‘ನಿರ್ಮಿಸಿದ್ದು, ಖರೀದಿಸಿದ್ದಲ್ಲ’; ಕಟ್ಟುಮಸ್ತಾದ ದೇಹದ ಫೋಟೋ ಹಂಚಿಕೊಂಡ ಜೂನಿಯರ್ ಎನ್​​​ಟಿಆರ್

‘ನಿರ್ಮಿಸಿದ್ದು, ಖರೀದಿಸಿದ್ದಲ್ಲ’; ಕಟ್ಟುಮಸ್ತಾದ ದೇಹದ ಫೋಟೋ ಹಂಚಿಕೊಂಡ ಜೂನಿಯರ್ ಎನ್​​​ಟಿಆರ್

ಜೂನಿಯರ್ ಎನ್​​ಟಿಆರ್ (JR NTR) ಅವರು ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಅವರು ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಾಗಿ ಅವರು ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. ಈಗ ಜೂನಿಯರ್ ಎನ್​ಟಿಆರ್ ಅವರು ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಜೂನಿಯರ್ ಎನ್​​ಟಿಆರ್ ಅವರು ಕೊನೆಯದಾಗಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದು ‘ದೇವರ’ ಚಿತ್ರದಲ್ಲಿ. ಈ ಸಿನಿಮಾ ಮೋಡಿ ಮಾಡುವಲ್ಲಿ ವಿಫಲವಾಯಿತು. ಆ ಬಳಿಕ ಅವರು ‘ವಾರ್ 2’ ಸಿನಿಮಾ ಮಾಡಿದರು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈಗ ಅವರು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ನಿಂತಿದೆ ಎಂದೆಲ್ಲ ಸುದ್ದಿಗಳು ಹರಿದಾಡಿತ್ತು. ತಂಡದವರು ಪ್ರತಿ ಹಂತದಲ್ಲೂ ಇದಕ್ಕೆ ಸ್ಪಷ್ಟನೆ ನೀಡುತ್ತಾ ಹೊಗುತ್ತಿದ್ದಾರೆ. ಈಗ ಜೂನಿಯರ್ ಎನ್​​ಟಿಆರ್ ಟ್ರೋಲ್​​ಗಳಿಗೆ ಉತ್ತರ ನೀಡಿದ್ದಾರೆ.

ಜೂನಿಯರ್ ಎನ್​ಟಿಆರ್ ಅವರು ಈಗ ಹಿಂಭಾಗದಿಂದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಫಿಟ್ ಆದ ಬಾಡಿ ಗಮನ ಸೆಳೆದಿದೆ. ‘ಇದನ್ನು ನಿರ್ಮಿಸಿದ್ದು, ಖರೀದಿ ಮಾಡಿದ್ದಲ್ಲ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರಿಗೆ ಅವರು ಉತ್ತರ ಕೊಟ್ಟಿದ್ದಾರೆ.

 

View this post on Instagram

 

A post shared by Jr NTR (@jrntr)

‘ಡ್ರ್ಯಾಗನ್’ ಚಿತ್ರಕ್ಕಾಗಿ ಜೂ.ಎನ್​ಟಿಆರ್ ಅವರು ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಕೆಲವರಿಗೆ ಈ ಬಗ್ಗೆ ಬೇಸರ ಇದೆ. ಅವರು ಸಿನಿಮಾ ಶೂಟ್ ಮುಗಿದ ಬಳಿಕ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಕೊನೆಯದಾಗಿ ನಿರ್ದೇಶನ ಮಾಡಿದ್ದು ‘ಸಲಾರ್’ ಚಿತ್ರವನ್ನು. ಈ ಸಿನಿಮಾ ಹಿಟ್ ಆಗಿಲ್ಲ. ಆ ಬಳಿಕ ಅವರು ‘ಡ್ರ್ಯಾಗನ್’ ಚಿತ್ರ ಒಪ್ಪಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *