ಲ್ಯಾಂಡಿಂಗ್‌ ವೇಳೆ ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ; ಕ್ಷಮೆ ಯಾಚಿಸಿದ ಏರ್ ಇಂಡಿಯಾ

ಲ್ಯಾಂಡಿಂಗ್‌ ವೇಳೆ ವಿಮಾನದ ಮುಂಭಾಗದ ಚಕ್ರಕ್ಕೆ ಹಾನಿ; ಕ್ಷಮೆ ಯಾಚಿಸಿದ ಏರ್ ಇಂಡಿಯಾ

ಫುಕೆಟ್, ಮಾರ್ಚ್ 11: ಹೈದರಾಬಾದ್‌ನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಇಂದು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿತು. ಇದರ ಪರಿಣಾಮವಾಗಿ ಅದರ ನೋಸ್ ಗೇರ್‌ಗೆ ಭಾರೀ ಹಾನಿಯಾಗಿದೆ. ಈ ಘಟನೆಯ ನಂತರ, ವಿಮಾನ ನಿಲ್ದಾಣದ ಅಧಿಕಾರಿಗಳು ಹಲವು ಗಂಟೆಗಳ ಕಾಲ ರನ್‌ವೇಯನ್ನು ಮುಚ್ಚಲಾಯಿತು. ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಅನುಭವಿಸಿತು. ವಿಮಾನದ ಮುಂಭಾಗದ ಚಕ್ರ ಮುರಿದು ವಿಮಾನವು ರನ್‌ವೇ ಉದ್ದಕ್ಕೂ ಜಾರಿತು ಎಂದು ಮೂಲಗಳು ತಿಳಿಸಿವೆ. ಇದರ ಫೋಟೋಗಳು, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಆ ಪ್ರದೇಶವನ್ನು ಸುರಕ್ಷಿತಗೊಳಿಸಲು ಮತ್ತು ವಿಮಾನದಲ್ಲಿದ್ದವರ ಸುರಕ್ಷತೆಗಾಗಿ ಕೂಡಲೆ ಸ್ಥಳಕ್ಕೆ ಧಾವಿಸಿದರು.

ಇದನ್ನೂ ಓದಿ: Video: ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ, ಫುಕೆಟ್​ನ ರನ್​ವೇನಲ್ಲಿ ಸಿಲುಕಿದ ಏರ್ ಇಂಡಿಯಾ

“ಮಾರ್ಚ್ 11ರಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುವ ವಿಮಾನವು ಸಮಸ್ಯೆಯನ್ನು ಅನುಭವಿಸಿತು. ಫುಕೆಟ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ನೋಸ್ ವೀಲ್ (ಮುಂಭಾಗದ ಚಕ್ರ) ಸಮಸ್ಯೆ ಅನುಭವಿಸಿತು” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಮಾನದಲ್ಲಿ 131 ಪ್ರಯಾಣಿಕರು, ಇಬ್ಬರು ಮಕ್ಕಳು ಮತ್ತು 7 ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ವಿಮಾನವು ಹಾರ್ಡ್ ಲ್ಯಾಂಡಿಂಗ್ ಮಾಡಿರುವುದರಿಂದ ನೋಸ್ ವೀಲ್‌ಗೆ ಹಾನಿಯಾಗಿದೆ ಎಂದು ಕಂಡುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *