Headlines

ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ? – Kannada News | Indias strategic petroleum reserves know how many days they last if crude oil supply is stopped

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಇಸ್ರೇಲ್, ಇರಾನ್ ಸಂಘರ್ಷದಲ್ಲಿ (Middle East crisis) ಅಮೆರಿಕ ಅಖಾಡಕ್ಕೆ ಪ್ರವೇಶ ಮಾಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸೇರಿದಂತೆ ಹಲವು ಪ್ರಮುಖ ಮುಖಂಡರನ್ನು ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಕೊಂದು ಹಾಕಿವೆ. ಗಲ್ಫ್ ದೇಶಗಳಿಂದ ತೈಲ ಪೂರೈಕೆಗೆ ಅಡಚಣೆ ಆಗಿದೆ. ಜಾಗತಿಕವಾಗಿ ತೈಲ ಬೆಲೆ ಹೆಚ್ಚುವ ಮತ್ತು ಪೂರೈಕೆ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.

ಒಂದು ವೇಳೆ, ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಏನು ತೊಂದರೆ? ಅತಿಹೆಚ್ಚು ಪೆಟ್ರೋಲ್ ಬಳಸುವ ದೇಶಗಳಲ್ಲಿ ಭಾರತ ಒಂದು. ಒಂದು ವೇಳೆ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿ ಈಗಿರುವ ಪೆಟ್ರೋಲಿಯಂ ಸಂಗ್ರಹ ಎಷ್ಟು ದಿನಕ್ಕೆ ಸಾಕಾಗಬಹುದು? ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಅವರು ಕಳೆದ ತಿಂಗಳು (ಫೆಬ್ರುವರಿ) ಈ ಬಗ್ಗೆ ರಾಜ್ಯಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಇರುವ ಪೆಟ್ರೋಲಿಯಂ ಸಂಗ್ರಹವು 74 ದಿನಗಳಿಗೆ ಸಾಕಾಗುವಷ್ಟು ಇದೆಯಂತೆ.

ಅಂತಾರಾಷ್ಟ್ರೀಯ ಇಂಧನ ಸಂಘಟನೆಯಾದ ಐಇಎ (IEA) ಒಂದು ದೇಶದಲ್ಲಿ ಕನಿಷ್ಠ 90 ದಿನಗಳಿಗೆ ಆಗುವಷ್ಟು ಪೆಟ್ರೋಲ್ ಸಂಗ್ರಹ ಇರಬೇಕು ಎಂದು ಶಿಫಾರಸು ಮಾಡಿದೆ. ತೈಲ ನಿಕ್ಷೇಪಗಳಿಲ್ಲದ ದೇಶಗಳಿಗೆ ಈ ನಿಯಮ ಅಥವಾ ಶಿಫಾರಸು ಅನ್ವಯ ಆಗುತ್ತದೆ. ಹಲವು ಐರೋಪ್ಯ ದೇಶಗಳು ಈ ನಿಯಮವನ್ನು ಪಾಲಿಸುತ್ತಿವೆ. ಅವನ್ನು ಬಿಟ್ಟು ಹೆಚ್ಚಿನ ದೇಶಗಳಲ್ಲಿ ಇಷ್ಟು ಸಂಗ್ರಹ ಇಲ್ಲ. ಭಾರತದಲ್ಲಿ ಬಹಳ ಪೆಟ್ರೋಲ್ ಬಳಕೆ ಇದ್ದರೂ 74 ದಿನಗಳಿಗೆ ಆಗುವಷ್ಟು ಸಂಗ್ರಹ ಹೊಂದಿರುವುದು ಗಮನಾರ್ಹ.

ಇದನ್ನೂ ಓದಿ: ಇರಾನ್​ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಟ್ರಂಪ್ ಹೇಳಿದ್ದೇನು?

ಭಾರತದಲ್ಲಿ ಮೂರು ಕಡೆ ತೈಲ ಸಂಗ್ರಹ ಸ್ಥಳಗಳಿವೆ. ಕರ್ನಾಟಕದ ಮಂಗಳೂರು ಮತ್ತು ಉಡುಪಿಯಲ್ಲಿ, ಹಾಗೂ ಆಂಧ್ರದ ವಿಶಾಖಪಟ್ಟಣಂನಲ್ಲಿ ಕ್ಯಾವರ್ನ್​ಗಳು ಅಥವಾ ಭೂಗತ ತೈಲಾಗಾರಗಳಿವೆ. ಒಡಿಶಾದಲ್ಲೂ ಒಂದು ತೈಲ ಸಂಗ್ರಹಗಾರವನ್ನು ಸ್ಥಾಪಿಸಲಾಗುತ್ತಿದೆ. ಒಡಿಶಾದ್ದು ಪೂರ್ಣಗೊಂಡರೆ ಭಾರತದಲ್ಲಿ 90 ದಿನಗಳಿಗಾಗುಷ್ಟು ಪೆಟ್ರೋಲ್ ಸಂಗ್ರಹ ಹೊಂದಿರಲು ಸಾಧ್ಯವಾಗುತ್ತದೆ. ಈಗಿರುವ ಮೂರು ಕ್ಯಾವರ್ನ್​ಗಳಲ್ಲಿ 5 ಎಂಎಂಟಿಗೂ ಅಧಿಕ ಕಚ್ಚಾ ತೈಲವನ್ನು ಇರಿಸಲಾಗಿದೆ. ಇದಲ್ಲದೆ, ದೇಶದ ಹಲವೆಡೆ ರಿಫೈನರಿಗಳಿವೆ. ಅಲ್ಲಿಯೂ ಸಾಕಷ್ಟು ಕಚ್ಚಾ ತೈಲ ಇದ್ದು ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ತುರ್ತು ಸ್ಥಿತಿ ಬಂದಾಗ ಈ ರಿಫೈನರಿಯಲ್ಲಿರುವ ಪೆಟ್ರೋಲ್ ಎಲ್ಲವನ್ನೂ ಆಂತರಿಕ ಬಳಕೆಗೆ ಉಪಯೋಗಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *