
ಯಾದಗಿರಿ, ಮಾರ್ಚ್ 10: ಯಾದಗಿರಿ ಜಿಲ್ಲೆಯ ಪ್ರತಿಭಾವಂತ ಯುವಕ ಸಂದೀಪ್ ಬಾಡದ್ ಅವರು ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 89ನೇ ರ್ಯಾಂಕ್ ಗಳಿಸಿ, ತಮ್ಮ ಹುಟ್ಟೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ ತಮ್ಮ ಯುಪಿಎಸ್ಸಿ ಸಾಧನೆ ಬಗ್ಗೆ ಟಿವಿ9 ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಷಕರಿಗೆ ಯುಪಿಎಸ್ಸಿ ಬಗ್ಗೆ ಅರಿವೇ ಇರಲಿಲ್ಲ ಎಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಂದೀಪ್ ಹೇಳಿದ್ದಾರೆ. ಅಲ್ಲದೆ, ತಮ್ಮ ಯಶಸ್ಸಿನ ಸೀಕ್ರೆಟ್ ತಿಳಿಸಿದ ಅವರು, ಕನಸು ಕಾಣಿ, ಪ್ರಯತ್ನ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂಬ ಸಂದೇಶ ನೀಡಿದ್ದಾರೆ.