Headlines

ರಾಜಸ್ಥಾನದಲ್ಲಿ‌ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಭಾರತದ ಮೊದಲ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್ – Kannada News | India’s first 5 star hotel linked cricket stadium; watch the video here

ರಾಡಿಸನ್‌ ಬ್ಲೂ ಮಿರಾಜ್‌ ಸ್ಟೇಡಿಯಂ Image Credit source: Social Media

ಭಾರತದ ಮೊದಲ ಫೈವ್‌ ಸ್ಟಾರ್‌ ಹೋಟೆಲ್ ಸಂಯೋಜಿತ  ಕ್ರಿಕೆಟ್ ಕ್ರೀಡಾಂಗಣವನ್ನು ರಾಜಸ್ಥಾನದ (Rajasthan) ಉದಯಪುರದ  ನಾಥದ್ವಾರದಲ್ಲಿರುವ ಮದನ್ ಪಲಿವಾಲ್ ಸ್ಪೋರ್ಟ್ಸ್ ಸಿಟಿಯಲ್ಲಿ ಮಿರಾಜ್ ಗ್ರೂಪ್‌ನ ಉಪಕ್ರಮದಡಿಯಲ್ಲಿ ಮತ್ತು ರಾಡಿಸನ್ ಹೋಟೆಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ನಿರ್ಮಿಸಲಾದ ಈ ʼರಾಡಿಸನ್‌ ಬ್ಲೂ ಮಿರಾಜ್‌ ಸ್ಟೇಡಿಯಂʼ ಹೋಟೆಲ್‌ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ದೇಶದ ಅತಿದೊಡ್ಡ ಹೋಟೆಲ್‌ ಕ್ರೀಡಾಂಗಣದ ಸುಂದರ ವಿಡಿಯೋವನ್ನು ರಾಡಿಸನ್ ಬ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ.

ಭಾರತದ ಮೊಟ್ಟ ಮೊದಲ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್‌:

ವರದಿಗಳ ಪ್ರಕಾರ, ದೇಶದಲ್ಲಿರುವ ಈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು 30 ಸಾವಿರಕ್ಕೂ ಹೆಚ್ಚು ಆಸನಗಳನ್ನು ಮತ್ತು ಹೋಟೆಲ್‌  234 ಐಷಾರಾಮಿ ಕೊಠಡಿಗಳನ್ನು ಹೊಂದಿದ್ದು, ಈ ಭವ್ಯ ಹೋಟೆಲ್‌ನಲ್ಲಿ ತಂಗುವಂತಹ ಅತಿಥಿಗಳು ತಮ್ಮ ಕೊಠಡಿಗಳಿಂದಲೇ ನೇರವಾಗಿ ಕ್ರಿಕೆಟ್‌ ಪಂದ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ.

ರಾಡಿಸನ್ ಬ್ಲೂ ಮಿರಾಜ್ ಕ್ರೀಡಾಂಗಣದ ವೈಶಿಷ್ಟ್ಯವೆಂದರೆ ಅದು 5-ಸ್ಟಾರ್ ರಾಡಿಸನ್ ಬ್ಲೂ ಹೋಟೆಲ್‌ನೊಂದಿಗೆ ನೇರ ಸಂಪರ್ಕ ಹೊಂದಿದೆ. ಹೋಟೆಲ್ ಕೊಠಡಿಗಳು ಸುಮಾರು 75% ರಷ್ಟು ಕ್ರಿಕೆಟ್ ಮೈದಾನದತ್ತ ಮುಖ ಮಾಡಿರುವುದರಿಂದ ಹೋಟೆಲ್‌ನಲ್ಲಿ ತಂಗುವ ಅತಿಥಿಗಳು ತಮ್ಮ ಖಾಸಗಿ ಬಾಲ್ಕನಿಗಳಿಂದ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಕ್ರಿಕೆಟ್‌ ಸ್ಟೇಡಿಯಂ ಹೋಟೆಲ್‌ನ ಫಸ್ಟ್-ಲುಕ್ ವಿಡಿಯೋ ಸಖತ್‌ ವೈರಲ್‌ ಆಗುತ್ತಿವೆ. ಈ ಕುರಿತ ವಿಡಿಯೋವನ್ನು Mufaddal Vohra ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ರಾಡಿಸನ್ ಬ್ಲೂ ಮಿರಾಜ್ ಕ್ರೀಡಾಂಗಣದ ಅವಲೋಕನ:

ಈ ಕ್ರೀಡಾಂಗಣವು ಸುಮಾರು 50,000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ ಮತ್ತು 5-ಸ್ಟಾರ್ ರಾಡಿಸನ್ ಬ್ಲೂ ಹೋಟೆಲ್‌ಗೆ ಸಂಪರ್ಕ ಹೊಂದಿದೆ. ಹೋಟೆಲ್ 234 ಐಷಾರಾಮಿ ಕೊಠಡಿಗಳು ಮತ್ತು ಸೂಟ್‌ಗಳನ್ನು ಹೊಂದಿದೆ, ಮತ್ತು ಈ ಕೊಠಡಿಗಳಲ್ಲಿ ಸುಮಾರು 75 ಪ್ರತಿಶತವು ಕ್ರಿಕೆಟ್ ಮೈದಾನದ ನೇರ ನೋಟವನ್ನು ನೀಡುತ್ತದೆ. ಈ ಯೋಜನೆಯನ್ನು ಮದನ್ ಪಲಿವಾಲ್ ಮಿರಾಜ್ ಸ್ಪೋರ್ಟ್ಸ್ ಸೆಂಟರ್ ಅಡಿಯಲ್ಲಿ ಮಿರಾಜ್ ಗ್ರೂಪ್ ಅಭಿವೃದ್ಧಿಪಡಿಸಿದೆ.

ಕಾರ್ಪೊರೇಟ್ ಸಭೆಗಳಿಗಾಗಿ ದೊಡ್ಡ ಹಾಲ್,  ಈಜುಕೊಳ, ದೊಡ್ಡ ಕೆಫೆಟೇರಿಯಾ, ಪಾಶ್ಚಿಮಾತ್ಯ ಶೈಲಿಯ ಸ್ನಾನಗೃಹಗಳನ್ನು ಹೊಂದಿರುವ ಐಷಾರಾಮಿ ಕೊಠಡಿಗಳು ಸೇರಿದಂತೆ ಬಹು ಸೌಲಭ್ಯಗಳನ್ನು ಹೊಂದಿರುವ ಹೋಟೆಲ್‌ ಇದಾಗಿದ್ದು, ಕ್ರೀಡಾ ಪ್ರೇಮಿಗಳು ಮತ್ತು ಟೂರಿಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಮಿರಾಜ್ ಗ್ರೂಪ್ ಮತ್ತು ರಾಡಿಸನ್ ಹೋಟೆಲ್ ಗ್ರೂಪ್  ಈ ವಿಶೇಷ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮುರುಡೇಶ್ವರಕ್ಕೆ ಪ್ರವಾಸ ಹೋಗುವವರಿಗೆ kstdcನಿಂದ ವಿಶೇಷ ಪ್ಯಾಕೇಜ್​​

ಕ್ರೀಡಾಂಗಣವು ಪ್ಯಾರಾಮೆಟ್ರಿಕ್ ವಾಸ್ತುಶಿಲ್ಪ, ರಾತ್ರಿಯಲ್ಲಿ ಕಣ್ಮನ ಸೆಳೆಯುವ ಬೆಳಕಿನೊಂದಿಗೆ ಆಧುನಿಕ ವಿನ್ಯಾಸವನ್ನು ಹೊಂದಿದೆ. ಈ ಅತ್ಯಾಧುನಿಕ ಹೋಟೆಲ್‌ನಲ್ಲಿ ತಂಗುವ ಅತಿಥಿಗಳು ಅರಾವಳಿ ಬೆಟ್ಟಗಳ ಸುಂದರ ಸೂರ್ಯಾಸ್ತದ ನೋಟಗಳನ್ನು ಮತ್ತು ಸಂಜೆಯ ಅತ್ಯಾಕರ್ಷಕ ಫ್ಲಡ್‌ಲೈಟ್ ಪಂದ್ಯಗಳನ್ನು ಆನಂದಿಸಬಹುದು.

ಕ್ರಿಕೆಟ್ ಸ್ಟೇಡಿಯಂ  ಹೊರತುಪಡಿಸಿ, ಈ ಪ್ರಾಪರ್ಟಿ 1,000 ಅತಿಥಿಗಳಿಗೆ ಅವಕಾಶ ಕಲ್ಪಿಸಬಹುದಾದ ದೊಡ್ಡ ಮ್ಯಾರೇಜ್‌ ಲಾನ್, ಪ್ರೀಮಿಯಂ ಊಟದ ಪ್ರದೇಶಗಳನ್ನು ಹೊಂದಿದ್ದು, ಇದು ಮದುವೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *