‘ಧುರಂಧರ್’ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಮೊದಲು ಹೋಗಿದ್ದು ದಕ್ಷಿಣದ ಈ ಸ್ಟಾರ್ ನಟನಿಗೆ

‘ಧುರಂಧರ್’ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಮೊದಲು ಹೋಗಿದ್ದು ದಕ್ಷಿಣದ ಈ ಸ್ಟಾರ್ ನಟನಿಗೆ

‘ಧುರಂದರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು (Dhurandhar 2 Movie) ಗಮನ ಸೆಳೆದಿವೆ. ಈ ಸಿನಿಮಾದ ಎಲ್ಲಾ ಪಾತ್ರಗಳು ಮೆಚ್ಚುಗೆ ಪಡೆದಿವೆ. ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳಲ್ಲಿ ಹೀರೋ, ಹೀರೋಯಿನ್, ವಿಲನ್ ಪಾತ್ರ ಮಾತ್ರ ಹೈಲೈಟ್ ಆಗುತ್ತದೆ. ಆದರೆ, ‘ಧುರಂಧರ್’ ಸಿನಿಮಾಗಳಲ್ಲಿ ಆ ರೀತಿ ಆಗಿಲ್ಲ. ಎಲ್ಲಾ ಪಾತ್ರಕ್ಕೂ ಸರಿಯಾದ ತೂಕ ಇದೆ. ಈ ಸಿನಿಮಾದಲ್ಲಿ ಬಂದಿದ್ದ ರೆಹಮಾನ್ ಡಕಾಯಿತ್ ಪಾತ್ರ ಜನ ಮೆಚ್ಚುಗೆ ಪಡೆದಿದೆ. ಈ ಪಾತ್ರವನ್ನು ಮೊದಲು ಮೂವರಿಗೆ ನೀಡಲಾಗಿತ್ತಂತೆ. ಆ ಮೂವರು ರಿಜೆಕ್ಟ್ ಮಾಡಿದ್ದರು ಎಂಬ ವಿಷಯ ರಿವೀಲ್ ಆಗಿದೆ.

‘ಧುರಂಧರ್’ ಸಿನಿಮಾದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಮುಕೇಶ್ ಛಬ್ರಾ ಕೆಲಸ ಮಾಡಿದ್ದಾರೆ. ಅವರು ಎಲ್ಲಾ ಪಾತ್ರಗಳಿಗೂ ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಮಿಂಚಿದ್ದಾರೆ ನಿಜ. ಆದರೆ, ಈ ಮೊದಲು ಮೂವರಿಗೆ ಈ ಆಫರ್ ಹೋಗಿತ್ತು.
‘ಮೂವರಿಗೆ ರೆಹಮಾನ್ ಡಕಾಯಿತ್ ಆಫರ್ ನೀಡಲಾಗಿತ್ತು. ಇದರಲ್ಲಿ ಇಬ್ಬರು ಬಾಲಿವುಡ್​​ನವರು. ಒಬ್ಬರು ದಕ್ಷಿಣದವರು. ಆದರೆ, ಅವರೆಲ್ಲರೂ ರಿಜೆಕ್ಟ್ ಮಾಡಿದ ಬಳಿಕ ಅಕ್ಷಯ್ ಖನ್ನಾ ಬಳಿ ಹೋಯಿತು. ಸದ್ಯ ಅವರು ಯಾರು ಎಂಬ ವಿಷಯವನ್ನು ರಿವೀಲ್ ಮಾಡಿಲ್ಲ. ಕೆಲವು ವರದಿಗಳ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಇರಬಹುದು ಎಂದು ಕೆಲವರು ಊಹಿಸಿದ್ದಾರೆ.

ಇನ್ನು, ಪಾತ್ರವನ್ನು ರಿಜೆಕ್ಟ್ ಮಾಡಲು ಈ ಮೂವರು ಕಲಾವಿದರು ನೀಡಿದ ಕಾರಣವನ್ನು ಮುಕೇಶ್ ರಿವೀಲ್ ಮಾಡಿದ್ದಾರೆ. ‘ಇದರಲ್ಲಿ ಹೆಚ್ಚು ಪಾತ್ರಗಳು ಇವೆ. ಅಲ್ಲದೆ, ಇದು ರಣವೀರ್ ಸಿಂಗ್ ಸಿನಿಮಾ’ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾ ಅದ್ಭುತ ವಿಮರ್ಶೆ ಪಡೆದರು. ಈ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಈಗ ರಿಲೀಸ್ ಆಗಿರುವ ‘ಧುರಂಧರ್ 2’ ಕೂಡ ಅಬ್ಬರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *