ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ನವದೆಹಲಿ, ಮಾರ್ಚ್ 12: ದೇಶದಲ್ಲಿ ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ ಅಥವಾ ಎಲ್​ಪಿಜಿ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಇಂಧನ ಲಭ್ಯತೆ ಸಾಕಷ್ಟಿದೆ. ಇಂಧನ ಸರಬರಾಜು ಸರಪಳಿ ಸರಾಗವಾಗಿ ಇದೆ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸತ್​ನಲ್ಲಿ ಗುರುವಾರ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri), ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದ್ದು ಯಾವುದೇ ರೀತಿಯಲ್ಲಿ ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.

ಪೆಟ್ರೋಲ್ ಆಗಲೀ, ಡೀಸಲ್ ಆಗಲೀ, ಸೀಮೆ ಎಣ್ಣೆಯಾಗಲೀ, ಎಲ್​ಪಿಜಿಯಾಗಲೀ ಕೊರತೆ ಎದುರಿಸುತ್ತಿಲ್ಲ. ಅವುಗಳ ಲಭ್ಯತೆ ಬಹಳ ಖಚಿತ ಇದೆ. ಅವುಗಳ ಪೂರೈಕೆ ವ್ಯವಸ್ಥೆಯೂ ಸರಾಗವಾಗಿ ನಡೆಯುತ್ತಿದೆ. ದೇಶದ ಒಟ್ಟಾರೆ ಇಂಧನ ಪರಿಸ್ಥಿತಿ ಉತ್ತಮವಾಗಿದೆ. ಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ಬಂದರು ತಲುಪಿದ ಭಾರತದ ಮೊದಲ ತೈಲ ಟ್ಯಾಂಕರ್

ದೇಶದಲ್ಲಿ ಈಗ ಎಲ್​ಪಿಜಿ ಲಭ್ಯತೆಯೇ ದೊಡ್ಡ ಚಿಂತೆಯ ವಿಷಯವಾಗಿದೆ. ಈ ವಿಚಾರದ ಬಗ್ಗೆ ಹರ್ದೀಪ್ ಸಿಂಗ್ ಪುರಿ ಆಶಾದಾಯಕವಾಗಿ ಮಾತನಾಡಿದ್ದಾರೆ. ದೇಶೀಯ ಎಲ್​ಪಿಜಿ ಪೂರೈಕೆ ಪೂರ್ಣ ಸಂರಕ್ಷಿತವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಇಂಧನ ಮಾರುಕಟ್ಟೆಗಳ ವ್ಯತ್ಯಯಗಳ ಪರಿಣಾಮಗಳು ಎಲ್​ಪಿಜಿ ಪೂರೈಕೆ ಮೇಲೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಭಾರತದ 60ರಷ್ಟು ಎಲ್​ಪಿಜಿ ಪೂರೈಕೆಯನ್ನು ಗಲ್ಫ್ ದೇಶಗಳಿಂದ ಪಡೆಯಲಾಗುತ್ತಿದೆ. ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ ತಡೆಯುಂಟಾಗಿರುವುದರಿಂದ ಗಲ್ಫ್​ನಿಂದ ಎಲ್​ಪಿಜಿ ಪೂರೈಕೆ ಸ್ಥಗಿತಗೊಂಡಿದೆ. ಇದನ್ನು ಸರಿದೂಗಿಸಲು ಭಾರತ ಸರ್ಕಾರ ಬೇರೆ ಬೇರೆ ಪ್ರದೇಶಗಳಿಂದ ತೈಲ, ಅನಿಲಗಳ ಪೂರೈಕೆ ಪಡೆಯುತ್ತಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ

ಇದೇ ವೇಳೆ, ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಸಾಗಿಸಬೇಕಾಗಿರುವ ತೈಲ ಹಡಗುಗಳಿಗೆ ಇರಾನ್​ನ ಅನುಮತಿ ಸಿಕ್ಕಿದೆ. ಎರಡು ಹಡಗುಗಳು ಭಾರತದತ್ತ ಹೊರಟಿವೆ ಎನ್ನುವಂತಹ ಸುದ್ದಿ ಬಂದಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್​ನ ಸಚಿವರೊಂದಿಗೆ ಎಸ್ ಜೈಶಂಕರ್ ಮಾತುಕತೆಗಳನ್ನು ನಡೆಸಿದ್ದಾರೆ. ಈಗಲೇ ಆ ಸಂಬಂಧ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *