
‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್ಗೆ ವಿಘ್ನ ಎದುರಾಗಿತ್ತು. ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ನೀಡಿ ಇವರು ಸಿನಿಮಾನ ಮುಂದಕ್ಕೆ ಹಾಕಿಕೊಂಡರು. ಇದರಿಂದ ‘ಧುರಂಧರ್ 2’ ಸಿನಿಮಾ ಜೊತೆಗಿನ ಕ್ಲ್ಯಾಶ್ ಮಿಸ್ ಆಗಿದೆ. ಆದರೆ, ಕೆಲವು ವರದಿಗಳ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗ ಡಜನ್ ಸಿನಿಮಾಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ‘ಟಾಕ್ಸಿಕ್’ ತುಂಬಾನೇ ದೊಡ್ಡ ಚಾಲೆಂಜ್ ಎದುರಿಸುವ ಸೂಚನೆ ಪಡೆದಿದೆ.
‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಯಾವುದಾದರೂ ಒಂದು ಸಿನಿಮಾ ಮುಂದಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು. ಕೊನೆಗೆ, ‘ಟಾಕ್ಸಿಕ್’ ತಂಡದವರು ಚಿತ್ರವನ್ನು ಜೂನ್ 4ಕ್ಕೆ ಮುಂದಕ್ಕೆ ಹಾಕಿಕೊಂಡರು. ಯಶ್ ಈಗ 11 ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಿದೆ.
‘ಟಾಕ್ಸಿಕ್’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಈ ಸಿನಿಮಾ ಕನಿಷ್ಠ ಎರಡು ತಿಂಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಎರಡು ತಿಂಗಳಲ್ಲಿ ಬರೋಬ್ಬರಿ 12 ಚಿತ್ರಗಳು ಬರುತ್ತಿವೆ.
#Toxic avoid CLASH from #Dhurandhar2…
…only to enter THE MOST JAM-PACKED RELEASE CORRIDOR
But this time the Gulf market won’t get hampered thanks to a steady flow of Hollywood + Bollywood releases keeping screens active.
Jun 4 — Toxic
Jun 5 — Masters of the Universe
Jun…— BFilmy Boxoffice (@BFilmyBO) March 13, 2026
ಜೂನ್ 5ಕ್ಕೆ ಹಾಲಿವುಡ್ನ ‘ಮಾಸ್ಟರ್ ಆಫ್ ದಿ ಯೂನಿವರ್ಸ್’ ಬರುತ್ತಿದೆ. ಜೂನ್ 12ರಂದು ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’, ‘ಮೇ ವಾಪ್ಸ್ ಆವುಂಗಾ’ ತೆರೆಗೆ ಬರುತ್ತಿದೆ. ಜೂನ್ 19ರಂದು ‘ಕಾಕ್ಟೇಲ್ 2’ ಹಾಗೂ ‘ಟಾಯ್ ಸ್ಟೋರಿ 5’ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್
ಜೂನ್ 26ಕ್ಕೆ ‘ಕ್ಯಾರಿ ಆನ್ ಜಟ್ಟಾ 4’ ತೆರೆಗೆ ಬರಲಿದೆ. ಜುಲೈ 1ರಂದು ‘ಮಿನೀಯನ್ 2’, ಜುಲೈ 3ರಂದು ‘ಧಮಾಲ್ 4’, ಜುಲೈ 9ರಂದು ‘ಮೋನಾ’, ಜುಲೈ 10ರಂದು ‘ಆಲ್ಫಾ’, ಜುಲೈ 17ರಂದು ‘ದಿ ಒಡಿಸ್ಸಿ’, ಜುಲೈ 31ರಂದು ‘ಸ್ಪೈಡರ್ ಮ್ಯಾನ್, ‘ಬ್ರ್ಯಾಂಡ್ ನ್ಯೂ ಡೇ’ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
