Headlines

ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ? – Kannada News | Aamir Khan visits singer Arijit Singh home after announcing retirement

ದೇಶವೇ ಮೆಚ್ಚಿದ ಗಾಯಕ ಅರಿಜಿತ್ ಸಿಂಗ್ (Arijit Singh) ಅವರು ಕೆಲವೇ ದಿನಗಳ ಹಿಂದೆ ನಿವೃತ್ತಿ ಘೋಷಿಸಿದ್ದರು. ಇನ್ಮುಂದೆ ಯಾವುದೇ ಸಿನಿಮಾ ಗೀತೆಗಳನ್ನು ಹಾಡುವುದಿಲ್ಲ ಎಂದು ಅವರು ಹೇಳಿದ್ದರು. ಅವರ ಈ ನಿರ್ಧಾರದಿಂದ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ಆಯಿತು. ಅರಿಜಿತ್ ಸಿಂಗ್ ಅವರು ನೂರಾರು ಸೂಪರ್ ಹಿಟ್ ಹಾಡುಗಳಿಗೆ ಧ್ವನಿ ಆಗಿದ್ದಾರೆ. ಆದರೆ ಅವರು ಏಕಾಏಕಿ ನಿವೃತ್ತಿ (Retirement) ತೆಗೆದುಕೊಂಡಿರುವುದು ಎಲ್ಲರಿಗೂ ಬೇಸರ ಮೂಡಿಸಿದೆ. ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ (Aamir Khan) ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಈ ರೀತಿ ಸುದ್ದಿ ಹಬ್ಬಲು ಕಾರಣ ಕೂಡ ಇದೆ. ಆಮಿರ್ ಖಾನ್ ಅವರು ಇತ್ತೀಚೆಗೆ ಅರಿಜಿತ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಬೈನಿಂದ ಪಶ್ವಿಮ ಬಂಗಾಳಕ್ಕೆ ತೆರಳಿ, ಅಲ್ಲಿರುವ ಅರಿಜಿತ್ ಸಿಂಗ್ ಅವರ ಮನೆಗೆ ಆಮಿರ್ ಖಾನ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ಅರಿಜಿತ್ ಸಿಂಗ್ ಅವರಿಗೆ ತುಂಬಾ ಡಿಮ್ಯಾಂಡ್ ಇದೆ. ಸದ್ಯಕ್ಕಂತೂ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾರೆ. ಇಂಥ ಸಮಯದಲ್ಲಿ ನಿವೃತ್ತಿ ಘೋಷಿಸಿರುವುದು ಚಿತ್ರರಂಗಕ್ಕೆ ಕೂಡ ನಷ್ಟ. ಹಾಗಾಗಿ ಅವರನ್ನು ಮತ್ತೆ ಹಿನ್ನೆಲೆ ಗಾಯನಕ್ಕೆ ಕರೆತರಬೇಕು ಎಂಬುದು ಅನೇಕರ ಬಯಕೆ ಆಗಿದೆ. ಆ ಕಾರಣದಿಂದಲೇ ಆಮಿರ್ ಖಾನ್ ಅವರು ಅರಿಜಿತ್ ಸಿಂಗ್ ನಿವಾಸಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಆಮಿರ್ ಖಾನ್ ಅವರು ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಯಾವ ಕಾರಣಕ್ಕಾಗಿ ಅವರು ಅರಿಜಿತ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ಶೀಘ್ರದಲ್ಲೇ ಅವರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?

‘ಇದನ್ನು ನಿಲ್ಲಿಸುತ್ತಿದ್ದೇನೆ. ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *