ಕೋಲಾರ, ಫೆಬ್ರವರಿ 17): ಇಲ್ಲಿನ ವೇಮಗಲ್‌ನಲ್ಲಿ ಭಾರತದ ಮೊದಲ ಖಾಸಗಿ ಮಿನಿ ಹೆಲಿಕಾಪ್ಟರ್ (helicopter) ಜೋಡಣಾ ಘಟಕಕ್ಕೆ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಟಾಟಾ ಏರ್‌ಬಸ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಘಟಕದಿಂದ 2027ಕ್ಕೆ ಮೊದಲ H125 ಹೆಲಿಕಾಪ್ಟರ್ ಹೊರಬರುವ ನಿರೀಕ್ಷೆ ಇದೆ. ರಕ್ಷಣಾ ಇಲಾಖೆಗೆ ಸಹಾಯಕವಾಗಲಿರುವ ಈ ಯೋಜನೆ ದೇಶದ ಏರೋಸ್ಪೇಸ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಎಂದೇ ಪರಿಗಣಿಸಲಾಗಿದೆ. ಇನ್ನು ನಮ್ಮ ಕೋಲಾರದಲ್ಲಿ (Kolar) ತಯಾರಾಗುವ ಹೆಲಿಕಾಪ್ಟರ್ಗಳ ವೈಶಿಷ್ಟತೆ ಏನು ಎನ್ನುವುದನ್ನು ನಮ್ಮ ಪ್ರತಿನಿಧಿ ಮಾಹಿತಿ ನೀಡಿದ್ದಾರೆ ನೋಡಿ.