ಸ್ಫೋಟಗೊಂಡ ವಸ್ತು, ಬಾಲಕನ ಕಾಲಿಗೆ ಗಾಯ
ಮಂಗಳೂರು, ಫೆಬ್ರವರಿ 19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು (explosion) ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆಟ ಆಡುತ್ತಿದ್ದ ವೇಳೆ ಪತ್ತೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್ ಅಂದುಕೊಂಡು ಬ್ಯಾಟ್ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಸದ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.