Headlines

ಪಾಕ್ ಆಟಗಾರನ ನೀಚ ಕೃತ್ಯ; ಹೋಟೆಲ್​ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ! ದಂಡ – Kannada News | Pak Cricketer Fined for Misconduct with Hotel Staff in Sri Lanka: T20 WC Shame

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup) ಹೀನಾಯ ಪ್ರದರ್ಶನ ನೀಡಿ ತನ್ನ ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟಿಗರ ಬಗ್ಗೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮೈದಾನದಲ್ಲಿ ತಮ್ಮ ಪೌರುಷ ತೋರಿಸುವಲ್ಲಿ ವಿಫಲನಾಗಿದ್ದ ಪಾಕ್ ಕ್ರಿಕೆಟಿಗ ತಾವು ತಂಗಿದ್ದ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹೋಟೆಲ್​ನ ಆಡಳಿತ ಮಂಡಳಿಯಿಂದ ದಂಡನೆಗೆ ಒಳಗಾಗಿದ್ದಾನೆ. ಇದರ ಜೊತೆಗೆ ಸಂತ್ರಸ್ತ ಮಹಿಳೆ ಹಾಗೂ ಹೋಟೆಲ್ ಆಡಳಿತ ಮಂಡಳಿಯ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾನೆ ಎಂದು ವರದಿಯಾಗಿದೆ.

ನಿಮಗೆಲ್ಲ ತಿಳಿದಿರುವಂತೆ ಭಾರತದೊಂದಿಗೆ ಸಂಬಂಧ ಹಳಸಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನೇಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಕ್ರಿಕೆಟ್ ಆಡಲು ಬಂದಿದ್ದ ಪಾಕ್ ಕ್ರಿಕೆಟಿಗರು ಬಂದಿರುವ ಕೆಲಸವನ್ನು ಮಾಡದೆ, ತಾವು ತಂಗಿದ್ದ ಹೋಟೆಲ್‌ನಲ್ಲಿ ಮಾಡಬಾರದ ಕೆಲಸ ಮಾಡಿದ್ದು, ವಿಶ್ವ ಕ್ರಿಕೆಟ್​ ನಾಚಿಕೆ ಪಡುವಂತಹ ಕೆಲಸ ಮಾಡಿದ್ದಾರೆ. ಇದರ ಪರಿಣಾಮವಾಗಿ ತಪ್ಪು ಮಾಡಿದ ಆ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಚೀಮಾರನ್ನು ಒತ್ತಾಯಿಸಲಾಗಿದೆ.

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ

ಶ್ರೀಲಂಕಾದಲ್ಲಿ ಹೋಟೆಲ್​ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಾಕಿಸ್ತಾನಿ ಆಟಗಾರನಿಗೆ ದಂಡ ವಿಧಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡ ತಂಗಿದ್ದ ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಗಳ ಪ್ರಕಾರ, ಪಾಕ್ ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.ಈ ಸಲುವಾಗಿ ಹೋಟೆಲ್ ಅಧಿಕಾರಿಗಳು ತಂಡದ ವ್ಯವಸ್ಥಾಪಕ ನವೀದ್ ಚೀಮಾ ಅವರಿಗೆ ದೂರು ನೀಡಿದ್ದು, ದೂರಿನನ್ವಯ ವ್ಯವಸ್ಥಾಪಕರು ಆಟಗಾರನಿಗೆ ದಂಡ ವಿಧಿಸಿ ಹೋಟೆಲ್ ಆಡಳಿತ ಮಂಡಳಿ ಮುಂದೆ ಆ ಕ್ರಿಕೆಟಿಗನಿಂದ ಕ್ಷಮೆಯಾಚಿಸಿದ್ದಾರೆ.

ಆಟಗಾರನ ಹೆಸರು ಬಹಿರಂಗವಾಗಿಲ್ಲ

ಇದರ ಜೊತೆಗೆ ಹೆಚ್ಚಿನ ವಿಚಾರಣೆಗಾಗಿ ಆ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆ ಆಟಗಾರನ ಹೆಸರು ಇನ್ನೂ ಬಹಿರಂಗವಾಗಿಲ್ಲ. ವರದಿಯ ಪ್ರಕಾರ, ಈ ಘಟನೆ ಪಾಕಿಸ್ತಾನದ ಅಂತಿಮ ಸೂಪರ್ 8 ಪಂದ್ಯಕ್ಕೂ ಸ್ವಲ್ಪ ಮೊದಲು ಅಥವಾ ಆ ಸಮಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಇಂತಹ ವಿವಾದಗಳು ಹುಟ್ಟಿಕೊಂಡಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆ ತಂಡದ ಪ್ರವಾಸಗಳಲ್ಲಿ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳು ಅಶಿಸ್ತಿನ ಆರೋಪ ಹೊತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *