ಅರಣ್ಯ ಸಿಬ್ಬಂದಿ ವಿರುದ್ಧ ಎಸ್ಪಿ ಗರಂ Image Credit source: tv9 kannada
ಚಾಮರಾಜನಗರ, ಫೆಬ್ರವರಿ 19: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಸಫಾರಿ (Safari) ಈಗ ಮತ್ತೆ ಕೆಲ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ರೈತರು ಇಂದು ಬಂಡೀಪುರದ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ರೆಸಾರ್ಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಅರಣ್ಯ ಸಿಬ್ಬಂದಿ ರೆಸಾರ್ಟ್ನವರನ್ನ ಸಫಾರಿ ಕೇಂದ್ರದ ಒಳ ಬಿಟ್ಟುಕೊಂಡು ನೌಟಂಕಿ ಆಟವಾಡಿದ್ದಾರೆ.
ಸಫಾರಿ ಪುನಾರಂಭಕ್ಕೆ ಸೂಚನೆ
ಸದಾ ಮಾನವ, ಕಾಡು ಪ್ರಾಣಿ ಸಂಘರ್ಷದಿಂದ ಬೇಸತ್ತಿದ್ದ ಜನರಿಗೆ ಸಫಾರಿ ಬಂದ್ ಮಾಡಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿತ್ತು. ಸಫಾರಿ ಬಂದ್ ಆಗಿದ್ದೆ ತಡ ಕಾಡು ಪ್ರಾಣಿ ದಾಳಿ ಕೂಡ ಕಡಿಮೆಯಾಗಿತ್ತು. ಆದರೆ ಯಾವ ಲಾಬಿಗೆ ರಾಜ್ಯ ಸರ್ಕಾರ ಬಿತ್ತೋ ಗೊತ್ತಿಲ್ಲ ಮತ್ತೆ ಇದೀಗ ಸಫಾರಿ ಪುನಾರಂಭಕ್ಕೆ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್ನ್ಯೂಸ್ ಕೊಟ್ಟ ಅರಣ್ಯ ಸಚಿವರು
ಯಾವಾಗ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಬಂಡೀಪುರ ನಾಗರಹೊಳೆ ಸಫಾರಿಯನ್ನ ಶೇಕಡಾ 50 ಪರ್ಸೆಂಟ್ ಅಷ್ಟು ಮತ್ತೆ ಓಪನ್ ಮಾಡಲಾಗುತ್ತೆ ಅಂತ ಆದೇಶ ಮಾಡಿದ್ದರೆ, ಇತ್ತ ಗಡಿ ಜಿಲ್ಲೆಯ ರೈತರ ಕಣ್ಣು ಈಗ ಕೆಂಪಾಗಿದೆ. ಯಾವುದೇ ಕಾರಣಕ್ಕೂ ಬಂಡೀಪುರ ನಾಗರಹೊಳೆ ಸಫಾರಿಯನ್ನ ರೀ ಓಪನ್ ಮಾಡಬಾರದು ಅಂತ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತ ಅಂದರೆ ಸ್ವತಃ ಬಂಡೀಪುರ ಆರ್ಎಫ್ಓ ಮಲ್ಲೇಶ್ ಹಾಗೂ ಎಸಿಎಫ್ ನವಿನ್ ರೆಸಾರ್ಟ್ ಸಿಬ್ಬಂದಿಗೆ ಎತ್ತಿ ಕಟ್ಟಿ ಪ್ರತಿಭಟನೆ ನಡೆಸಲು ಉತ್ತೇಜನ ನೀಡಿದ್ದು ಅಲ್ಲದೇ ಬಂಡೀಪುರ ಸಫಾರಿ ಪಾಯಿಂಟ್ ಒಳಗಡೆ ರೆಸಾರ್ಟ್ ಕಡೆಯವರನ್ನ ಬಿಟ್ಟುಕೊಂಡಿದ್ದಾರೆ. ಇದನ್ನ ಕಂಡು ಗರಂ ಆದ ಎಸ್ಪಿ ಮುತ್ತುರಾಜ್, ಆರ್ಎಫ್ಓ ಮಲ್ಲೇಶ್, ಎಸಿಎಫ್ ನವೀನ್ಗೆ ಎಚ್ಚರಿಕೆ ನೀಡಿದ್ದಾರೆ. ಎಸ್ಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳುತ್ತಿದ್ದಂತೆ ಸಫಾರಿ ಪಾಯಿಂಟ್ ಒಳಗಡೆ ಇದ್ದ ರೆಸಾರ್ಟ್ನವರನ್ನ ಬಂಡೀಪುರ ಅರಣ್ಯ ಸಿಬ್ಬಂದಿ ಹೊರಗಡೆ ಕಳಿಸಿದ್ದಾರೆ. ಬಂಡೀಪುರ ಅರಣ್ಯ ಸಿಬ್ಬಂದಿಯ ಈ ನಡೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?
ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾಗಿ ಓಪನ್ ಆಗಿ ರೆಸಾರ್ಟ್ನವರಿಗೆ ಬೆಂಬಲಿಸಿದ ಇಂತ ಆರ್ಎಫ್ಓ ಮಲ್ಲೇಶ್, ಎಸಿಎಫ್ ನವೀನ್ ವಿರುದ್ದ ಕ್ರಮ ಆಗಲೇಬೇಕೆಂದು ಜನರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.