Headlines

ಬಾಬರಿ ಮಸೀದಿಯನ್ನು ಇನ್ನೆಂದೂ ನಿರ್ಮಿಸಲು ಸಾಧ್ಯವಿಲ್ಲ; ಸಿಎಂ ಯೋಗಿ ಆದಿತ್ಯನಾಥ್ ಪುನರುಚ್ಛಾರ – Kannada News | Babri Masjid wont be rebuilt till eternity CM Yogi adityanath says in Barabanki

ಬಾರಾಬಂಕಿ, ಫೆಬ್ರವರಿ 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬಾಬರಿ ಮಸೀದಿ ವಿಷಯದ ಬಗ್ಗೆ ತಮ್ಮ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಬಾಬರಿ ಮಸೀದಿಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. ಈ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ ಮತ್ತು ಮಾಡುವುದನ್ನಷ್ಟೇ ಹೇಳುತ್ತದೆ. ನಾವು ಹೇಳಿದಂತೆಯೇ ರಾಮಜನ್ಮ ಭೂಮಿಯಲ್ಲಿ ಬಾಲರಾಮನಿಗೆ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.

ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾನು ನೀಡಿದ ಭರವಸೆಗಳನ್ನು ಈಡೇರಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಯೋಧ್ಯೆಯ ಬಗ್ಗೆ ಬಿಜೆಪಿಯ ನಿಲುವನ್ನು ನೆನಪಿಸಿಕೊಂಡ ಅವರು, “ನಾವು ರಾಮಲಲ್ಲಾ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೆವು, ಇದರಲ್ಲಿ ಯಾವುದರೂ ಸಂದೇಹವಿದೆಯೇ? ತೀರ್ಪಿನ ದಿನಕ್ಕಾಗಿ ಕಾಯುತ್ತಿರುವವರು ಕೊಳೆತುಹೋಗುತ್ತಾರೆ. ಏಕೆಂದರೆ ಅಂತಹ ದಿನ ಎಂದಿಗೂ ಬರುವುದಿಲ್ಲ” ಎಂದು ಸಿಎಂ ಯೋಗಿ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದ ಸುತ್ತ ಆಲ್ಕೋಹಾಲ್, ಮಾಂಸಾಹಾರ ಸೇವನೆ ನಿಷೇಧ

ಭಾರತದ ಪರಂಪರೆ, ಅದ್ಭುತ ಸಂಪ್ರದಾಯಗಳು ಮತ್ತು ಸನಾತನ ಧರ್ಮದ ಬಗ್ಗೆ ಗೌರವವನ್ನು ಒತ್ತಿ ಹೇಳುತ್ತಾ, ಕೇಸರಿ ಧ್ವಜವು ಯಾವಾಗಲೂ ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಸನಾತನದ ಸಂಕೇತ ಎಂದು ಸಿಎಂ ಯೋಗಿ ಬಣ್ಣಿಸಿದ್ದಾರೆ.

ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಠಿಣ ಸಂದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಜನರು ನಿಯಮಗಳ ಪ್ರಕಾರ ಬದುಕಲು ಕಲಿಯಬೇಕು. ಕಾನೂನನ್ನು ಪಾಲಿಸುವವರು ಪ್ರಯೋಜನ ಪಡೆಯುತ್ತಾರೆ ಮತ್ತು ಅನುಸರಿಸದವರು ನರಕದತ್ತ ಸಾಗುತ್ತಾರೆ. ಕಾನೂನನ್ನು ಉಲ್ಲಂಘಿಸುವ ಮೂಲಕ ಸ್ವರ್ಗವನ್ನು ತಲುಪಬಹುದು ಎಂದು ನಂಬುವವರ ಕನಸುಗಳು ಎಂದಿಗೂ ನನಸಾಗುವುದಿಲ್ಲ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *