‘ಧುರಂಧರ್ 2’ ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್

‘ಧುರಂಧರ್ 2’ ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಬಳಿಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಿತು. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್​​​ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಈ ಚಿತ್ರಕ್ಕೆ ‘ಧುರಂಧರ್’ ನಟನ ಎಂಟ್ರಿ ಆಗಿದೆ. ಅದೂ ವಿಲನ್ ಆಗಿ ಎನ್ನಲಾಗುತ್ತಿದೆ.

‘ಧುರಂಧರ್’ ಹಾಗೂ ‘ಧುಂಧರ್ 2’ ಚಿತ್ರವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದರು. ಈ ಎರಡೂ ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ಧುರಂಧರ್’ ಸಿನಿಮಾ 1300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ಧುರಂದರ್ 2’ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶಿರಾನಿ ಬಲೂಚ್ ಪಾತ್ರದಲ್ಲಿ ಬಿಮಲ್ ಓಬೆರಾಯ್ ಕಾಣಿಸಿಕೊಂಡಿದ್ದರು.

‘ಧುರಂಧರ್’ ಸಿನಿಮಾದಲ್ಲಿ ಬಿಮಲ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಅಲ್ಲಿ ಅವರ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ. ಅವರು ಹಮ್ಜಾಗೆ ಸಹಾಯ ಮಾಡುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಫರ್ ಪಡೆದಿದ್ದಾರೆ.

ಇದನ್ನೂ ಓದಿ: ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂನಿಯರ್ ಎನ್​​ಟಿಆರ್ ಸಿನಿಮಾ ಎಂದರೆ ಆ್ಯಕ್ಷನ್ ಜೋರಾಗಿಯೇ ಇರುತ್ತದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ ಎಂದು ಹೇಳಲಾಗಿದೆ.ಈ ಸಿನಿಮಾದಲ್ಲಿ ಬಿಮಲ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಅವರ ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​​ಟಿಆರ್ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟ್ ನಿರಂತರವಾಗಿ ವಿಳಂಬ ಆಗುತ್ತಿದೆ, ಸಿನಿಮಾ ನಿಂತು ಹೋಗುತ್ತದೆ ಎಂಬೆಲ್ಲ ವರದಿ ಇದ್ದವು. ಅದ್ಯಾವುದೂ ಸತ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *