
ತಮಿಳುನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷದವರು ಪ್ರಚಾರಕ್ಕೆ ಇಳಿದಿದ್ದಾರೆ. ಈಗ ಚುನಾವಣೆ ಪ್ರಚಾರದ ವೇಳೆ ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ನಾಯಕ ಆಧವ್ ಅರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆಗೆ ಬರದಿರಲು ರಜನಿಗೆ ಒತ್ತಡ ಇತ್ತು ಎಂದಿದ್ದಾರೆ. ಇದು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ವಿಜಯ್ಗೆ ಈ ರೀತಿಯ ಬೆದರಿಕೆ ಬಂದರೂ ಅವರು ಎದುರಿಸಿ ನಿಲ್ಲುತ್ತಿದ್ದಾರೆ ಎಂದಿದ್ದಾರೆ. ಈ ಹೇಳಿಕೆಗೆ ಈಗ ರಜನಿಕಾಂತ್ (Rajinikanth) ಅವರೇ ಉತ್ತರ ನೀಡಿದ್ದಾರೆ
ನಟ ರಜನಿಕಾಂತ್ ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದ್ದರು.ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯಿತು. ಆದರೆ, ಆ ಸಂದರ್ಭದ ಅನಾರೋಗ್ಯ ಕಾಡಿತು. ಇದನ್ನೇ ಮುಂದಿಟ್ಟುಕೊಂಡು ಅವರು ರಾಕೀಯದಿಂದ ಹಿಂದೆ ಸರಿದರು. ಆದರೆ, ಇದಕ್ಕೆ ಬೇರೆಯದೇ ಕಾರಣ ಇದೆ ಎಂದು ಆಧವ್ ಅರ್ಜುನ್ ಹೇಳಿದ್ದಾರೆ. ‘ರಜನಿಕಾಂತ್ ಚುನಾವಣೆಗೆಗೆ ಬರಲು ಪ್ರಯತ್ನಿಸಿದಾಗ ಡಿಎಂಕೆ ಕುಟುಂಬ ಅವರಿಗೆ ಬೆದರಿಕೆ ಹಾಕಿದೆ. ರಜನಿಕಾಂತ್ ಅವರನ್ನು ಟೀಕಿಸುತ್ತಿಲ್ಲ ಆದರೆ ವಿಜಯ್ ಅವರಿಗೆ ಅಂತಹ ಒತ್ತಡವನ್ನು ತಡೆದುಕೊಳ್ಳುವ ಧೈರ್ಯವಿದೆ’ ಎಂದು ಅರ್ಜುನ ವಿವರಿಸಿದ್ದರು.
ಈ ವಿಷಯಕ್ಕೆ ರಜನಿಕಾಂತ್ ಉತ್ತರಿಸಿದ್ದಾರೆ. ಟಿವಿಕೆ ನಾಯಕನ ಹೇಳಿಕೆಯನ್ನು ಟೀಕಿಸಿದ ಎಲ್ಲರಿಗೂ ರಜನಿಕಾಂತ್ ಧನ್ಯವಾದ ಹೇಳಿದ್ದಾರೆ. ‘ಸಮಯ ಮಾತನಾಡುವುದಿಲ್ಲ. ಆದರೆ ಅದು ಕಾದು ನಂತರ ಉತ್ತರ ನೀಡುತ್ತದೆ’ ಎಂದು ರಜನಿಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?
‘ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ, ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್. ಮುರುಗನ್, ತಮಿಳುನಾಡು ಸಚಿವ ರಘುಪತಿ, ನನ್ನ ಗೆಳೆಯ ಅಣ್ಣಮಲೈ ಸೇರಿ ಎಲ್ಲರಿಗೂ ಧನ್ಯವಾದ’ ಎಂದು ಅವರು ಹೇಳಿದ್ದಾರೆ.
#SuperstarRajinikanth BREAKS SILENCE over #ThalapathyVijay’s political party #TVK comments, mentioning: “TIME DOESN’T SPEAK, BUT IT WILL WAIT AND GIVE ANSWER”#Rajinikanth recent press release states “Mr. Adhav Arjuna, who holds a leadership position in the TVK party, recently… pic.twitter.com/PxfpcXJTYX
— Movies Singapore (@MoviesSingapore) March 17, 2026
ಅರ್ಜುನ್ ಹೇಳಿಕೆ ಏನು?
ಡಿಎಂಕೆ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ವಿಫಲ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಅರ್ಜುನ, ‘ಎಂಜಿಆರ್ ನಂತರ, ರಾಜಕೀಯ ಪ್ರವೇಶಿಸಲು ಉದ್ದೇಶಿಸಿದ್ದ ಅತ್ಯಂತ ಜನಪ್ರಿಯ ನಟರಲ್ಲಿ ರಜನಿಕಾಂತ್ ಒಬ್ಬರು . ರಜನಿಕಾಂತ್ ತಮಿಳುನಾಡು ರಾಜಕೀಯ ಪ್ರವೇಶಿಸಲು ಮತ್ತು ವ್ಯವಸ್ಥೆಯನ್ನು ಬದಲಾಯಿಸಲು ಬಯಸಿದ್ದರು. ಆದಾಗ್ಯೂ, ಡಿಎಂಕೆ ಕುಟುಂಬವು ರಜನಿಕಾಂತ್ ಅವರಿಗೆ ಹಲವಾರು ಬೆದರಿಕೆಗಳನ್ನು ಹಾಕಿತು. ಅವರು ರಾಜಕೀಯ ಪ್ರವೇಶಿಸದಂತೆ ತಡೆದಿತು. ಈಗ ಅವರು ಸಿನಿಮಾ ಮಾಡಿಕೊಂಡಿದ್ದಾರೆ’ ಎಂದಿದ್ದರು ಅರ್ಜುನ. ಈ ಹೇಳಿಕೆಯನ್ನು ಅನೇಕರು ಖಂಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.