ಬೆಂಗಳೂರು: ಯುವತಿಗೆ ಕಿರುಕುಳ ಕೊಟ್ಟು ಹಲ್ಲೆಗೆ ಯತ್ನ, ಸಿಸಿಟಿವಿಲಿ ಸೆರೆಯಾಯ್ತು ಯುವಕನ ಅಟ್ಟಹಾಸದ ವಿಡಿಯೋ

ಬೆಂಗಳೂರು: ಯುವತಿಗೆ ಕಿರುಕುಳ ಕೊಟ್ಟು ಹಲ್ಲೆಗೆ ಯತ್ನ, ಸಿಸಿಟಿವಿಲಿ ಸೆರೆಯಾಯ್ತು ಯುವಕನ ಅಟ್ಟಹಾಸದ ವಿಡಿಯೋ

ಬೆಂಗಳೂರು, ಮಾರ್ಚ್ 15: ಬೆಂಗಳೂರಿನ ಇಂದಿರಾನಗರದಲ್ಲಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದೊಮ್ಮಲೂರು ಪ್ರದೇಶದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಯುವತಿಗೆ ಮನು ಶರ್ಮಾ ಎಂಬಾತ ಪ್ರತಿದಿನವೂ ಕಿರುಕುಳ ನೀಡುತ್ತಿದ್ದ. ತನ್ನೊಂದಿಗೆ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದ ಆರೋಪಿಯು, ಯುವತಿ ಅದಕ್ಕೆ ಒಪ್ಪದಿದ್ದಾಗ ಆಕೆಯೊಂದಿಗೆ ಗಲಾಟೆ ನಡೆಸಿದ್ದಾನೆ.

ಯುವತಿ ಮಾತ್ರವಲ್ಲದೆ, ಆಕೆಯ ಸ್ನೇಹಿತೆಯೊಂದಿಗೆ ಸಹ ಆರೋಪಿಯು ಜಗಳವಾಡಿ ಕಿರುಕುಳ ನೀಡಿದ್ದಾನೆ ಎಂಬ ಆರೋಪವಿದೆ. ಹಾಸ್ಟೆಲ್‌ನ ಸ್ನೂಕರ್ ಬೋರ್ಡ್ ಬಳಿ ನಡೆದ ಗಲಾಟೆಯ ವೇಳೆ ಆರೋಪಿಯು ಸ್ನೂಕರ್ ಸ್ಟಿಕ್ ಮತ್ತು ಬಾಲ್‌ಗಳನ್ನು ಎಸೆದು ಹಲ್ಲೆಗೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯ ಬಳಿಕ ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದ ಮೇಲೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯಾದ ಮನು ಶರ್ಮಾನನ್ನು ಬಂಧಿಸಿ , ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *