ಬರಲಿದೆಯಾ ‘ಧುರಂಧರ್ 3’? ಚಿತ್ರತಂಡದ ಪ್ರಮುಖ ಸದಸ್ಯ ಹೇಳಿದ್ದೇನು?

ಬರಲಿದೆಯಾ ‘ಧುರಂಧರ್ 3’? ಚಿತ್ರತಂಡದ ಪ್ರಮುಖ ಸದಸ್ಯ ಹೇಳಿದ್ದೇನು?

ಧುರಂಧರ್ 2’ (Dhurandhar 2) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿದೆ. 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಆಗಿದೆ. ಮೊದಲ ಭಾಗಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ‘ಧುರಂಧರ್ 2’ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ. ಕೋವಿಡ್ ಬಳಿಕ ಸೀಕ್ವೆಲ್​​ಗಳ ಅಬ್ಬರ ಜೋರಾಗಿದೆ. ಸಾಮಾನ್ಯ ಸಿನಿಮಾಗಳನ್ನು ಸಹ ಸೀಕ್ವೆಲ್ ಅಥವಾ ಫ್ರಾಂಚೈಸ್ ಸಿನಿಮಾ (ಸರಣಿ) ಮಾಡಲಾಗುತ್ತಿದೆ. ಹಾಲಿವುಡ್​​ನಲ್ಲಂತೂ ಈ ಸಿನಿಮಾ ಪ್ರಾಂಚೈಸ್ ಬಹಳ ಜನಪ್ರಿಯ. ಇದೀಗ ‘ಧುರಂಧರ್’ ಅನ್ನು ಸಹ ಸಿನಿಮಾ ಸರಣಿ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

‘ಧುರಂಧರ್ 3’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದು ಮಾತ್ರವೇ ಅಲ್ಲದೆ, ‘ಧುರಂಧರ್’ ಸಿನಿಮಾ ಸರಣಿ ಹಾಗೆಯೇ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಇದೀಗ ಸಿನಿಮಾ ತಂಡದ ಪ್ರಮುಖ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್ 3’ ಬರಲಿದೆಯೇ? ಹಾಗೂ ‘ಧುರಂಧರ್’ ಒಂದು ಪ್ರಾಂಚೈಸ್ ಸಿನಿಮಾ ಸರಣಿಯಾಗಿ ಮುಂದುವರೆಯಲಿದೆಯೇ ಎಂಬ ಬಗ್ಗೆ ಮಾತನಾಡಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ಕಾಸ್ಟಿಂಗ್ ನಿರ್ದೇಶಕರಾಗಿ ಕೆಲಸ ಮಾಡಿರುವ ಮುಖೇಶ್ ಚಾಬ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ‘ಧುರಂಧರ್ 3’ ಸಿನಿಮಾ ಬರುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ‘ಈ ಬಗ್ಗೆ ಸ್ಪಷ್ಟನೆ ನೀಡಲೇಬೇಕಾಗಿದೆ. ಅಂತಹದ್ದೇನೂ (ಧುರಂಧರ್ 3) ನಡೆಯುತ್ತಿಲ್ಲ. ಇವೆಲ್ಲಾ ಕೇವಲ ವದಂತಿಗಳು’ ಎಂದು ಸ್ಪಷ್ಟಪಡಿಸಿದ್ದಾರೆ. ‘ಒಂದು ವೇಳೆ ಅಧಿಕೃತ ಮಾಹಿತಿ ಇದ್ದರೆ ತಾವೇ ಅದನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

ನಿರ್ದೇಶಕ ಆದಿತ್ಯ ಧರ್ ಸಹ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘”ಧುರಂಧರ್ ಭಾಗ 1 ಮತ್ತು 2 ರ ಮೂಲಕ ನಾನು ಹೇಳಬೇಕಾದ ಕಥೆಯನ್ನು ಎಂಟು ಗಂಟೆಗಳ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಕೇವಲ ಹಣದ ಲಾಭಕ್ಕಾಗಿ ಕಥೆಯನ್ನು ಎಳೆಯಲು ನಾನು ಇಷ್ಟಪಡುವುದಿಲ್ಲ’ ಎಂದಿದ್ದಾರೆ. ಆ ಮೂಲಕ ತಾವು ‘ಧುರಂಧರ್ 3’ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಸ್ಟಿಂಗ್ ನಿರ್ದೇಶಕ ಮುಖೇಶ್, ರಣ್ವೀರ್ ಸಿಂಗ್ ಬಗ್ಗೆ ಸಹ ಮಾತನಾಡಿದ್ದು, ‘ಅವರೊಬ್ಬ ಅದ್ಭತ ನಟ, ಸಿನಿಮಾಕ್ಕಾಗಿ ಬಹಳ ಕಷ್ಟ ಪಡುತ್ತಾರೆ. ರಣ್ವೀರ್ ಅವರ ಆರಂಭದ ದಿನಗಳಲ್ಲಿ ನಾನು ಅವರ ಸ್ಕ್ರೀನ್ ಟೆಸ್ಟ್​​ಗಳನ್ನು ಸಹ ಮಾಡಿದ್ದೆ. ಅವರ ನಟನೆಯ ‘ಲುಟೇರಾ’ ಸಿನಿಮಾನಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದೆ, ಬಳಿಕ ‘83’ ಸಿನಿಮಾನಲ್ಲಿಯೂ ಕೆಲಸ ಮಾಡಿದ್ದೆ. ನಮ್ಮದು ಬಹಳ ಹಳೆಯ ಸ್ನೇಹ’ ಎಂದು ಹೇಳಿಕೋಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *