Headlines

ಯಶ್ ಡಬಲ್ ಧಮಾಕ; ‘ಟಾಕ್ಸಿಕ್’ ರಿಲೀಸ್ ಆದ ಒಂದೇ ವಾರಕ್ಕೆ ಇದೆ ಮತ್ತೊಂದು ಸರ್​​ಪ್ರೈಸ್

ಯಶ್ ಡಬಲ್ ಧಮಾಕ; ‘ಟಾಕ್ಸಿಕ್’ ರಿಲೀಸ್ ಆದ ಒಂದೇ ವಾರಕ್ಕೆ ಇದೆ ಮತ್ತೊಂದು ಸರ್​​ಪ್ರೈಸ್

ಸದ್ಯ ಎಲ್ಲೆಲ್ಲೂ ‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಿನಿಮಾದಲ್ಲಿ ಯಶ್ ಅವರು ರಾಯ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಕಾದು ಕೂತಿದ್ದಾರೆ. ಈ ಚಿತ್ರ ರಿಲೀಸ್ ಆಗೋದು ಮಾರ್ಚ್ 19ರಂದು. ಇದಾದ ಒಂದೇ ವಾರಕ್ಕೆ ಅಂದರೆ ಸರಿಯಾಗಿ ಮಾರ್ಚ್ 26ಕ್ಕೆ ಒಂದು ದೊಡ್ಡ ಸರ್​ಪ್ರೈಸ್ ಕಾದಿದೆ. ಈ ವಿಷಯ ಕೇಳಿ ಯಶ್ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.

ಯಶ್ ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಮಾತ್ರವಲ್ಲ, ‘ರಾಮಾಯಣ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಒಂದು ಕಳೆದ ವರ್ಷ ಅನಾವರಣಗೊಂಡಿತ್ತು. ಆದರೆ, ಎಲ್ಲಾ ಪೋಸ್ಟರ್​​ಗಳು ಗ್ರಾಫಿಕ್ಸ್ ಮಾದರಿಯಲ್ಲಿ ಇದ್ದವು. ಆದರೆ, ಈಗ ಈ ಪಾತ್ರಗಳನ್ನು ಎಲ್ಲರಿಗೂ ಅಧಿಕೃತವಾಗಿ ಪರಿಚಯಿಸೋ ಸಮಯ ಬಂದಿದೆ. ಇದಕ್ಕೆ ಮಾರ್ಚ್ 26ನೇ ತಾರಿಕನ್ನು ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 26ಕ್ಕೆ ರಾಮ ನವಮಿ ಆಚರಿಸಲಾಗುತ್ತಿದೆ. ರಾಮಾಯಣ ಸಿನಿಮಾದ ಪಾತ್ರಗಳನ್ನು ಪರಿಚಯಿಸಲು ಇದಕ್ಕಿಂತ ಉತ್ತಮ ಸಮಯ ಬೇಡ ಎಂಬುದು ನಿರ್ಮಾಪಕ ನಮಿತ್ ಮಲ್ಹೋತ್ರ ಅವರ ಆಲೋಚನೆ. ಈ ಕಾರಣದಿಂದಲೇ ಅವರು ಮಾರ್ಚ್ 26ರಂದು ಎಲ್ಲಾ ಪಾತ್ರಗಳನ್ನು ನೇರವಾಗಿ ಪರಿಚಯಿಸಲು ನಿರ್ಧರಿಸಿದ್ದಾರೆ. ಮುಂಬೈನ ಗೇಟ್​ ವೇ ಆಫ್ ಇಂಡಿಯಾದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಸದ್ಯ ಈವೆಂಟ್​ನ ಗುಪ್ತವಾಗಿ, ‘ಮದರ್ ಆಫ್ ಆಲ್ ಈವೆಂಟ್ಸ್’ ಎಂದು ಕರೆಯಲಾಗಿದೆಯಂತೆ.

ದೊಡ್ಡದಾದ ಈವೆಂಟ್ ಆಯೋಜನೆ ಮಾಡಲು ನಮಿತ್ ಮಲ್ಹೋತ್ರಾ ನಿರ್ಧರಿಸಿದ್ದಾರೆ. ರಾಜಕೀಯ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದಿಂದ ಜನರನ್ನು ಆಮಂತ್ರಿಸಲಾಗುತ್ತಿದೆ. ಇಷ್ಟೇ ಅಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದರಲ್ಲಿ ಭಾಗಿ ಆಗುವ ಎಲ್ಲಾ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

ಇದು ಪಕ್ಕಾ ಬಾಲಿವುಡ್ ಈವೆಂಟ್. ಹೀಗಾಗಿ, ಈ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ವಿಐಪಿಗಳನ್ನು ನಿರೀಕ್ಷಿಸಬಹುದಾಗಿದೆ. ಇನ್ನು, ರಾಮನ ಪಾತ್ರ ಮಾಡುತ್ತಿರುವ ರಣಬೀರ್ ಅವರು ವೈಯಕ್ತಿಕವಾಗಿ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಕೊಟ್ಟಿದ್ದಾರೆ ಎಂದು ವರದಿ ಆಗಿದೆ. ಯಶ್ ಕೂಡ ಈವೆಂಟ್​ನ ಭಾಗವಾಗಲಿದ್ದು, ಫ್ಯಾನ್ಸ್​​​ಗೆ ಒಂದೇ ವಾರದಲ್ಲಿ ಡಬಲ್ ಧಮಾಕ ಸಿಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಬ್ಬಬ್ಬಾ, ಯಶ್ ಬುದ್ಧಿವಂತಿಕೆ ಮೆಚ್ಚಲೇಬೇಕು; ಈ ಡೀಲ್​​​ನಿಂದ ‘ಟಾಕ್ಸಿಕ್​​’ಗೆ ದೊಡ್ಡ ಲಾಭ

ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆ ಪಾತ್ರ, ಯಶ್ ರಾವಣನ ಪಾತ್ರ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದ ಭಾಗ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *