ರಿಲೀಸ್​​ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ – Kannada News | Jana Nayagan Censor Trouble: Vijay’s Film Release in Doubt, High Court Approached

ಎಲ್ಲವೂ ಅಂದುಕೊಂಡಂತೆ ನಡೆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜನವರಿ 9ರಂದು ರಿಲೀಸ್ ಆಗಲಿದೆ. ಈ ವಾಕ್ಯವನ್ನು ಹೇಳಲು ಒಂದು ಕಾರಣವೂ ಇದೆ. ಸದ್ಯ ‘ಜನ ನಾಯಗನ್’ ತಂಡಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಡಿಸೆಂಬರ್ 19ರಂದು ಸೆನ್ಸಾರ್ ತಂಡ ಸಿನಿಮಾ ವೀಕ್ಷಿಸಿದೆ. ಸಿನಿಮಾ ರಿಲೀಸ್ ಹತ್ತಿರವಾದರೂ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ವಿಷಯ ಚರ್ಚೆ ಹುಟ್ಟುಹಾಕಿದೆ. ಇದನ್ನು ಪ್ರಶ್ನಿಸಿ ತಂಡದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ರಾಜಕೀಯ ಕಥಾ ಹಂದರದ ಕಥೆ, ಧರ್ಮದ ವಿಷಯಗಳ ಬಗ್ಗೆ ಸಿನಿಮಾ ಮಾಡುವಾಗ ಹೆಚ್ಚು ಎಚ್ಚರಿಕೆ ಇರಬೇಕು. ಒಂದು ದೃಶ್ಯ, ಡೈಲಾಗ್ ಸಮಾಜದಲ್ಲಿ ಕಾಡ್ಗಿಚ್ಚು ಹೊತ್ತಿಸಬಹುದು. ಹೀಗಾಗಿ, ಈ ರೀತಿಯ ಸಿನಿಮಾಗಳನ್ನು ಸೆನ್ಸಾರ್ ಮಂಡಳಿಯವರು ಹೆಚ್ಚು ಎಚ್ಚರಿಕೆಯಿಂದ ವೀಕ್ಷಿಸುತ್ತಾರೆ. ‘ಜನ ನಾಯಗನ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದೆ. ಕೆಲವು ಪದಗಳಿಗೆ ಮ್ಯೂಟ್ ಮಾಡುವಂತೆ ನಿರ್ದೇಶಿಸಿದೆ.

ಈ ಬದಲಾವಣೆಗಳನ್ನು ಮಾಡಿ ತಂಡದವರು ಸಿನಿಮಾನ ಸೆನ್ಸಾರ್ ಮಂಡಳಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಅವರ ಕಡೆಯಿಂದ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಪತ್ರ ಇಲ್ಲದೆಯೇ ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ. ರಿಲೀಸ್​​ಗೆ ಇನ್ನು ಕೆಲವೇ ದಿನ ಬಾಕಿ ಇದೆ. ಹೀಗಾಗಿ, ತಂಡದವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ.

ಈಗಾಗಲೇ ಏಕ ಪರದೆ ಚಿತ್ರಮಂದಿರಗಳಿಗೆ ಬುಕಿಂಗ್ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಏಕಪರದೆಗಳಲ್ಲಿ ಮುಂಜಾನೆ ಶೋಗೆ ಸಾವಿರ ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆದಾಗ್ಯೂ ಟಿಕೆಟ್ ಸೋಲ್ಡ್​ ಔಟ್ ಆಗಿದೆ. ಇದು ಚರ್ಚೆಗೆ ಕಾರಣ ಆಗಿದೆ. ಇಷ್ಟು ದುಬಾರಿ ಟಿಕೆಟ್ ದರ ನಿಗದಿ ಮಾಡಿದ ಬಗ್ಗೆಯೂ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಎಚ್​. ವಿನೋದ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ವಿಜಯ್ ಮುಖ್ಯ ಭೂಮಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಲಿದೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *