ಬ್ಲಡ್ ಟೆಸ್ಟ್‌ಗೆ ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದು ಉತ್ತಮವಾ ಅಥವಾ ಲ್ಯಾಬ್‌ಗೆ ಹೋಗುವುದೇ? ಇಲ್ಲಿದೆ ತಜ್ಞರ ಸಲಹೆ

ಬ್ಲಡ್ ಟೆಸ್ಟ್‌ಗೆ ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದು ಉತ್ತಮವಾ ಅಥವಾ ಲ್ಯಾಬ್‌ಗೆ ಹೋಗುವುದೇ? ಇಲ್ಲಿದೆ ತಜ್ಞರ ಸಲಹೆ

ಇಂದಿನ ಕಾಲದಲ್ಲಿ ಆರೋಗ್ಯ ತಪಾಸಣೆ (Health check-up) ಮಾಡಿಸಿಕೊಳ್ಳುವುದು ಬಹಳ ಸುಲಭ. ಅನೇಕ ಲ್ಯಾಬ್‌ಗಳು ಈಗ ಮನೆಬಾಗಿಲಿಗೇ ಬಂದು ಬ್ಲಡ್ ಸ್ಯಾಂಪಲ್ ಸಂಗ್ರಹಿಸುವ ಸೌಲಭ್ಯ ನೀಡುತ್ತಿವೆ. ಇದರಿಂದ ಹಲವರು ಲ್ಯಾಬ್‌ಗೆ ಹೋಗದೇ ಮನೆಯಲ್ಲೇ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಮನೆ ಸ್ಯಾಂಪಲ್ ಕಲೆಕ್ಷನ್ ಉತ್ತಮವೇ ಅಥವಾ ಲ್ಯಾಬ್‌ಗೆ ಹೋಗಿ ಪರೀಕ್ಷೆ ಮಾಡಿಸುವುದೇ ಉತ್ತಮವೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಹಾಗಾದರೆ ಮನೆ ಸ್ಯಾಂಪಲ್ ಕಲೆಕ್ಷನ ಮಾಡಿಸುವುದರಿಂದ ಆಗುವ ಲಾಭಗಳೇನು, ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳೇನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮನೆಯಲ್ಲಿಯೇ ಸ್ಯಾಂಪಲ್ ಕೊಡುವುದರಿಂದಾಗುವ ಲಾಭಗಳು:

ಸಾಮಾನ್ಯವಾಗಿ ಮನೆ ಸ್ಯಾಂಪಲ್ ಕಲೆಕ್ಷನ್‌ನ ಮುಖ್ಯ ಲಾಭವೆಂದರೆ ಸಮಯ ಉಳಿವು. ಲ್ಯಾಬ್ ದೂರದಲ್ಲಿರುವವರು, ಹಿರಿಯರು ಅಥವಾ ಹೊರಗೆ ಹೋಗಲು ಅಸಾಧ್ಯವಾಗಿರುವವರು ಈ ಸೇವೆಯನ್ನು ಸುಲಭವಾಗಿ ಬಳಸಬಹುದು. ಪ್ರಯಾಣದ ತೊಂದರೆ, ದೀರ್ಘ ಸಾಲಿನಲ್ಲಿ ನಿಲ್ಲುವ ಸಮಸ್ಯೆ ತಪ್ಪುತ್ತದೆ. ಆದರೆ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರು ಸರಿಯಾಗಿ ತರಬೇತಿ ಪಡೆದವರಾಗಿರಬೇಕು ಮತ್ತು ಲ್ಯಾಬ್ ಮಾನ್ಯತೆ ಪಡೆದಿರಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗುತ್ತದೆ.

ಇದನ್ನೂ ಓದಿ: ಶೀಘ್ರವೇ ಬರಲಿದೆ ಡೆಂಗ್ಯೂ ಲಸಿಕೆ! ಏನಿದರ ವಿಶೇಷತೆ? ಹೇಗೆ ಕಾರ್ಯನಿರ್ವಹಿಸುತ್ತೆ ತಿಳಿದುಕೊಳ್ಳಿ

ಲ್ಯಾಬ್‌ಗೆ ಹೋಗುವುದರಿಂದ ಸಿಗುವ ಲಾಭಗಳು:

ಲ್ಯಾಬ್‌ಗೆ ಹೋಗಿ ಸ್ಯಾಂಪಲ್ ನೀಡುವುದು ಹೆಚ್ಚು ವಿಶ್ವಾಸಾರ್ಹವಾಗಿದೆ. ಲ್ಯಾಬ್‌ನಲ್ಲಿ ಎಲ್ಲಾ ಅಗತ್ಯ ಯಂತ್ರೋಪಕರಣಗಳು ಮತ್ತು ತಜ್ಞರು ಇರುವುದರಿಂದ ಸ್ಯಾಂಪಲ್ ಗುಣಮಟ್ಟ ಉತ್ತಮವಾಗಿರುತ್ತದೆ. ಸ್ಯಾಂಪಲ್ ತಕ್ಷಣವೇ ಪ್ರಾಸೆಸ್ ಆಗುವುದರಿಂದ ಫಲಿತಾಂಶಗಳು ಹೆಚ್ಚು ನಿಖರವಾಗಿರುವ ಸಾಧ್ಯತೆ ಇದೆ. ಮನೆಯಿಂದ ಲ್ಯಾಬ್‌ಗೆ ಸ್ಯಾಂಪಲ್ ಸಾಗಿಸುವಾಗ ತಾಪಮಾನ ನಿಯಂತ್ರಣ ಮತ್ತು ಸರಿಯಾದ ಹ್ಯಾಂಡ್ಲಿಂಗ್ ಸಮಸ್ಯೆಗಳು ಎದುರಾಗಬಹುದು. ಆದರೆ ಲ್ಯಾಬ್‌ನಲ್ಲಿ ಈ ಸಮಸ್ಯೆಗಳು ಕಡಿಮೆ.

ಯಾವುದು ಉತ್ತಮ?

ಸಾಮಾನ್ಯ ಮತ್ತು ರೂಟೀನ್ ಟೆಸ್ಟ್‌ಗಳಿಗೆ ಮನೆ ಸ್ಯಾಂಪಲ್ ಕಲೆಕ್ಷನ್ ಸೂಕ್ತವಾಗಬಹುದು. ಆದರೆ HIV, ಇನ್ಫೆಕ್ಷನ್, ಥೈರಾಯ್ಡ್ ಅಥವಾ ಹೃದಯ ಸಂಬಂಧಿತ ಪ್ರಮುಖ ಪರೀಕ್ಷೆಗಳಿಗಾಗಿ ಲ್ಯಾಬ್‌ಗೆ ಹೋಗುವುದು ಉತ್ತಮ. ಅಂತಿಮವಾಗಿ, ಯಾವ ಪರೀಕ್ಷೆ ಮಾಡಿಸುತ್ತೀರಿ ಎಂಬುದರ ಮೇಲೆ ಆಯ್ಕೆ ಅವಲಂಬಿತವಾಗಿರುತ್ತದೆ. ಆದ್ರಂಗ್ ವಿಶ್ವಾಸಾರ್ಹ ಲ್ಯಾಬ್ ಆಯ್ಕೆಮಾಡಿ, ಸ್ಯಾಂಪಲ್ ತೆಗೆದುಕೊಳ್ಳುವ ತಜ್ಞರ ಸ್ವಚ್ಛತೆ ಗಮನಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *