Headlines

ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು! – Kannada News | India has embarrassed us by giving bowling to Rinku Singh

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಮುಗಿದಿದೆ. ನಿರೀಕ್ಷೆಯಂತೆ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಆದರೆ ಅತ್ತ ಈ ಬಾರಿ ಪಾಕಿಸ್ತಾನ್ ತಂಡ ಸೋತಿರುವುದು ಬರೋಬ್ಬರಿ 61 ರನ್​ಗಳ ಅಂತರದಿಂದ. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕ್ ಚಾನೆಲ್​ಗಳಲ್ಲಿ ಚರ್ಚೆಗಳು ನಡೆದಿದ್ದವು. ಈ ಚರ್ಚೆಯ ನಡುವೆ ಪಾಕ್ ಚಾನೆಲ್ ಆ್ಯಂಕರ್ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ವೈರಲ್ ಆಗಿದೆ.

ಈ ಪ್ಯಾನೆಲ್ ಚರ್ಚೆಯಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಕಾಣಿಸಿಕೊಂಡಿದ್ದರು. ಈ ಚರ್ಚೆಯ ನಡುವೆ ಈ ಬಾರಿಯ ಸೋಲಿನ ಅತ್ಯಂತ ಮುಜುಗರ ಸಂಗತಿಯೆಂದರೆ ಅವರು ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿರುವುದು ಎಂದು ಆ್ಯಂಕರ್ ವ್ಯಂಗ್ಯವಾಡಿದ್ದಾರೆ.

ಹೈವೋಲ್ಟೇಜ್ ಪಂದ್ಯದಲ್ಲಿ ರಿಂಕು ಸಿಂಗ್​ನಂತಹ ಪಾರ್ಟ್ ಟೈಮ್ ಬೌಲರ್​ಗಳಿಂದ ಓವರ್ ಮಾಡಿಸಿ ಟೀಮ್ ಇಂಡಿಯಾ ಪಾಕಿಸ್ತಾನದ ಮರ್ಯಾದೆಯನ್ನೇ ಕಳೆದಿದ್ದಾರೆ. ಇದು ಅತ್ಯಂತ ಮುಜುಗರದ ವಿಷಯ ಎಂದು ಪಾಕ್ ಆ್ಯಂಕರ್ ಹೇಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅಂದಹಾಗೆ ಕೊಲಂಬೊದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಒಂದು ಓವರ್ ಎಸೆದಿದ್ದರು. ಹಾಗೆಯೇ ತಿಲಕ್ ವರ್ಮಾ 2 ಓವರ್​ಗಳನ್ನು ಬೌಲಿಂಗ್ ಮಾಡಿದ್ದರು. ಅಂದರೆ ಟೀಮ್ ಇಂಡಿಯಾ ಪಾಕ್ ವಿರುದ್ಧ ಮೂರು ಓವರ್​ಗಳನ್ನು ಪಾರ್ಟ್ ಟೈಮ್ ಬೌಲರ್​ಗಳಿಂದಲೇ ಹಾಕಿಸಿದ್ದರು. ಇದಾಗ್ಯೂ 18 ಓವರ್​ ಆಡಿದ್ದ ಪಾಕಿಸ್ತಾನ್ ತಂಡ ಕಲೆಹಾಕಿದ್ದು ಕೇವಲ 114 ರನ್​ ಮಾತ್ರ.

 

Source link

Leave a Reply

Your email address will not be published. Required fields are marked *