ಬೆಂಗಳೂರು, ಮಾರ್ಚ್ 04: ಇತ್ತೀಚೆಗೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಗೆಯುವಾಗ ನಿಧಿ ಪತ್ತೆಯಾಗಿದ್ದ ವಿಚಾರ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರಿನಲ್ಲೊಂದು ಘಟನೆ ಬೆಳಕಿಗೆ ಬಂದಿದೆ. ನಿಧಿ ಆಸೆಗಾಗಿ ಬಿಲ್ಡರ್ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಅಗೆದಿರುವ ಘಟನೆ ಬೆಂಗಳೂರಿನ HRS ಲೇಔಟ್ನಲ್ಲಿ ಎಳ್ಳುಕುಂಟೆಯಲ್ಲಿ ನಡೆದಿದೆ. ಸದ್ತ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನ ಹಿಂಭಾಗದಲ್ಲಿ ಅಗೆದಿರುವುದಾಗಿ ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಅಪಾರ್ಟ್ಮೆಂಟ್ನ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಇದೆ. ಅದರ ಕೆಳಗಡೆ ನಿಧಿ ಇದೆ ಎಂದು ಸುಧಾಕರ್ ನಾಯ್ಡು ನಂಬಿದ್ದ. ಕಾಂಪೌಂಡ್ಗೆ ತಗಡಿನ ಶೀಟ್ ಹೊಡೆದು ಕವರ್ ಮಾಡಿ, ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಸ್ಥಳದಲ್ಲಿ ಅಗೆದಿದ್ದಾನೆ. ಸದ್ಯ ವಿಚಾರ ಗೊತ್ತಾಗಿ ಸುಧಾಕರ್ಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.