‘ಲವ್ ಇನ್ಶೂರೆನ್ಸ್ ಕಂಪನಿ’ ಬಾಕ್ಸ್ ಆಫೀಸ್ ಕಲೆಕ್ಷನ್: 2ನೇ ದಿನವೂ ಮಂದಗತಿ

‘ಲವ್ ಇನ್ಶೂರೆನ್ಸ್ ಕಂಪನಿ’ ಬಾಕ್ಸ್ ಆಫೀಸ್ ಕಲೆಕ್ಷನ್: 2ನೇ ದಿನವೂ ಮಂದಗತಿ

ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ವಾರಾಂತ್ಯದ ರಜಾ ದಿನಗಳಿದ್ದರೂ ಸಹ ಚಿತ್ರದ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿಲ್ಲ. ಸೈನ್ಸ್ ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಈ ಸಿನಿಮಾದಲ್ಲಿದೆ. ಈ ಸಿನಿಮಾ ಮೇಲೆ ಪ್ರದೀಪ್ ರಂಗನಾಥನ್ (Pradeep Ranganathan) ಫ್ಯಾನ್ಸ್ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಿಲ್ಲ.

Sacnilk ವರದಿಯ ಪ್ರಕಾರ ಮೊದಲ ದಿನ ಈ ಸಿನಿಮಾಗೆ 7.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ 7.70 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ ಒಟ್ಟು ಗಳಿಕೆ 14.75 ಕೋಟಿ ರೂಪಾಯಿ ಆಗಿದೆ. ಪ್ರದೀಪ್ ರಂಗನಾಥನ್ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ಉತ್ತಮ ಕಲೆಕ್ಷನ್ ಆಲ್ಲ ಎಂಬುದು ತಿಳಿಯುತ್ತದೆ.

ಪ್ರದೀಪ್ ರಂಗನಾಥನ್ ಅವರ ಮೊದಲ ಸಿನಿಮಾ ‘ಲವ್ ಟುಡೇ’ಗೆ ಹೋಲಿಸಿದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಉತ್ತಮ ಆರಂಭ ಪಡೆದಿದೆ. ‘ಲವ್ ಟುಡೇ’ ಮೊದಲ ಎರಡು ದಿನಗಳಲ್ಲಿ ಕೇವಲ ₹7 ಕೋಟಿ ಗಳಿಸಿತ್ತು. ಆದರೆ, ಪ್ರದೀಪ್ ಅವರ ಇತ್ತೀಚಿನ ಹಿಟ್ ಚಿತ್ರಗಳಾದ ‘ಡ್ಯೂಡ್’ (20 ಕೋಟಿ) ಮತ್ತು ‘ಡ್ರ್ಯಾಗನ್’ (17 ಕೋಟಿ) ಸಿನಿಮಾಗಳಿಗೆ ಹೋಲಿಸಿದರೆ ಈ ಸಲ ಕಲೆಕ್ಷನ್ ಕೊಂಚ ಕುಸಿದಿದೆ.

ಸಾಮಾನ್ಯವಾಗಿ ಶನಿವಾರದಂದು ಸಿನಿಮಾಗಳ ಗಳಿಕೆಯಲ್ಲಿ ಭಾರೀ ಏರಿಕೆ ಇರುತ್ತಿತ್ತು. ಆದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಅಂತಹ ಮ್ಯಾಜಿಕ್ ನಡೆದಿಲ್ಲ. ಈ ಚಿತ್ರದ ಜೊತೆ ರಿಲೀಸ್ ಆದ ಅಡಿವಿ ಶೇಷ್ ಅವರ ‘ಡಕಾಯ್ತ್’ ಚಿತ್ರಕ್ಕೆ ಹೋಲಿಸಿದರೆ ಪ್ರದೀಪ್ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದ್ದರೂ, ನಿರೀಕ್ಷಿತ ವೇಗ ಕಾಣುತ್ತಿಲ್ಲ. ಈ ಚಿತ್ರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ವಿಘ್ನೇಶ್ ಶಿವನ್ ನಿರ್ದೇಶನದ ಈ ಸಿನಿಮಾಗೆ ‘ರೌಡಿ ಪಿಕ್ಚರ್ಸ್’ ಮತ್ತು ‘ಸೆವೆನ್ ಸ್ಕ್ರೀನ್ ಸ್ಟುಡಿಯೋ’ ಜಂಟಿಯಾಗಿ ಬಂಡವಾಳ ಹೂಡಿವೆ. 2040ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರದೀಪ್ ರಂಗನಾಥನ್ ಅವರಿಗೆ ಜೋಡಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಯೋಗಿ ಬಾಬು, ಸೀಮನ್, ಗೌರಿ ಜಿ ಕಿಶನ್, ಸುನೀಲ್ ರೆಡ್ಡಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *