
ಮಡಿಕೇರಿ, ಮಾರ್ಚ್ 31: ಕೊಡಗು ಜಿಲ್ಲೆಯಲ್ಲಿ ದೈವ ಮತ್ತು ದೈವ ನರ್ತಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬೆನ್ನಲ್ಲೇ ಆರೋಪಿ ಫೈಜಲ್ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ವಿವಾಹವೊಂದರ ನಂತರ ಖಾಸಗಿಯಾಗಿ ಮಾತನಾಡಿದ ಮಾತುಗಳು ವೈರಲ್ ಆಗಿಬಿಟ್ಟವು. ಇದರಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ತಾವು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.