Headlines

ವಿಜಯ್-ರಶ್ಮಿಕಾ ಒಂದಾಗಲು ಕಾರಣವಾಯ್ತು ಕನ್ನಡದ ಆ ನಟಿ ತೆಗೆದುಕೊಂಡ ನಿರ್ಧಾರ

ವಿಜಯ್-ರಶ್ಮಿಕಾ ಒಂದಾಗಲು ಕಾರಣವಾಯ್ತು ಕನ್ನಡದ ಆ ನಟಿ ತೆಗೆದುಕೊಂಡ ನಿರ್ಧಾರ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ವಿವಾಹ ಆಗಿದ್ದಾರೆ. ಈ ಮದುವೆ ಸಾಕಷ್ಟು ಅದ್ದೂರಿಯಾಗಿ ನಡೆಯಿತು. ರಶ್ಮಿಕಾ ಹಾಗೂ ವಿಜಯ್ ಜೋಡಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇವರು ಮೊದಲು ನಟಿಸಿದ್ದು, ‘ಗೀತ ಗೋವಿಂದಂ’ ಚಿತ್ರದಲ್ಲಿ. ಇವರಿಬ್ಬರು ಒಂದಾಗಲು ಕನ್ನಡದ ನಟಿಯೊಬ್ಬರು ಕಾರಣ ಎಂಬ ಮಾಹಿತಿ ರಿವೀಲ್ ಆಗಿದೆ. ಈ ವಿಷಯ ಇತ್ತೀಚೆಗೆ ರಿವೀಲ್ ಆಗಿದೆ.

‘ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಕೆಮಿಸ್ಟ್ರಿ ಸಾಕಷ್ಟು ಗಮನ ಸೆಳೆಯಿತು. ರಶ್ಮಿಕಾ ಮಂದಣ್ಣ ಪಾತ್ರವೇ ಸಿನಿಮಾದಲ್ಲಿ ಹೈಲೈಟ್. ಚಿತ್ರ ಸೂಪರ್ ಹಿಟ್ ಆಗಲು ಅವರು ಕೂಡ ಕಾರಣ. ಇವರ ಮಧ್ಯೆ ಗಾಢ ಆಪ್ತತೆ ಬೆಳೆಯಲು ‘ಗೀತ ಗೋವಿಂದಂ’ ಕಾರಣ ಆಯಿತು ಎಂಬ ಮಾತುಗಳು ಇವೆ. ಒಂದೊಮ್ಮೆ ಕನ್ನಡದ ಆ ನಟಿ ಈ ಚಿತ್ರ ಒಪ್ಪಿ ನಟಿಸಿದ್ದರೆ ವಿಜಯ್ ಹಾಗೂ ರಶ್ಮಿಕಾ ಮಧ್ಯೆ ಇಷ್ಟು ಉತ್ತಮ ಕೆಮಿಸ್ಟ್ರಿ ಬೆಳೆಯುತ್ತಲೇ ಇರಲಿಲ್ಲವೇನೋ.

ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್ ಅವರಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಐಶ್ವರ್ಯಾ ಸರ್ಜಾ ಅವರಿಗೆ ‘ಗೀತ ಗೋವಿಂದಂ’ ಸಿನಿಮಾದ ಆಫರ್ ಹೋಗಿತ್ತಂತೆ.ಆದರೆ, ಈ ಆಫರ್​​ನ ಅವರು ನಿರಾಕರಿಸಿದರು. ಒಂದೊಮ್ಮೆ ಐಶ್ವರ್ಯಾ ಸಿನಿಮಾದಲ್ಲಿ ನಟಿಸಿದ್ದರೆ ವಿಜಯ್ ಹಾಗೂ ರಶ್ಮಿಕಾ ಭೇಟಿ ಅಷ್ಟು ಬೇಗ ಆಗುತ್ತಿರಲಿಲ್ಲ. ಮುಂದೆ ಭೇಟಿ ಆಗಿದ್ದರೂ ಇಬ್ಬರ ಮಧ್ಯೆ ಇಷ್ಟೊಳ್ಳೆಯ ಕೆಮಿಸ್ಟ್ರಿ ಬೆಳೆಯುತ್ತಿತ್ತು ಎಂದು ಹೇಳಲು ಸಾಧ್ಯವಿರಲಿಲ್ಲ.

‘ಗೀತ ಗೋವಿಂದಂ ಆಫರ್ ನನಗೆ ಬಂದಿತ್ತು. ನನ್ನ ಮೊದಲ ಸಿನಿಮಾ ಸೆಟ್ಟೇರುವ ಮೊದಲೇ ಈ ಚಿತ್ರದ ಆಫರ್ ಬಂದಿತ್ತು. ಸಾಕಷ್ಟು ನಟಿಯರಿಗೆ ಈ ಸಿನಿಮಾ ಆಫರ್ ಕೊಡಲಾಗಿತ್ತು. ಆದರೆ, ಸಿನಿಮಾ ಸೂಪರ್ ಹಿಟ್ ಆಯಿತು. ನನಗೆ ಆಫರ್ ಬಂದು, ಅದನ್ನು ನಟಿಸಲಾಗದೆ ಉಳಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆದ ಉದಾಹರಣೆ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಪರಶುರಾಮ್ ಪೆಟ್ಲಾ ನಿರ್ದೇಶನದ ‘ಗೀತ ಗೋವಿಂದಂ’ ಸಿನಿಮಾ 2018ರಲ್ಲಿ ರಿಲೀಸ್ ಆಯಿತು. 8 ವರ್ಷಗಳ ಹಿಂದೆ ರಿಲೀಸ್ ಆದ ಈ ಚಿತ್ರ ರಶ್ಮಿಕಾ ವೃತ್ತಿ ಜೀವನಕ್ಕೆ ಅತಿ ದೊಡ್ಡ ಗೆಲುವು ತಂದುಕೊಟ್ಟಿತು. ಈ ಸಿನಿಮಾ ರಶ್ಮಿಕಾಗೆ ಸಿಗೋದಕ್ಕೂ ಮೊದಲು ಲಾವಣ್ಯ ತ್ರಿಪಾಠಿ, ರಾಶಿ ಖನ್ನಾ ಹಾಗೂ ಅನು ಎಮ್ಯಾನ್ಯುವೆಲ್​​ಗೂ ಹೋಗಿತ್ತು ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *