ಊಟ ಮಾಡುವಾಗ ಗಮನ ಆಹಾರದ ಮೇಲೆ ಇರಬೇಕು, ಊಟವನ್ನು ಆನಂದಿಸಿ ನಿಧಾನವಾಗಿ ತಿನ್ನಬೇಕು ಇದರಿಂದ ಆರೋಗ್ಯವೂ (health) ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಇದೇ ರೀತಿ ಊಟ ಮಾಡ್ತಿದ್ರು. ಆದ್ರೆ ಇಂದು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರೂ ಊಟ ಮಾಡುವಾಗ ಟಿವಿ, ಮೊಬೈಲ್ ನೋಡೇ ನೋಡುತ್ತಾರೆ. ಹೀಗೆ ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದಂತೆ. ನೀವು ಕೂಡ ಇದೇ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ವಿಡಿಯೋ ಸ್ಕ್ರೋಲ್ ಮಾಡುತ್ತಾ ಊಟ ಮಾಡ್ತೀರಾ? ಈ ಅಭ್ಯಾಸ ನಿಮ್ಮ ಮೇಲೆ ಏನೆಲ್ಲಾ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಪ್ಪದೆ ತಿಳಿಯಿರಿ.
ಊಟ ಮಾಡುವಾಗ ಮೊಬೈಲ್ ನೋಡುವುದರಿಂದ ಏನಾಗುತ್ತದೆ?
ಬೊಜ್ಜು ಹೆಚ್ಚಾಗಬಹುದು: ಊಟ ಮಾಡುವಾಗ ಟಿವಿ ನೋಡುವುದು ಅಥವಾ ಮೊಬೈಲ್ ಫೋನ್ ನೋಡುವುದರಿಂದ ನಮ್ಮ ಆಹಾರದಿಂದ ಗಮನ ಬೇರೆಡೆಗೆ ಸೆಳೆಯುತ್ತದೆ. ನಾವು ಅತಿಯಾಗಿ ತಿನ್ನುತ್ತೇವೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ನಂತರ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ.
ಜೀರ್ಣಕಾರಿ ಸಮಸ್ಯೆಗಳು: ಟಿವಿ ನೋಡುತ್ತಾ ಅಥವಾ ಮೊಬೈಲ್ ಫೋನ್ ಬಳಸುತ್ತಾ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಆಹಾರವನ್ನು ಸರಿಯಾಗಿ ಅಗಿಯದೇ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯದೆ ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉದ್ಭವಿಸುತ್ತದೆ.
ಮಧುಮೇಹದ ಅಪಾಯ: ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಮಧುಮೇಹ ಬರುವ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಏಕೆಂದರೆ ಟಿವಿ ನೋಡುತ್ತಾ ಅಥವಾ ಮೊಬೈಲ್ ಫೋನ್ ನೋಡುತ್ತಾ ಊಟ ಮಾಡುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ, ಆಹಾರದ ಸರಿಯಾದ ಸಂಸ್ಕರಣೆಯನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಏನಾಗುತ್ತೆ ಗೊತ್ತಾ?
ಊಟ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
- ಊಟ ಮಾಡುವಾಗ, ನೀವು ಟಿವಿ ಅಥವಾ ಫೋನ್ ಬಳಸದಂತೆ ಎಚ್ಚರಿಕೆ ವಹಿಸಬೇಕು.
- ಊಟ ಮಾಡುವಾಗ, ಆಹಾರದ ಮೇಲೆ ಮಾತ್ರ ಗಮನಹರಿಸಿ, ಮಾತನಾಡುವುದು ಅಥವಾ ಫೋನ್ ನೋಡುವುದು ಮಾಡಬೇಡಿ.
- ಆಹಾರವನ್ನು ನಿಧಾನಕ್ಕೆ ಅಗಿದು ತಿನ್ನಿ. ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಊಟದ ನಂತರ ತಕ್ಷಣ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ