Headlines

ಭಾರತದಲ್ಲಿ ಬೃಹತ್ ಎಐ ಕಂಪ್ಯೂಟಿಂಗ್ ಹಬ್, ಗಿ.ವ್ಯಾ. ಎಐ ಡಾಟಾ ಸೆಂಟರ್ ಫ್ಯಾಕ್ಟರಿ, ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂ – Kannada News | Indian companies to build big AI data center infrastructure in collab with Nvidia

ನವದೆಹಲಿ, ಫೆಬ್ರುವರಿ 18: ವಿಶ್ವದ ಅಗ್ರಮಾನ್ಯ ಎಐ ಚಿಪ್ ತಯಾರಕ ಕಂಪನಿ ಎನಿಸಿದ ಎನ್​ವಿಡಿಯಾ (Nvidia) ಹಲವು ಭಾರತೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಡಾಟಾ ಸೆಂಟರ್​ಗಳ ಇನ್​ಫ್ರಾಸ್ಟ್ರಕ್ಚರ್ ರೂಪಿಸಲು ಎನ್​ವಿಡಿಯಾದ ಶಕ್ತಿಶಾಲಿ ಚಿಪ್​ಗಳ ಬಳಕೆ ಆಗಲಿದೆ. ಯೋಟ್ಟಾ ಡಾಟಾ ಸರ್ವಿಸಸ್ (Yotta Data Services), ಎಲ್ ಅಂಡ್ ಟಿ (L&T, ಇ ಟು ಇ ನೆಟ್ವರ್ಕ್ಸ್ (E2E Networks), ನೆಟ್​ವೆಬ್ ಟೆಕ್ನಾಲಜೀಸ್ (Netweb Technologies) ಸಂಸ್ಥೆಗಳು ಎನ್​ವಿಡಿಯಾ ಜೊತೆ ಒಪ್ಪಂದ ಮಾಡಿಕೊಂಡಿವೆ.

ಯೋಟ್ಟಾದಿಂದ ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್

ಭಾರತದ ಡಾಟಾ ಸೆಂಟರ್ ಕಂಪನಿಯಾದ ಯೋಟ್ಟಾ ಡಾಟಾ ಸರ್ವಿಸಸ್ ಭಾರತದಲ್ಲಿ ಎಐ ಕಂಪ್ಯೂಟಿಂಗ್ ಹಬ್ ಅನ್ನು ನಿರ್ಮಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಎನ್​ವಿಡಿಯಾದ ಬ್ಲ್ಯಾಕ್​ವೆಲ್ ಅಲ್ಟ್ರಾ ಜಿಪಿಯುಗಳನ್ನು ಅಳವಡಿಸುವುದಾಗಿ ತಿಳಿಸಿದೆ. ಇದು ಏಷ್ಯಾದ ಅತಿದೊಡ್ಡ ಎಐ ಕಂಪ್ಯೂಟಿಂಗ್ ಹಬ್​ಗಳಲ್ಲಿ ಒಂದೆನಿಸಲಿದೆ. ಇದಕ್ಕಾಗಿ ಯೋಟಾ ಡಾಟಾ ಸರ್ವಿಸಸ್ ಸಂಸ್ಥೆ 2 ಬಿಲಿಯನ್ ಡಾಲರ್​ಗೂ ಅಧಿಕ ಹೂಡಿಕೆ ಮಾಡಲಿದ್ದು, ಆಗಸ್ಟ್​ನಿಂದ ಚಾಲನೆಗೊಳ್ಳುತ್ತದೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಎಲ್ ಅಂಡ್ ಟಿಯಿಂದ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿ

ಎಲ್ ಅಂಡ್ ಟಿ ಸಂಸ್ಥೆ ಎನ್​ವಿಡಿಯಾ ಸಹಯೋಗದೊಂದಿಗೆ ಗೀಗಾವ್ಯಾಟ್ ಮಟ್ಟದ ಎಐ ಡಾಟಾ ಸೆಂಟರ್ ಫ್ಯಾಕ್ಟರಿಯೊಂದನ್ನು ಸ್ಥಾಪಿಸಲಿದೆ. ಇದರಲ್ಲಿ ಎಐ ಸಜ್ಜಿತ ಡಾಟಾ ಸೆಂಟರ್ ಇನ್​ಫ್ರಾಸ್ಟ್ರಕ್ಚರ್, ಸುಧಾರಿತ ಕಂಪ್ಯೂಟಿಂಗ್ ಪ್ಲಾಟ್​ಫಾರ್ಮ್​ಗಳು, ಇಕೋಸಿಸ್ಟಂ ನಿರ್ಮಾಣ ವ್ಯವಸ್ಥೆಗಳು ಇರಲಿವೆ.

ಎಲ್ ಅಂಡ್ ಟಿ ಸಂಸ್ಥೆ ಚೆನ್ನೈನಲ್ಲಿ 300 ಎಕರೆ ಪ್ರದೇಶದಲ್ಲಿ ಒಂದು ಡಾಟಾ ಸೆಂಟರ್ ಹೊಂದಿದೆ. ಅದು ಸದ್ಯಕ್ಕೆ 30 ಮೆಗಾವ್ಯಾಟ್ ಕೆಪಾಸಿಟಿಯ ಹೊಂದಿದ್ದು, ಮುಂದೆ ಅದನ್ನು ಗಿಗಾವ್ಯಾಟ್ ಮಟ್ಟಕ್ಕೆ ಏರಿಸುವ ಯೋಜನೆ ಇದೆ. ಅದಕ್ಕಾಗಿ ಎನ್​ವಿಡಿಯಾದ ಜಿಪಿಯು ಕ್ಲಸ್ಟರ್ ಅನ್ನು ನಿಯೋಜಿಸಲಿದೆ. ಇನ್ನು, ಮುಂಬೈನಲ್ಲಿ ಒಂದು ಡಾಟಾ ಸೆಂಟರ್ ನಿರ್ಮಾಣ ಆಗುತ್ತಿದ್ದು, ಅದರಲ್ಲಿ 40 ಮೆಗಾವ್ಯಾಟ್ ಸಾಮರ್ಥ್ಯ ಇರಲಿದೆ. ಇ2ಇ ನೆಟ್ವರ್ಕ್ಸ್ ಸಂಸ್ಥೆಯು ಟಿಐಆರ್ ಕ್ಲೌಡ್ ಕಂಪ್ಯೂಟ್ ಪ್ಲಾಟ್​ಫಾರ್ಮ್​ನಲ್ಲಿ ಎನ್​ವಿಡಿಯಾ ಬ್ಲ್ಯಾಕ್​ವೆಲ್ ಜಿಪಿಯು ಕ್ಲಸ್ಟರ್ ನಿರ್ಮಿಸುತ್ತಿದೆ.

ಇದನ್ನೂ ಓದಿ: ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ

ನೆಟ್ವೆಬ್ ಟೆಕ್ನಾಲಜೀಸ್​ನಿಂದ ಎಐ ಸೂಪರ್ ಕಂಪ್ಯೂಟಿಂಗ್ ಸಿಸ್ಟಂಗಳು

ನೆಟ್​ವೆಬ್ ಟೆಕ್ನಾಲಜೀಸ್ ಸಂಸ್ಥೆ ಭಾರತದಲ್ಲಿ ಎಐ ಸೂಪರ್​ಕಂಪ್ಯೂಟಿಂಗ್ ಸಿಸ್ಟಂಗಳನ್ನು ನಿರ್ಮಿಸಲಿದೆ. ಇದಕ್ಕಾಗಿ ಎನ್​ವಿಡಿಯಾದ ಸೋವರಿನ್ ಎಐ ಡೆವಲಪ್ಮೆಂಟ್ ಟೂಲ್​ಗಳನ್ನು ಬಳಸಲಿದೆ. ವಿಶ್ವದರ್ಜೆಯ ಎಐ ಹಾರ್ಡ್​ವೇರ್​ಗಳನ್ನು ನಿರ್ಮಿಸುವ ಸಂಸ್ಥೆಯಾಗಿ ನೆಟ್​ವೆಬ್ ಪರಿವರ್ತನೆಗೊಳ್ಳುತ್ತಿರುವುದು ಗಮನಾರ್ಹ. ಈ ಬೆಳವಣಿಗೆ ಆಗುತ್ತಲೇ ನೆಟ್​ವೆಬ್ ಟೆಕ್ನಾಲಜೀಸ್​ನ ಷೇರುಗಳಿಗೆ ಪೇಟೆಯಲ್ಲಿ ಬಹಳ ಬೇಡಿಕೆ ಕುದುರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *