ಪಿಎಂ ಕಿಸಾನ್ ಯೋಜನೆ; ಮಾ. 13ಕ್ಕೆ ಸಿಗುತ್ತಾ 22ನೇ ಕಂತಿನ ಹಣ? ಇಲ್ಲಿದೆ ಈ ಸ್ಕೀಮ್​ನ ವಿವರ

ಪಿಎಂ ಕಿಸಾನ್ ಯೋಜನೆ; ಮಾ. 13ಕ್ಕೆ ಸಿಗುತ್ತಾ 22ನೇ ಕಂತಿನ ಹಣ? ಇಲ್ಲಿದೆ ಈ ಸ್ಕೀಮ್​ನ ವಿವರ

ನವದೆಹಲಿ, ಮಾರ್ಚ್ 10: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 9-10 ಕೋಟಿ ರೈತರು ಸರ್ಕಾರದಿಂದ ವರ್ಷಕ್ಕೆ 6,000 ರೂ ಸಹಾಯಧನ ಪಡೆಯುತ್ತಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. 2018-19ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 21 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಈಗ 22ನೇ ಕಂತಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕೆಲ ವರದಿಗಳ ಪ್ರಕಾರ ಹೋಳಿ ಹಬ್ಬಕ್ಕೆ (ಮಾ. 4) ಮುನ್ನವೇ ರೈತರ ಖಾತೆಗಳಿಗೆ ಒಂದು ಕಂತಿನ ಹಣವಾದ 2,000 ರೂ ಹಾಕುವ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಯಾಗಿಲ್ಲ. ಕೆಲ ವರದಿಗಳು ಯುಗಾದಿ ಹಬ್ಬದ ಒಳಗೆ ಹಣ ಬಿಡುಗಡೆಯಾಗಬಹುದು ಎನ್ನುತ್ತಿವೆ. ಮತ್ತೂ ಕೆಲ ವರದಿಗಳು ಈ ವಾರವೇ ಕಂತಿನ ಹಣ ಸಿಗಬಹುದು ಎನ್ನುತ್ತಿವೆ.

ಮಾರ್ಚ್ 13, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆಗಲೇ ಅವರು ಪಿಎಂ ಕಿಸಾನ್ 22ನೇ ಕಂತಿನ ಬಿಡುಗಡೆ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ ಅನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಸಿಗುತ್ತದೆ.

ಈ ಯೋಜನೆಗೆ ನೊಂದಾಯಿಸುವವರು ರೈತರಾಗಿರಬೇಕು, ಕೃಷಿ ಜಮೀನು ಹೊಂದಿರಬೇಕು. ಗ್ರಾಮದ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನಿನ ಪಹಣಿ ದಾಖಲೆ, ಆಧಾರ್, ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಕೊಟ್ಟು ಯೋಜನೆಗೆ ನೊಂದಾಯಿಸಬಹುದು. ಆನ್​ಲೈನ್​ನಲ್ಲಿ ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಅಲ್ಲಿಯೂ ನೊಂದಾಯಿಸಬಹುದು. ಬ್ಯಾಂಕ್ ಖಾತೆಯು ಆಧಾರ್​ಗೆ ಜೋಡಿತವಾಗಿರಬೇಕು.

ಈ ರೈತರು ಯೋಜನೆಗೆ ಅರ್ಹರಿರುವುದಿಲ್ಲ…

ಕೃಷಿ ಭೂಮಿ ಹೊಂದಿದ್ದರೂ ಕೆಲ ರೈತರು ಈ ಯೋಜನೆಗೆ ಅರ್ಹರಿರುವುದಿಲ್ಲ. ಆದಾಯ ತೆರಿಗೆ ಪಾವತಿಸುತ್ತಿರುವವರು, ಅಥವಾ ಕುಟುಂಬದ ಬೇರೊಬ್ಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾಗ್ಯೂ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ಹಾಗೆಯೇ, ಕುಟುಂಬದಲ್ಲಿ ಯಾರಾದರೂ ಸದಸ್ಯರು ಶಾಸಕ, ಸಂಸದ, ಜಿಪಂ ಸದಸ್ಯ ಇತ್ಯಾದಿ ಆಗಿರಕೂಡದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಕೂಡದು. ಸರ್ಕಾರಿ ನೌಕರರು ಆಗಿರಕೂಡದು. ತಿಂಗಳಿಗೆ 10,000 ರೂಗಿಂತ ಹೆಚ್ಚು ಸರ್ಕಾರಿ ಪಿಂಚಣಿ ಪಡೆಯುವವರು ಇರಕೂಡದು.

ಗಮನಿಸಬೇಕಾದ ಇನ್ನೂ ಕೆಲ ಸಂಗತಿಗಳೆಂದರೆ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯ ಫಲ ಪಡೆಯುವಂತಿಲ್ಲ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಇದು ಸಿಗುವುದು. ಮತ್ತೊಂದು ಸಂಗತಿ ಎಂದರೆ, 2019ರ ನಂತರ ಅಪ್ಪ ಬದುಕಿರುವಾಗಲೇ ಅವರ ಜಮೀನನ್ನು ತಮ್ಮ ಹೆಸರಿಗೆ ಮಗ ಬರೆಸಿಕೊಂಡಿದ್ದರೆ ಆಗಲೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *