ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?

ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ನಿಧನರಾಗಿದ್ದಾರೆ. ಅವರು ಕನ್ನಡದಲ್ಲಿ ಹಾಡಿದ ಮೂರು ಗೀತೆಗಳು ಬಿಡುಗಡೆ ಆಗಿವೆ. ಆದರೆ ನಾಲ್ಕನೇ ಹಾಡು ರಿಲೀಸ್ ಆಗಲೇ ಇಲ್ಲ. ಆ ಗೀತೆಗೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದರು. ಆ ದಿನಗಳನ್ನು ವೀರ್ ಸಮರ್ಥ್ (Veer Samarth) ಅವರು ಈಗ ನೆನಪಿಸಿಕೊಂಡಿದ್ದಾರೆ. ‘ಮಾಣಿಕ್ಯ’ ಎಂಬ ಸಿನಿಮಾದ ಸಲುವಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು. ಆಶಾ ಭೋಸ್ಲೆ ಅವರಿಂದ ಹಾಡಿಸಬೇಕು ಎಂಬುದು ವೀರ್ ಸಮರ್ಥ್ ಅವರ ಕನಸಾಗಿತ್ತು. ‘ನಾವು ಒಂದು ಸಿ.ಡಿ. ಸಿದ್ಧಪಡಿಸಿ ಆಶಾ ಭೋಸ್ಲೆ ಅವರ ಮಗನಿಗೆ ಕಳಿಸಿದ್ದೆವು. ಹಲವು ತಿಂಗಳು ಕಳೆದರೂ ಪ್ರತಿಕ್ರಿಯೆ ಬರಲಿಲ್ಲ. ನಂತರ ನಾವು ಸುಮ್ಮನಾದೆವು. ಆದರೆ ಒಂದು ದಿನ ಅನಿರೀಕ್ಷಿತವಾಗಿ ನಮಗೆ ಕರೆ ಬಂತು. ಸ್ವತಃ ಆಶಾ ಭೋಸ್ಲೆ ಅವರು ಕರೆ ಮಾಡಿ ಹಾಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು. ನನಗೆ ಶಾಕ್ ಆಯಿತು’ ಎಂದು ವೀರ್ ಸಮರ್ಥ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *