Headlines

ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ – Kannada News | 1 Lakh+ Namma Metro Rule Breaches: Bengaluru Metro Launches Etiquette Drive

ಬೆಂಗಳೂರು, ಫೆ.2: ನಮ್ಮ ಮೆಟ್ರೋ (Namma Metro) ಸುಮಾರು ಬಾರಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತ ಬಂದಿದೆ. ಆದರೆ ನಾಗರಿಕರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಸಾರ್ವಜನಿಕ ಪ್ರಜ್ಞೆಯ ಕೊರತೆಯಿಂದಾಗಿ ಕಳೆದ ಒಂದು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ.  ಹೌದು ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಮಾತನಾಡುವುದು, ಮೀಸಲಿಟ್ಟ ಸೀಟ್​​​ನಲ್ಲಿ ಕುಳಿತುಕೊಳ್ಳುವುದು, ಹೀಗೆ ಅನೇಕ ಪ್ರಕರಣಗಳು ವರದಿಯಾಗಿದೆ. ಈ ಬಗ್ಗೆ ಟೈಮ್ಸ್ ನೌ ವರದಿಯನ್ನು ಮಾಡಿದೆ. ಈ ಬಗ್ಗೆ ಒಂದು ಅಭಿಯಾನವನ್ನು ಕೂಡ ಮಾಡಲು ಮೆಟ್ರೋ ಸಿಬ್ಬಂದಿಗಳು ಮುಂದಾಗಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದ್ರೂ, ಜನ ಮೆಟ್ರೋ ನಿಯಮಗಳನ್ನು ಪಾಲಿಸುತ್ತಿಲ್ಲ.

57,538 ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವ ಪ್ರಕರಣಗಳು ವರದಿಯಾಗಿದೆ. 37,038 ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಇರುವ ಸೀಟುಗಳನ್ನು ಬಿಟ್ಟುಕೊಡದಿರುವ ಪ್ರಕರಣಗಳು ದಾಖಲಾಗಿದೆ. 1,907 ಮೆಟ್ರೋ ರೈಲಿನ ಒಳಗೆ ಆಹಾರ ತಿನ್ನುವುದು ಪ್ರಕರಣಗಳು ದಾಖಲಾಗಿದೆ. 1,677 ರೈಲಿನಲ್ಲಿ ಗುಟ್ಕಾ ಅಥವಾ ಪಾನ್ ಅಗಿಯುವ ಪ್ರಕರಣಗಳು ವರದಿಯಾಗಿದೆ. ಇದೀಗ ಇದನ್ನು ತಪ್ಪಿಸಲು ಪ್ರಯಾಣಿಕರಲ್ಲಿ ‘ಮೆಟ್ರೋ ಶಿಷ್ಟಾಚಾರ’ (Metro Etiquette) ಮೂಡಿಸಲು ಅಭಿಯಾನ ಆರಂಭಿಸಲಾಗಿದೆ.

ಇದನ್ನೂ ಓದಿ: ನನಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದ ಶಿಕ್ಷಕಿಗೆ ವಿದ್ಯಾರ್ಥಿಗಳು ಮಾಡಿದ್ದೇನು? ನೋಡಿ

ಪ್ರತಿ ಮೆಟ್ರೋ ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಇವರು ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಜಾಗೃತಿ ಮೂಡಿಸುತ್ತಾರೆ. ಪದೇ ಪದೇ ಎಚ್ಚರಿಸಿದರೂ ನಿಯಮ ಮೀರಿದರೆ ‘ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002’ ರ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಮೆಟ್ರೋ ರೈಲು ಸಾರ್ವಜನಿಕ ಆಸ್ತಿಯಾಗಿದ್ದು, ಸಹ-ಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಸೀಟು ಬಿಟ್ಟುಕೊಡುವ ವಿಚಾರದಲ್ಲಿ ಮತ್ತು ಶಬ್ದ ಮಾಡದಂತೆ ಎಚ್ಚರಿಕೆ ವಹಿಸಲು ಹೇಳಿದ್ದಾರೆ.

ನಮ್ಮ ಮೆಟ್ರೋ ದಂಡದ ದರ

ರೈಲಿನ ಒಳಗಿರುವಾಗ ಯಾರಾದರೂ ಗುಟ್ಕಾ ತಿನ್ನುತ್ತಿದ್ದರೆ ಅಥವಾ ಅತಿಯಾದ ಅಶಿಸ್ತು ತೋರುತ್ತಿದ್ದರೆ, ಪ್ರತಿ ಬಾಗಿಲಿನ ಪಕ್ಕದಲ್ಲಿರುವ ‘Emergency Talkback’ ಬಟನ್ ಒತ್ತಿ ನೇರವಾಗಿ ರೈಲು ಚಾಲಕನ ಜೊತೆ ಮಾತನಾಡಬಹುದು. ಅವರು ಮುಂದಿನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ನೀವು ಯಾವುದೇ ಸಮಯದಲ್ಲಿ ಈ ಸಹಾಯವಾಣಿ 1800-425-12345 (ಟೋಲ್ ಫ್ರೀ ಸಂಖ್ಯೆ) ಅಥವಾ 080-23019111 ಗೆ ಕರೆ ಮಾಡಿ ದೂರು ನೀಡಬಹುದು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *