ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತವೆ?

ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತವೆ?

ಪ್ರೋಟೀನ್ (Protein) ದೇಹದ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಪೋಷಕಾಂಶವಾಗಿದೆ. ಇದು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಸಮಾನವಾಗಿ ಮುಖ್ಯವಾಗಿದ್ದು ಇದರ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ದೊಡ್ಡವರಂತೆ ಮಕ್ಕಳಲ್ಲಿಯೂ ಈ ಕೊರತೆ ಕಂಡುಬರುತ್ತದೆ. ಆದರೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಲ್ಲಿ ಪ್ರೋಟೀನ್ ಕೊರತೆಯ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಏಮ್ಸ್ ದೆಹಲಿಯ ಪೀಡಿಯಾಟ್ರಿಕ್ ವಿಭಾಗದ ಡಾ. ಹಿಮಾಂಶು ಭದಾನಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಬೆಳೆಯುತ್ತಿರುವ ಮಕ್ಕಳಿಗೆ ಪ್ರೋಟೀನ್ ಅತ್ಯಂತ ಮುಖ್ಯ. ಇದು ದೇಹದಲ್ಲಿ ಹೊಸ ಸೆಲ್‌ಗಳ ನಿರ್ಮಾಣಕ್ಕೂ ಮತ್ತು ಸ್ನಾಯುಗಳ ಬೆಳವಣಿಗೆಗೂ ಸಹಾಯಕವಾಗಿರುತ್ತದೆ. ಜೊತೆಗೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ ಪ್ರೋಟೀನ್ ಕೊರತೆಯಾದಾಗ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ, ಅದಕ್ಕೆ ಕಾರಣಗಳೇನು, ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳು ಯಾವವು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರೋಟೀನ್ ಕೊರತೆಯಾದಾಗ ಕಂಡು ಬರುವ ಲಕ್ಷಣಗಳು:

ಮಕ್ಕಳ ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ, ಅವರ ಸ್ನಾಯುಗಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ತೂಕವು ಇತರ ಮಕ್ಕಳಿಗಿಂತ ಕಡಿಮೆ ಇರುತ್ತದೆ ಮತ್ತು ಎತ್ತರವು ಸಹ ಸರಿಯಾಗಿ ಹೆಚ್ಚುವುದಿಲ್ಲ. ರೋಗನಿರೋಧಕ ಶಕ್ತಿ ಕುಗ್ಗುವುದರಿಂದ ಮಕ್ಕಳಿಗೆ ಆಗಾಗ ಕಾಯಿಲೆಗಳು ಬರುವುದು ಸಾಮಾನ್ಯ. ಅಷ್ಟೇಅಲ್ಲ, ಚರ್ಮದ ಗುಣಮಟ್ಟ ಹಾಳಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆಯೂ ಕಾಣಿಸಬಹುದು. ಮಕ್ಕಳು ಬೇಗನೆ ದಣಿವಾಗುವುದು ಹಾಗೂ ದುರ್ಬಲತೆ ಅನುಭವಿಸುವುದು ಕೂಡ ಪ್ರಮುಖ ಲಕ್ಷಣಗಳಾಗಿವೆ.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು!

ಪ್ರೋಟೀನ್ ಕೊರತೆಗೆ ಕಾರಣಗಳು:

ಡಾ. ಹಿಮಾಂಶು ಅವರ ಪ್ರಕಾರ, ಮಕ್ಕಳಲ್ಲಿ ಪ್ರೋಟೀನ್ ಕೊರತೆಯಾಗಲು ಮುಖ್ಯ ಕಾರಣ ಸರಿಯಾದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳದಿರುವುದು. ಮಕ್ಕಳಿಗೆ ಹಸಿರು ತರಕಾರಿ, ಧಾನ್ಯಗಳು ಮತ್ತು ಹಣ್ಣುಗಳನ್ನು ತಿನ್ನಿಸದಿದ್ದರೆ ಈ ಕೊರತೆ ಉಂಟಾಗಬಹುದು. ಇದು ಯಾವುದೇ ಮಕ್ಕಳಲ್ಲಿಯೂ ಕಂಡುಬರಬಹುದಾದ ಸಮಸ್ಯೆಯಾಗಿದೆ. ಹಾಗಾಗಿ ಮಕ್ಕಳಿಗೆ ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳನ್ನು ಮತ್ತು ಆದಷ್ಟು ಹಾಲು, ಮೊಸರು, ಮೊಟ್ಟೆಗಳ ಸೇವನೆ ಮಾಡಲು ನೀಡಿ. ಜೊತೆಗೆ ಮಕ್ಕಳಿಗೆ ಚಿಕನ್ ಮತ್ತು ಮೀನು ಕೂಡ ಉತ್ತಮ ಪ್ರೋಟೀನ್ ಮೂಲಗಳಾಗಿವೆ.

ಯಾರಿಗೆ ಎಷ್ಟು ಪ್ರೋಟೀನ್ ಅವಶ್ಯಕ:

  • 1ರಿಂದ 3 ವರ್ಷದ ಮಕ್ಕಳಿಗೆ ದಿನಕ್ಕೆ ಸುಮಾರು 13 ಗ್ರಾಂ ಪ್ರೋಟೀನ್ ಅಗತ್ಯ.
  • 4ರಿಂದ 8 ವರ್ಷದ ಮಕ್ಕಳಿಗೆ 19- 20 ಗ್ರಾಂ ಪ್ರೋಟೀನ್ ಬೇಕಾಗುತ್ತದೆ.
  • 9ರಿಂದ 13 ವರ್ಷದ ಮಕ್ಕಳಿಗೆ ದಿನಕ್ಕೆ ಸುಮಾರು 34 ಗ್ರಾಂ ಪ್ರೋಟೀನ್ ಅಗತ್ಯವಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *