‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಹೈಡ್ರಾಮಾ: ಚಿತ್ರಮಂದಿರ ಧ್ವಂಸ, ಪೊಲೀಸರ ಎಂಟ್ರಿ

‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಹೈಡ್ರಾಮಾ: ಚಿತ್ರಮಂದಿರ ಧ್ವಂಸ, ಪೊಲೀಸರ ಎಂಟ್ರಿ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಭಾರತ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಳಲ್ಲಿ 300 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ಸಿನಿಮಾ ಅನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಆದರೆ ‘ಧುರಂಧರ್ 2’ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರ ಒಂದರಲ್ಲಿ ಘಟನೆಯೊಂದು ನಡೆದಿದ್ದು, ಇದರಿಂದಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದು ಮಾತ್ರವಲ್ಲದೆ ಪೊಲೀಸರ ಎಂಟ್ರಿ ಸಹ ಆಗಿದೆ.

‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಿಡುಗಡೆ ಆಗಿದೆ. ಕೆನಡಾನಲ್ಲಿ ಸಹ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದೆ. ಕೆನಡಾದ ಒಂದು ಚಿತ್ರಮಂದಿರದಲ್ಲಿ ಸಿನಿಮಾದ ಪ್ರದರ್ಶನದ ವೇಳೆ ಪ್ರೇಕ್ಷಕರು ಅಕ್ಷರಶಃ ರೊಚ್ಚಿಗೆದ್ದು ಚಿತ್ರಮಂದಿರದ ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಸಿನಿಮಾ ಪ್ರದರ್ಶನವಾಗುತ್ತಿದ್ದ ಪರದೆಯನ್ನೇ ಹರಿದ ಕಾರಣ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರಮಂದಿರಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಕೆನಡಾದ ಪ್ರಮುಖ ನಗರವೊಂದರ ಚಿತ್ರಮಂದಿರದಲ್ಲಿ ಸಿನಿಮಾದ ಪ್ರದರ್ಶನ ಆಗುತ್ತಿತ್ತು. ಈ ಚಿತ್ರದ ವಿಶೇಷ ಪ್ರದರ್ಶನದ ವೇಳೆ ಗದ್ದಲ ಆರಂಭವಾಯಿತು. ವರದಿಗಳ ಪ್ರಕಾರ, ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ಪದೇ ಪದೇ ಅಡಚಣೆ ಉಂಟಾದ್ದರಿಂದ ಪ್ರೇಕ್ಷಕರು ತಾಳ್ಮೆ ಕಳೆದುಕೊಂಡರು. ಆರಂಭದಲ್ಲಿ ಕಿರುಚಾಟಕ್ಕೆ ಸೀಮಿತವಾಗಿದ್ದ ಪ್ರತಿಭಟನೆ, ಕ್ರಮೇಣ ಹಿಂಸಾಚಾರಕ್ಕೆ ತಿರುಗಿತು. ಕೆಲವು ಕಿಡಿಗೇಡಿ ಪ್ರೇಕ್ಷಕರು ಚಿತ್ರಮಂದಿರದ ಒಳಗಿದ್ದ ಆಸನಗಳನ್ನು ಕಿತ್ತು ಹಾಕಿದರು. ಇನ್ನು ಕೆಲವರು ಸ್ಕ್ರೀನ್ ಅನ್ನು ಚಾಕುವಿನಿಂದ ಹರಿದು ಹಾಕಿದ್ದಾರೆ. ಈ ವೇಳೆ ಚಿತ್ರಮಂದಿರದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆನಡಾ ಪೊಲೀಸರು ಚಿತ್ರಮಂದಿರವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕೆಲವು ಭಾರತೀಯ ಮೂಲದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದು, ಘಟನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *