Headlines

ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದಕ್ಕೆ ಅಕ್ಕನ ಮಗನನ್ನೇ ಕೊಂದಿದ್ದ ಮಾವನೂ ಆತ್ಮಹತ್ಯೆಗೆ ಶರಣು! – Kannada News | Soladevanahalli Tragedy: Family’s Despair After Murder of Free Fire Addict Leads to Mass Suicide

ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದಕ್ಕೆ ಅಕ್ಕನ ಮಗನನ್ನೇ ಕೊಂದಿದ್ದ ಮಾವನೂ ಆತ್ಮಹತ್ಯೆಗೆ ಶರಣು!

ಬೆಂಗಳೂರು, ಫೆಬ್ರವರಿ 07: ನಗರದ ಸೋಲದೇವನಹಳ್ಳಿ (Bengaluru rural) ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ನಡೆದಿದೆ. ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಅಳಿಯನ ಕೊಂದ ಪಾಪ ತೊಳೆಯಲು ಮಾವನ ಟೆಂಪಲ್ ರನ್

ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕೆ ಇಡೀ ಕುಟುಂಬ ಕೆಲ ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಬಿಹಾರಕ್ಕೆ ಪ್ರವಾಸ ತೆರಳಿದ್ದ ನಾಗಪ್ರಸನ್ನ ಆತನ ತಾಯಿ ಸುಮಂಗಲಾ78, ಸಹೋದರಿ ಶಿಲ್ಪಾ48, ಶ್ರುತಾ 43 ಎಲ್ಲರೂ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶರೀರಗಳ ಬಳಿ ನಿದ್ದೆ ಮಾತ್ರೆಗಳು ಸಿಕ್ಕಿದ್ದು, ಈ ಮಾತ್ರೆಗಳ ಓವರ್ ಡೋಸ್​ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.

ನಡೆದಿದ್ದೇನು?

ಬಾಲಕನ ಸಾವಿಗೂ 8 ತಿಂಗಳು ಮೊದಲಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್​ನಲ್ಲಿ ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ವಾರದ ಹಿಂದೆ ಹಣ ಕೊಡುವಂತೆ ಮಾವನ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್, ಬಾಲಕನ ಕತ್ತು ಸೀಳಿ ಕೊಂದಿದ್ದ. ಅಷ್ಟೇ ಅಲ್ಲದೇ ತಾನೂ ಸಹ ಕೆರೆಗೆ ಹಾರಿ ಸಾಯಲು ಮುಂದಾಗಿದ್ದ ಘಟನೆ ಆಗಸ್ಟ್ 8ರಂದು ವರದಿಯಾಗಿತ್ತು.

ಇದನ್ನೂ ಓದಿ ಫ್ರೀಫೈರ್ ಗೇಮ್​​ಗೆ ಅಡಿಕ್ಟ್! ಅಕ್ಕನ ಮಗನನ್ನೇ ಕೊಂದ ಮಾವ

ಘಟನೆಯ ಬಳಿಕ ಹಣದ ಕೊರತೆಯಿಂದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಕಾಲ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದ. ಪೊಲೀಸರು ಆತನ ಮೇಲೆ ಎಫ್​ಐಆರ್ ದಾಖಲಿಸಿ ಜೈಲಿನಲ್ಲಿಟ್ಟಿದ್ದರು. ಬಳಿಕ ಆತನ ತಂಗಿ ಶಿಲ್ಪಾ ಬೇಲ್ ಮೂಲಕ ಅಣ್ಣನನ್ನು ಜೈಲಿನಿಂದ ಹೊರ ತಂದಿದ್ದಳು. ಅದರ ನಂತರ ಕುಟುಂಬ ಸಮೇತವಾಗಿ ಬಿಹಾರದ ಪ್ರವಾಸ ಕೈಗೊಂಡ ನಾಲ್ವರೂ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *