮಿಲಿಯನ್ ಸೇರ್ಪಡೆ ಆಗಬಹುದು. ಅಂದರೆ, ಈವರೆಗೆ ಟೀಸರ್ 11 ಮಿಲಿಯನ್ ವೀಕ್ಷಣೆ ಕಂಡಿರಬಹುದು. ‘ಟಾಕ್ಸಿಕ್’ ಟೀಸರ್ ಕಂಡ 50 ಮಿಲಿಯನ್ ವೀಕ್ಷಣೆ ಎಲ್ಲಿ, ‘ಧುರಂಧರ್ 2’ ಕಂಡ 11 ಮಿಲಿಯನ್ ವೀಕ್ಷಣೆ ಎಲ್ಲಿ’ ಎಂದು ಕನ್ನಡ ಸಿನಿಪ್ರಿಯರು ಕೇಳಿಕೊಳ್ಳುತ್ತಿದ್ದಾರೆ.

‘ಧುರಂಧರ್’ ಸಿನಿಮಾದಲ್ಲಿ ಬರೋ ಎಂಡ್ ಕ್ರೆಡಿಟ್ ದೃಶ್ಯಗಳನ್ನೇ ‘ಧುರಂಧರ್ 2’ ಟೀಸರ್ ಎಂದು ರಿಲೀಸ್ ಮಾಡಲಾಗಿದೆ. ಇದು ಚಿತ್ರಕ್ಕೆ ತೀವ್ರ ಹಿನ್ನಡೆ ತಂದಿದೆ. ಇನ್ನು ಹೆಚ್ಚೆಂದರೆ ಟೀಸರ್ 20 ಮಿಲಿಯನ್ ವಿಕ್ಷಣೆ ಕಾಣಬಹುದು. ಅದಾಗಲೇ, ‘ಟಾಕ್ಸಿಕ್’ ಟೀಸರ್ 100 ಮಿಲಿಯನ್ ಕ್ಲಬ್ ಸೇರಿರುತ್ತದೆ ಎಂಬುದು ಪಕ್ಕಾ. ಎರಡೂ ಟೀಸರ್ ಮಧ್ಯೆ ಸುಮಾರು 80 ಮಿಲಿಯನ್ ವ್ಯತ್ಯಾಸ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *