ಮಾವಿನ ಹಣ್ಣಿನಲ್ಲಿ ಬರ್ತಿದೆ ಕೆಮಿಕಲ್ ವಿಷ; ಹೈದರಾಬಾದ್ ಪೊಲೀಸರಂತೆ ಬೆಂಗಳೂರು ಪೊಲೀಸರೂ ಜಾಗೃತಿ ಮೂಡಿಸುವರೇ?

ಮಾವಿನ ಹಣ್ಣಿನಲ್ಲಿ ಬರ್ತಿದೆ ಕೆಮಿಕಲ್ ವಿಷ; ಹೈದರಾಬಾದ್ ಪೊಲೀಸರಂತೆ ಬೆಂಗಳೂರು ಪೊಲೀಸರೂ ಜಾಗೃತಿ ಮೂಡಿಸುವರೇ?

ಹೈದರಾಬಾದ್, ಏ.4 : ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಲಗ್ಗೆ ಇಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ. ಆದರೆ, ಮಾವಿನ ಹಣ್ಣು ಸವಿಯೋ ಅಥವಾ ವಿಷವೋ ಎಂಬ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಿ. ಕೇವಲ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ನಂತಹ ಮಾರಕ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾಗಿಸುತ್ತಿದ್ದಾರೆ. ಈ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ (IPS) ಅವರು ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಇದೇ ಬೆಂಗಳೂರಿನಲ್ಲೂ ಕೂಡ ಇಂತಹ ಮಾವಿನ ಹಣ್ಣುಗಳು ಮಾರಾಟವಾಗುತ್ತಿದೆ. ಹೈದರಾಬಾದ್​​​ ಪೊಲೀಸರಂತೆ ಬೆಂಗಳೂರಿನ ಪೊಲೀಸರು ಕೂಡ ಈ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸಬೇಕಾಗಿದೆ.

ರಸ್ತೆ ಬದಿಯ ಅಂಗಡಿಗಳಲ್ಲಿ ಅತಿ ಸುಂದರವಾಗಿ, ಹೊಳೆಯುವ ಚಿನ್ನದ ಬಣ್ಣದಲ್ಲಿ ಕಾಣುವ ಮಾವಿನ ಹಣ್ಣುಗಳನ್ನು ಕಂಡ ತಕ್ಷಣ ಖರೀದಿಸಬೇಡಿ. ಇವು ಹೊರನೋಟಕ್ಕೆ ಹಳದಿಯಾಗಿದ್ದರೂ, ಒಳಗಡೆ ಕಚ್ಚಾ ಮತ್ತು ವಿಷಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ಹಣ್ಣಾದ ಮಾವು ಎಂದಿಗೂ ಏಕರೂಪದ ಬಣ್ಣವನ್ನು ಹೊಂದಿರುವುದಿಲ್ಲ ಎಂಬುದನ್ನು ನೆನಪಿಡಿ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​​;

ರಾಸಾಯನಿಕ ಬಳಸಿ ಹಣ್ಣು ಮಾಡಿದ ಮಾವಿನ ಸೇವನೆಯಿಂದ ತಕ್ಷಣವೇ ಈ ಕೆಳಗಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು:

ಗಂಟಲು ಉರಿ ಮತ್ತು ವಾಕರಿಕೆ.

ವಾಂತಿ ಮತ್ತು ಭೇದಿ.

ದೀರ್ಘಕಾಲದ ಬಳಕೆಯಿಂದ ನರಮಂಡಲದ ಹಾನಿ ಹಾಗೂ ಉಸಿರಾಟದ ತೊಂದರೆ.

ಗುರುತಿಸುವುದು ಹೇಗೆ?

ಬಣ್ಣ: ಅತಿಯಾದ ಏಕರೂಪದ ಹಳದಿ ಬಣ್ಣವಿದ್ದರೆ ಜಾಗರೂಕರಾಗಿರಿ.

ವಾಸನೆ: ಹಣ್ಣಿನಿಂದ ರಾಸಾಯನಿಕ ವಾಸನೆ ಬರುತ್ತಿದ್ದರೆ ಅದು ಅಪಾಯಕಾರಿ.

ಬೆಕಿಂಗ್ ಸೋಡಾ ಪರೀಕ್ಷೆ: ಹಣ್ಣನ್ನು ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ತೊಳೆದಾಗ ಅನಿರೀಕ್ಷಿತವಾಗಿ ಬಣ್ಣ ಬದಲಾದರೆ ಅದು ಕೆಮಿಕಲ್ ಹಣ್ಣು ಎಂದು ತಿಳಿಯಿರಿ.

ಆರ್ಗ್ಯಾನಿಕ್ ಲೇಬಲ್: ‘ಆರ್ಗ್ಯಾನಿಕ್’ ಎಂದು ಮಾರಾಟ ಮಾಡುವ ಹಣ್ಣುಗಳ ಅಸಲಿಯತ್ತನ್ನು ಕೂಡ ಪರಿಶೀಲಿಸಿ.

ಇದನ್ನೂ ಓದಿ: ವಿಕೃತ ಕಾಮಿಯ ಅಟ್ಟಹಾಸ: ‘ನನಗೆ ಎಚ್‌ಐವಿ ಇದೆ’ ಎಂದಿದ್ದಕ್ಕೆ ಮಹಿಳೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!

ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ವ್ಯಾಪಾರಿಗಳ ವಿರುದ್ಧ ಹೈದರಾಬಾದ್ ಪೊಲೀಸ್ ಇಲಾಖೆಯ H-FAST ತಂಡವು ತೀವ್ರ ನಿಗಾ ವಹಿಸಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರಿಗೆ ಮನವಿಯನ್ನು ಕೂಡ ಪೊಲೀಸ್​​ ಇಲಾಖೆ ಮಾಡಿದೆ. ನಿಮ್ಮ ಗಮನಕ್ಕೆ ಕಲಬೆರಕೆ ಅಥವಾ ರಾಸಾಯನಿಕಯುಕ್ತ ಮಾವಿನ ಹಣ್ಣುಗಳ ಮಾರಾಟ ಬಂದಲ್ಲಿ ಕೂಡಲೇ ಡಯಲ್ 100 ಅಥವಾ H-FAST ಸಹಾಯವಾಣಿ 8712661212 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹೇಳಿದ್ದಾರೆ. ಅದಕ್ಕಾಗಿ “ಜಾಗೃತ ಹೈದರಾಬಾದ್ – ಸುರಕ್ಷಿತ ಹೈದರಾಬಾದ್” ಎಂಬ ಘೋಷವಾಕ್ಯದೊಂದಿಗೆ ಸಜ್ಜನರ್ ಅವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *