ಊಟ ಮಾಡಿಲ್ಲಾ ಅಂದ್ರು ಮೊಬೈಲ್, ಹಠ ಮಾಡಿದ್ರು ಮೊಬೈಲ್, ಮಲಗೋದಕ್ಕೂ ಮೊಬೈಲ್, ಕೈ ಕಟ್ಟಿ ಕೂರೋದಕ್ಕೂ ಮೊಬೈಲ್. ಹೀಗೆ ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಕೊಟ್ಟು ಇವತ್ತು ಮೊಬೈಲ್ ಅಡಿಕ್ಷನ್ ಮಕ್ಕಳಲ್ಲಿ ಹೆಚ್ಚಾಗಿದೆ. ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮಗುಗೆ ಊಟ ಮಾಡಿಸೋದ್ರಿಂದ ಮಲಗಿಸೋವರೆಗೂ ಎಲ್ಲದಕ್ಕೂ ಮಕ್ಕಳ ಕೈನಲ್ಲಿ ಮೊಬೈಲ್ ಕೊಟ್ಟು ಬಿಡ್ತಾರೆ ಪೋಷಕರು. ಇದೀಗ ಮಾಡಿದ್ದೋಣ ಮರಾಯ ಅನ್ನೋ ಹಾಗೆ ಮಕ್ಕಳ ಮೊಬೈಲ್ ಅಡಿಕ್ಷನ್ (mobile addiction) ಪೋಷಕರಿಗೆ ಗೋಳು ಕೊಡುತ್ತಿದೆ. ಇನ್ನು ಮಕ್ಕಳನ್ನು ಮೊಬೈಲ್ ಅಡಿಕ್ಷನ್ನಿಂದ ಪೋಷಕರು ಏನು ಮಾಡಬೇಕು ಎನ್ನುವುದನ್ನು ಡಾಕ್ಟರ್ ಸೌಜನ್ಯ ಮಾಹಿತಿ ನೀಡಿದ್ದಾರೆ ತಿಳಿದುಕೊಳ್ಳಿ.