ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?

ಫರ್ಮಾನ್ ಖಾನ್ ಜೊತೆ ಮೊನಲಿಸಾ ಮದುವೆ: ತಂದೆ ಹೇಳಿದ್ದೇನು?

ಕುಂಭಮೇಳದ ಒಂದು ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದ ಮೊನಲಿಸಾ ಭೋಸ್ಲೆಯ (Monalisa Bhosle) ಮದುವೆ ಇತ್ತೀಚೆಗಷ್ಟೆ ಕೇರಳದಲ್ಲಿ ನಡೆದಿದ್ದು, ಅವರ ಕುಂಭಮೇಳದ ಚಿತ್ರದಷ್ಟೆ ಅವರ ಮದುವೆಯೂ ವೈರಲ್ ಆಗುತ್ತಿದೆ. ಮೊನಲಿಸಾ ಭೋಸ್ಲೆ, ಫರ್ಮಾನ್ ಖಾನ್ ಎಂಬುವರನ್ನು ಅವರ ಕುಟುಂಬದ ಇಚ್ಛೆಯ ವಿರುದ್ಧವಾಗಿ ಕೇರಳದಲ್ಲಿ ಮದುವೆ ಆಗಿದ್ದಾರೆ. ಇವರ ಮದುವೆಯ ಮುಂದಾಳತ್ವವನ್ನು ಕೇರಳದ ಕೆಲವು ರಾಜಕೀಯ ಮುಖಂಡರು ವಹಿಸಿಕೊಂಡಿದ್ದು ವಿಶೇಷ. ಮೊನಲಿಸಾ ಮತ್ತು ಫರ್ಮಾನ್ ಖಾನ್ ಅವರ ಮದುವೆಯನ್ನು ಕೆಲವರು ‘ಲವ್ ಜಿಹಾದ್’ ಎಂದು ಸಹ ಕರೆದಿದ್ದಾರೆ, ಆದರೆ ನೂತನ ವಧು-ವರರು ಇದನ್ನು ಅಲ್ಲಗಳೆದಿದ್ದಾರೆ. ಇದೀಗ ಮೊನಲಿಸಾ ತಂದೆ ಈ ಬಗ್ಗೆ ಮಾತನಾಡಿದ್ದಾರೆ.

ಮೊನಲಿಸಾ ತಂದೆ ಜಯಸಿಂಗ್ ಭೋಸ್ಲೆ ಹೇಳಿರುವಂತೆ, ‘ಕೆಲ ದಿನಗಳ ಹಿಂದಷ್ಟೆ ಕೆಲವರು ಅವರ ಮನೆಗೆ ಬಂದು ಕೇರಳದಲ್ಲಿ ನಟನೆ ತರಬೇತಿ ಹಾಗೂ ಸಿನಿಮಾ ಅಭಿನಯಕ್ಕಾಗಿ ತೆರಳುತ್ತಿದ್ದು, ಮೊನಲಿಸಾ ಅವರನ್ನು ಕಳಿಸಿಕೊಡುವಂತೆ ಕೇಳಿದರಂತೆ. ಇಂಥಹಾ ವಿಷಯಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಜಯಸಿಂಗ್ ಭೋಸ್ಲೆ ಸರಿಯೆಂದು ಒಪ್ಪಿಕೊಂಡಿದ್ದು ಮಾತ್ರವಲ್ಲದೆ ಅವರೂ ಸಹ ಮೊನಲಿಸಾ ಜೊತೆಗೆ ಕೇರಳಕ್ಕೆ ತೆರಳಿದ್ದರಂತೆ. ಮನೆಗೆ ಬಂದಿದ್ದ ಗುಂಪಿನಲ್ಲಿ ಮೊನಲಿಸಾ ಈಗ ಮದುವೆ ಆಗಿರುವ ಫರ್ಮಾನ್ ಖಾನ್ ಸಹ ಇದ್ದರಂತೆ. ಈಗ ನೋಡಿದರೆ ಇಬ್ಬರೂ ಮದುವೆ ಆಗಿದ್ದಾರೆ.

ಮದುವೆ ಆಗುವ ವಿಷಯ ಹೇಳಿದಾಗ ನಾನು ವಿರೋಧಿಸಿದೆ, ಊರಿಗೆ ಮರಳೋಣ ಎಂದು ಕೇಳಿದೆ ಆದರೆ ಅವರು ಕೇರಳ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೇಳಿದರು. ಪೊಲೀಸರು, ಮೊನಲಿಸಾ ಈಗಾಗಲೇ 18 ವರ್ಷ ವಯಸ್ಸಿನವರಾಗಿರುವ ಕಾರಣ ಅವರು ತಮಗೆ ಇಚ್ಛೀಸಿದವರನ್ನು ವಿವಾಹವಾಗಬಹುದು ಎಂದರು. ನಾವು ಏನೂ ಮಾಡಲಾಗಲಿಲ್ಲ’ ಎಂದಿದ್ದಾರೆ ಜಯಸಿಂಗ್ ಭೋಸ್ಲೆ.

ಇದನ್ನೂ ಓದಿ:ಕುಂಭಮೇಳ ‘ಮೊನಾಲಿಸಾ’ಳ ಮೊದಲ ಸಿನಿಮಾ ಬಂದ್, ನಿರ್ದೇಶಕನಿಂದ ಮೋಸ?

ಮೊನಲಿಸಾ ಅವರ ಚಿಕ್ಕಪ್ಪ ಮಾತನಾಡಿ, ‘ಸಿನಿಮಾ ಅವಕಾಶದ ನೆಪ ಹೇಳಿ ಕೆಲವರು ಆಕೆಯನ್ನು ಕೇರಳಕ್ಕೆ ಕರೆಸಿದ್ದರು. ನಾವು ಹೆಚ್ಚು ವಿದ್ಯಾವಂತರಲ್ಲ ಮತ್ತು ಇದೆಲ್ಲ ಹೇಗೆ ನಡೆಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ. ಬಹುಶಃ ಯಾರಾದರೂ ಆಕೆಯ ಮೇಲೆ ಪ್ರಭಾವ ಬೀರಿರಬಹುದು. ಆಕೆಯ ನಿರ್ಧಾರವನ್ನು ಒಪ್ಪಿಕೊಳ್ಳದೆ ಕುಟುಂಬಕ್ಕೆ ಬೇರೆ ದಾರಿಯಿಲ್ಲ’ ಎಂದಿದ್ದಾರೆ. ಅಲ್ಲದೆ, ‘ನಮಗೆ ಮೊದಲೇ ಹೇಳಿದ್ದರೆ ನಾವೇ ಮದುವೆಯನ್ನು ಏರ್ಪಾಡು ಮಾಡುತ್ತಿದ್ದೆವು’ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *