Headlines

ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್​? – Kannada News | 19 Year Old Girl Found Dead in Dharwad; Murder Suspected

ಧಾರವಾಡ, ಜನವರಿ 21: ನಗರದ ಹೊರವಲಯದಲ್ಲಿ ಯುವತಿಯೋರ್ವಳ ಶವ (Dead Body)  ಪತ್ತೆಯಾಗಿದ್ದು, ಮೃತಳನ್ನು ಗಾಂಧಿ ಚೌಕ್ ಬಡಾವಣೆ ನಿವಾಸಿ ಝಕಿಯಾ ಮುಲ್ಲಾ(19) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ ಝಕಿಯಾ ಮುಲ್ಲಾ ಇಂದು ಮನಸೂರು ರಸ್ತೆಯ ವಿನಯ್ ಡೈರಿ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಹತ್ಯೆ ಮಾಡಿ ಯುವತಿ ಶವ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿವಿಲ್ ಆಸ್ಪತ್ರೆ ಮುಂದೆ ಕುಟುಂಬ ಮತ್ತು ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿದ್ದು, ಯಾರೋ ಕರೆದುಕೊಂಡು ಹೋಗಿಯೇ ಕೊಲೆ ಮಾಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿ ಶೂಟೌಟ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಝಕಿಯಾ ತಂದೆ ಯೂನುಸ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದು, ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದ ಝಕಿಯಾ ಮುಲ್ಲಾ ಮರಳಿ ಬಾರದ ಹಿನ್ನೆಲೆ ಕುಟುಂಬಸ್ಥರು ದೂರು ನೀಡಿದ್ದರು. ಧಾರವಾಡ ಸಾಧನಕೇರಿ ನಿವಾಸಿಯಾಗಿರೋ ಯುವಕನ ಜೊತೆ ಮುಂದಿನ ತಿಂಗಳು ಝಕಿಯಾ ನಿಶ್ಚಿತಾರ್ಥಕ್ಕೂ ಕುಟುಂಬ ತಯಾರಿ ನಡೆಸಿತ್ತು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *