
ಮೈಸೂರು, ಮಾರ್ಚ್ 23: ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಾಡಾನೆ ಹಿಂಡೊಂದು ಶಿಸ್ತಿನಿಂದ ಗುಂಪಾಗಿ ರಸ್ತೆ ದಾಟಿದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಯಾವುದೇ ಗದ್ದಲವಿಲ್ಲದೆ, ಯಾರಿಗೂ ತೊಂದರೆ ಮಾಡದೆ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟಿದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ರೆಕಾರ್ಡ್ ಮಾಡಿದ್ದಾರೆ. ಆನೆಗಳ ಆಗಮನ ಕಂಡು ವಾಹನ ಸವಾರರು ಕೂಡ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿ ಸುಮ್ಮನಾಗಿ, ಅವು ರಸ್ತೆ ದಾಟುವ ವರೆಗೆ ಮೌನವಾಗಿ ಕಾಯುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ,. ಸದ್ಯ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.