ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ! – Kannada News | Man leaves bag containing cash and gold in Vidhana Soudha lobby

ಬೆಂಗಳೂರು, ಫೆಬ್ರವರಿ 10: ವಿಧಾನಸೌಧದ ಸಚಿವರ ಕಚೇರಿಯೊಂದರ ಬಳಿ ವ್ಯಕ್ತಿಯೊಬ್ಬರು 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಬಿಟ್ಟುಹೋದ ಘಟನೆ ನಡೆದಿದೆ. ನವೀನ್ ಎಂಬವರು ಸಚಿವರೊಬ್ಬರನ್ನು ಭೇಟಿಯಾಗಲು ಬಂದಾಗ ಕೈಚೀಲವನ್ನು ಮರೆತುಹೋಗಿದ್ದರು. ಮರುದಿನ ಬಂದಾಗ ಚೀಲ ಅಲ್ಲಿ ಇಲ್ಲದೇ ಇದ್ದುದು ಕಂಡು ಗಾಬರಿಯಾಗಿದ್ದಾರೆ. ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಏತನ್ಮಧ್ಯೆ, ಸಚಿವರ ಕಚೇರಿಯಿಂದಲೇ ಚಿನ್ನ, ನಗದು ಇದ್ದ ಬ್ಯಾಗ್ ಕಳವಾಗಿದೆ ಎಂಬ ವದಂತಿ ಹರಡಿದೆ. ಈ ವಿಚಾರವಾಗಿ ಸಚಿವರ ಕಚೇರಿ ಸ್ಪಷ್ಟನೆ ನೀಡಿದ್ದು, ಕಚೇರಿಯಲ್ಲಿ ಎಲ್ಲೂ ಕಳ್ಳತನವಾಗಿಲ್ಲ ಎಂದು ದೃಢಪಡಿಸಿದೆ. ವ್ಯಕ್ತಿಯೊಬ್ಬರು ವಿಧಾನಸೌಧದ ಪಡಸಾಲೆಯಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಭದ್ರತಾ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಚೇರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:09 am, Tue, 10 February 26

Source link

Leave a Reply

Your email address will not be published. Required fields are marked *