ಮಹಿಳೆಯರ ಒಳ ಉಡುಪು ಕದಿಯುತ್ತಿದ್ದದ್ದು ಸೈಕೋ ಪಾತ್​​ ಅಲ್ಲ, ಖಾಸಗಿ ಕಂಪನಿ ಉದ್ಯೋಗಿ

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದದ್ದು ಸೈಕೋ ಪಾತ್​​ ಅಲ್ಲ, ಖಾಸಗಿ ಕಂಪನಿ ಉದ್ಯೋಗಿ

ಚಾಮರಾಜನಗರ, ಏಪ್ರಿಲ್​ 10: ಕಳೆದ ಎರಡು-ಮೂರು ತಿಂಗಳಿಂದ ಮಹಿಳೆಯರ ನಿದ್ದೆಗೆಡಿಸಿದ್ದ ಸೈಕೋ ಪಾತ್​ನನ್ನು (Psychopath) ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಒಳ ಉಡುಪು ಕಳವು (Female Innerwear) ಮಾಡುತ್ತಿದ್ದ. ದೂರು ನೀಡಿದರೂ ಕ್ಯಾರೆ ಎನ್ನದ ಪೊಲೀಸರು ಟಿವಿ9 ನಲ್ಲಿ ಸುದ್ದಿ ಬಿತ್ತರಿಸಿದ 24 ಗಂಟೆ ಒಳಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಮೃತ್ ಅಲಿಯಾಸ್ ಅಮೃತ್ ಆಚಾರ್ಯ ಬಂಧಿತ ವ್ಯಕ್ತಿ.

ರಾತ್ರಿ 1 ಗಂಟೆಯ ಸಮಯ. ಎಲ್ಲರೂ ಗಾಢ ನಿದ್ದೆಗೆ ಜಾರಿರುತ್ತಾರೆ. ಊರೆಲ್ಲಾ ಮಲಗಿದ್ದರೆ ಓರ್ವ ಮಾತ್ರ ಮನೆಯಿಂದ ಆಚೆ ಬರ್ತಾಯಿದ್ದ. ಮನೆ ಮುಂದೆ ಒಗೆದು ಒಣ ಹಾಕಿದ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ. ಚಾಮರಾಜನಗರದ ಹೌಸಿಂಗ್ ಬೋರ್ಡ್​ನಲ್ಲಿ ಘಟನೆ ನಡೆದಿತ್ತು. ಸೈಕೋ ಪಾತ್​ನ ಕೃತ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಆತನಿಗೆ ಮಹಿಳೆಯರ ಒಳ ಉಡುಪು ಮಾತ್ರ ಬೇಕು: ನಮಗೆ ತುಂಬಾ ಭಯ ಆಗ್ತಿದೆ ಎಂದ ಗೃಹಿಣಿ

ಮನೆಯ ಮಾಲೀಕ ಗಣೇಶ್ ಪ್ರಸಾದ್ ಸಿಸಿ ಕ್ಯಾಮೆರಾದಲ್ಲಿ ಸೆರೆ ವಿಡಿಯೋ ಸಮೇತ ಲಿಖಿತ ದೂರು ನೀಡಿದ್ದರು. ಪಟ್ಟಣ ಠಾಣಾ ಪೊಲೀಸರು ಎಫ್​ಐಆರ್​ ಮಾಡಿ ಸುಮ್ಮನಾಗಿದ್ದಾರೆ. ಯಾವಾಗ ಟಿವಿ9 ನಲ್ಲಿ ಸುದ್ದಿ ಬಿತ್ತರವಾಯಿತೋ ಅಲರ್ಟ್ ಆದ ಪೊಲೀಸರು, ಇದೀಗ ಸೈಕೋ ಪಾತ್​ನನ್ನ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಲ್ಯಾಬ್ ಟೆಕ್ನಿಷಿಯನ್

ಇನ್ನು ಬಂಧಿತ ಅಮೃತ್​​ ಕೂಡ ಹೌಸಿಂಗ್ ಬೋರ್ಡ್ ನಿವಾಸಿ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. 10ನೇ ತರಗತಿಯಲ್ಲಿ ಓದುವಾಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ರಾತ್ರಿ ಆದರೆ ಸಾಕು ಮನೆಯ ಅಂಗಳದಲ್ಲಿ ಮಹಿಳೆಯರ ಒಳ ಉಡುಪು ಹಾಕಿಕೊಂಡು ಓಡಾಡುತ್ತಿದ್ದ. ದಿನ ಕಳೆದಂತೆ ರಾತ್ರಿ ಅಕ್ಕ-ಪಕ್ಕದ ಮನೆಗೆ ನುಗ್ಗುವುದು ಒಗೆದು ಒಣ ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನ ಕಳ್ಳತನ ಮಾಡಿಕೊಂಡು ಬಂದು ಹಾಕಿಕೊಂಡು ವಿಕೃತಿ ಮೆರೆಯುತ್ತಿದ್ದ. ಈ ವಿಚಾರ ತಿಳಿದ ಮಹಿಳೆಯರು, ಯುವತಿಯರು ಅಕ್ಷರಶಃ ಬೆಚ್ಚಿಬಿದ್ದಿದ್ದರು.

ಇದನ್ನೂ ಓದಿ: ಚಾಮರಾಜನಗರ: ಮಹಿಳೆಯರ ಒಳ ಉಡುಪುಗಳನ್ನೇ ಕದ್ದು ಧರಿಸುವ ಸೈಕೋ! ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಕೃತಿಯ ದೃಶ್ಯ

ಸದ್ಯ ಟಿವಿ9 ಸುದ್ದಿ ಪ್ರಸಾರವಾದ 24 ಗಂಟೆಯಲ್ಲೇ ಆರೋಪಿಯ ಕೈಗೆ ಕೋಳ ಬಿದ್ದಿದೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ಆತನನ್ನು ಮಾನಸಿಕ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *