
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ಟೀಂ ಇಂಡಿಯಾದ ಲವರ್ ಬಾಯ್ ಎಂದರೆ ತಪ್ಪಾಗಲಾರದು. ಮಗು ಮಾಡಿಕೊಂಡ ಬಳಿಕ ನತಾಶಾ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕೆಲವೇ ದಿನಗಳಲ್ಲಿ ಹೊಸ ಪ್ರೇಯಸಿಯನ್ನು ಹುಡುಕಿಕೊಂಡಿದ್ದ ಪಾಂಡ್ಯ, ಅವರೊಂದಿಗೆ ಹೊಸಜೀವನ ನಡೆಸಲು ಶುರು ಮಾಡಿದ್ದರು. ಆದಾಗ್ಯೂ ಪಾಂಡ್ಯ, ಹೊಸ ಪ್ರೇಯಸಿ ಮಹಿಕಾ ಶರ್ಮಾ ಅವರ ಬಗ್ಗೆ ಇದುವರೆಗೆ ಏನನ್ನು ಹೇಳಿರಲಿಲ್ಲ. ಆದರೆ ವಿಶ್ವಕಪ್ ಫೈನಲ್‌ನಲ್ಲಿ ಪಾಂಡ್ಯ, ಅಧಿಕೃತವಾಗಿ ಮಹಿಕಾ ನನ್ನ ಮಡದಿ ಎಂಬುದನ್ನು ಬಹಿರಂಗಪಡಿಸಿದರು.
ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆದ ಬಳಿಕ ಪ್ರಶಸ್ತಿ ಪ್ರಸ್ತುತಿಗಾಗಿ ಹಾಕಲಾಗಿದ್ದ ಸ್ಟೇಜ್ ಮೇಲೆಯೇ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಮಲಗಿದ್ದರು. 12 ಸೆಕೆಂಡ್ಗಳ ಈ ವಿಡಿಯೋದಲ್ಲಿ ಹಾರ್ದಿಕ್ ಹಾಗೂ ಮಹಿಕಾ ಸ್ಟೇಜ್ ಮೇಲೆಯೇ ಮಲಗಿ ಮಾತನಾಡುವುದನ್ನು ಕಾಣಬಹುದು.
ಇದಕ್ಕೂ ಮೊದಲು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ಓಡೋಡಿ ಬಂದಿದ್ದ ಮಹಿಕಾ, ಹಾರ್ದಿಕ್ರನ್ನು ಬಿಗಿದಪ್ಪಿ ಅವರ ಕೆನ್ನೆಗೆ ಸಿಹಿ ಮುತ್ತು ನೀಡಿದರು. ಇಬ್ಬರೂ ತ್ರಿವಣ ಧ್ವಜಗಳನ್ನು ಸುತ್ತಿಕೊಂಡು ಒಟ್ಟಿಗೆ ನೃತ್ಯ ಮಾಡಿದರು. ಪಂದ್ಯದ ನಂತರ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಹಾರ್ದಿಕ್, ‘ಮಹಿಕಾ ನನ್ನ ಪಾಲಿನ ಅದೃಷ್ಟ. ಅವರು ತಮ್ಮ ಜೀವನದಲ್ಲಿ ಬಂದಾಗಿನಿಂದ, ನನಗೆ ಎಲ್ಲವೂ ಒಳ್ಳೇಯದ್ದೆ ಆಗಿದೆ. ನನ್ನ ಯಶಸ್ಸು ಮುಂದುವರೆದಿದೆ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ