ಪ್ರೇಮಿಯ ಕೈಯಲ್ಲಿ ಗಂಡನ ಹತ್ಯೆ ಮಾಡಿಸಿದ ಮಹಿಳೆ, ಕೈಯಲ್ಲಿದ್ದ ಹಚ್ಚೆಯಿಂದ ಪ್ರಕರಣ ಭೇದಿಸಿದ ಪೊಲೀಸರು

ಪ್ರೇಮಿಯ ಕೈಯಲ್ಲಿ ಗಂಡನ ಹತ್ಯೆ ಮಾಡಿಸಿದ ಮಹಿಳೆ, ಕೈಯಲ್ಲಿದ್ದ ಹಚ್ಚೆಯಿಂದ ಪ್ರಕರಣ ಭೇದಿಸಿದ ಪೊಲೀಸರು

ಆಗ್ರಾ, ಏಪ್ರಿಲ್ 05: ಮಹಿಳೆಯೊಬ್ಬಳು ಪ್ರೇಮಿಯ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಏಪ್ರಿಲ್ 1 ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಶವವನ್ನು ಗುರುತಿಸುವುದು ಒಂದು ಸವಾಲಾಗಿತ್ತು, ಆದರೆ ಮುಂಗೈ ಮೇಲಿನ ಹಚ್ಚೆ ಉಳಿದುಕೊಂಡಿತ್ತು ಬಳಿಕ ಆತ ಲೋಕೇಂದ್ರನ ಶವ ಎಂದು ತಿಳಿದುಬಂದಿತ್ತು.

ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ನಾಪತ್ತೆಯಾದವರ ದೂರು ದಾಖಲಿಸಿದ್ದರು, ಲೋಕೇಂದ್ರ ರಾತ್ರಿ ಮನೆಗೆ ಹಿಂತಿರುಗಲಿಲ್ಲ ಮತ್ತು ಕೊನೆಯ ಬಾರಿಗೆ ಮಹೇಶ್ ಪ್ರಜಾಪತಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆಘಾತಕಾರಿ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅಪರಾಧದ ಸ್ಥಳದ ಬಳಿ ಪೊಲೀಸರು ಮದ್ಯದ ಬಾಟಲಿಗಳು ಮತ್ತು ಕೆಲವು ಕಾಗದದ ತುಂಡುಗಳನ್ನು ವಶಪಡಿಸಿಕೊಂಡರು.ಅದರಲ್ಲಿ  ಕೆಲವು ಪುರಾವೆಗಳು ದೊರೆತ ಬಳಿಕ ಲೋಕೇಂದ್ರನ ಪತ್ನಿ ಆಕೆಯ ಪ್ರಿಯಕರ ಮಹೇಶ್ ಪ್ರಜಾಪತಿ ಮತ್ತು ಆತನ ಸ್ನೇಹಿತ ಧರ್ಮವೀರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯಲ್ಲಿ ಲೋಕೇಂದ್ರನ ಕೊಲೆಗೆ ಕಾರಣವಾದ ಕರಾಳ ರಹಸ್ಯ ಬಯಲಾಯಿತು.ಲೋಕೇಂದ್ರನ ಪತ್ನಿಯೊಂದಿಗೆ ತಾನು ಬಹಳ ದಿನಗಳಿಂದ ಸಂಬಂಧ ಹೊಂದಿದ್ದಾಗಿ ಮಹೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಇತ್ತೀಚೆಗೆ, ಲೋಕೇಂದ್ರನಿಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡು ತನ್ನ ಹೆಂಡತಿಯ ಗದರಿಸಿದ್ದ, ನಂತರ ಇಬ್ಬರು ಲೋಕೇಂದ್ರನ ಕೊಲೆಗೆ ಸಂಚು ರೂಪಿಸಿದ್ದರು.

ಮತ್ತಷ್ಟು ಓದಿ: ಹೋಟೆಲ್​ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ: ಕೊಲೆ ಮಾಡುವಷ್ಟು ಆಗಿದ್ದೇನು?

ಲೋಕೇಂದ್ರ ಮನೆಯಿಂದ ಹೊರಟುಹೋದಾಗ, ಅವರ ಪತ್ನಿ ಮಹೇಶ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ದಾರಿಯಲ್ಲಿ ಮಹೇಶ್ ಲೋಕೇಂದ್ರನನ್ನು ಭೇಟಿಯಾಗಿ ಕರೆದೊಯ್ದಿದ್ದ. ಧರ್ಮವೀರ್ ಕೂಡ ಅವರೊಂದಿಗೆ ಸೇರಿಕೊಂಡಿದ್ದ. ಅವರು ಮದ್ಯ ಮತ್ತು ಊಟವನ್ನು ತೆಗೆದುಕೊಂಡು ಹೋಗಿ ಹೊಲದಲ್ಲಿ ಕುಡಿಯಲು ಪ್ರಾರಂಭಿಸಿದ್ದರು. ಮಹೇಶ್ ಮತ್ತು ಧರ್ಮವೀರ್ ಲೋಕೇಂದ್ರನನ್ನು ಉಸಿರುಗಟ್ಟಿಸಿದ್ದರು, ಕೂಡಲೇ ಲೋಕೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಅವರು ಲೋಕೇಂದ್ರಮ ದೇಹದ ಮೇಲೆ ಪೆಟ್ರೋಲ್ ಸುರಿದು, ಗೋಧಿಯ ಮೂಟೆಗಳಿಂದ ಮುಚ್ಚಿ ಬೆಂಕಿ ಹಚ್ಚಿದ್ದರು ಎಂದು ಮಹೇಶ್ ಪೊಲೀಸರಿಗೆ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *