‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾ (Dhurandhar 2) ಗೆದ್ದು ಬೀಗಿದೆ. ‘ಧುರಂಧರ್’ ರಿಲೀಸ್ ಆಗಿ ನಾಲ್ಕು ತಿಂಗಳು ಹಾಗೂ ‘ಧುರಂಧರ್ 2’ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಹೀಗಿರುವಾಗ ಕಥೆ ಬರಹಗಾರ ಸಂತೋಷ್ ಕುಮಾರ್ ಎಂಬುವವರು ‘ಧುರಂಧರ್ 2’ ಕಥೆ ತಮ್ಮದು ಎಂದು ಹೇಳಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಆದಿತ್ಯ ಧಾರ್ ಮುಂದಾಗಿದ್ದಾರೆ ಎಂದು ವರದಿ ಆಗಿದೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂತೋಷ್ ಕುಮಾರ್ ಅವರು, ‘ಧುರಂಧರ್ 2’ ಚಿತ್ರದ ಕಥೆ ನನ್ನದು. ಅವರು ಅದನ್ನು ಕದ್ದು ಸಿನಿಮಾ ಮಾಡಿದ್ದಾರೆ. ನಾನು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳುಗೆ ಕಥೆ ಹೇಳಿದ್ದೆ. ನಾನು ದೊಡ್ಡ ದೊಡ್ಡ ಕಲಾವಿದರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವ ಪ್ಲ್ಯಾನ್ ಇತ್ತು’ ಎಂದಿದ್ದರು.

ಈ ವಿಷಯವಾಗಿ ಆದಿತ್ಯ ಧಾರ್ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಬದಲಿಗೆ ಕಾನೂನಾತ್ಮಕವಾಗಿಯೇ ಉತ್ತರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ವರದಿಗಳ ಪ್ರಕಾರ, ತಮ್ಮ ಕಾನೂನು ತಂಡದ ಜೊತೆ ಮಾತನಾಡಿರುವ ಆದಿತ್ಯ ಧಾರ್ ಅವರು ಸಂತೋಷ್​​ ಕುಮಾರ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.

ಆದರೆ, ಇದಕ್ಕೆ ಸಂತೋಷ್ ಕುಮಾರ್ ಸುಮ್ಮನಾಗಿಲ್ಲ. ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸಂತೋಷ್ ಕುಮಾರ್ ನೇರವಾಗಿ ಹೇಳಿದ್ದಾರೆ. ಮೌನವಾಗಿರಲು ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕೋರ್ಟ್​​​ನಲ್ಲಿ ವಿಷಯ ಹೋರಾಡುವುದಾಗಿ ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಇದರಿಂದ ಸಿಟ್ಟಾಗಿರೋ ಆದಿತ್ಯ ಧಾರ್ ಅವರಿಗೆ ಮತ್ತಷ್ಟು ಸಿಟ್ಟಾಗಿದ್ದಾರೆ. ಎಚ್ಚರಿಕೆಯ ಬಳಿಕವೂ ಸಂತೋಷ್ ಅವರು ಆಧಾರ ರಹಿತ ಹೇಳಿಕೆ ಮುಂದುವರಿಸಿದ್ದಾರೆ ಎಂಬುದು ಆದಿತ್ಯ ಧಾರ್ ಅವರ ಆರೋಪ. ಈ ಹಿನ್ನೆಲೆಯಲ್ಲಿ ಸಂತೋಷ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದಿತ್ಯ ಧಾರ್ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *