Headlines

ವಿಷ್ಣುವರ್ಧನ್​​​ಗೆ ನಾನ್​ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?

ವಿಷ್ಣುವರ್ಧನ್​​​ಗೆ ನಾನ್​ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?

ಇತ್ತೀಚೆಗೆ ಧನಂಜಯ್ (Dhananjay) ಅವರ ಆಹಾರ ಕ್ರಮ ಚರ್ಚೆಗೆ ಕಾರಣ ಆಗಿದ್ದು ಗೊತ್ತೇ ಇದೆ. ಲಿಂಗಾಯತ ಸಮುದಾಯಕ್ಕೆ ಸೇರಿ ಅವರು ನಾನ್ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಆದರೆ, ಧನಂಜಯ್ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮನ್ನು ತಾವು ಅವರು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲೇ ವಿಷ್ಣುವರ್ಧನ್ ಅವರ ಊಟದ ಪದ್ದತಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎಂದೇ ಹೇಳಬಹುದು.

ವಿಷ್ಣುವರ್ಧನ್ ಅವರು ನಾನ್​​ವೆಜ್ ತಿನ್ನುತ್ತಿದ್ದರು. ಅವರು ಬ್ರಾಹ್ಮಣ ಕುಟುಂಬದವರಾದರೂ ಆಹಾರ ಪದ್ಧತಿಯನ್ನು ತಮ್ಮಿಷ್ಟದಂತೆ ರೂಢಿಸಿಕೊಂಡರು. ಈ ವಿಷಯವನ್ನು ಅನೇಕರು ವಿವರಿಸಿದ್ದು ಇದೆ. ಹಿರಿಯ ನಿರ್ದೇಶಕ ಎಚ್. ಆರ್. ಭಾರ್ಗವ್ ಮತ್ತು ರಾಜೇಂದ್ರ ಸಿಂಗ್ ಬಾಬು ಈ ಬಗ್ಗೆ ಮಾತನಾಡಿದ್ದರು. ವಿಷ್ಣುಗೆ ಈ ಅಭ್ಯಾಸ ಹೇಗೆ ಆರಂಭ ಆಯಿತು, ಇದನ್ನು ಕಲಿಸಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡುವ ಕೆಲಸವನ್ನು ಇವರುಗಳು ಮಾಡಿದ್ದರು.

ವಿಷ್ಣುವರ್ಧನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಸಣ್ಣ ವಯಸ್ಸಿನಿಂದಲೇ ಮಿತ್ರರು. ರಾಜೇಂದ್ರ ಅವರ ಮನೆಗೆ ವಿಷ್ಣು ತೆರಳುತ್ತಿದ್ದರು ಮತ್ತು ಅಲ್ಲಿ ಊಟವನ್ನು ಮಾಡುತ್ತಿದ್ದರು. ಆಗ ರಾಜೇಂದ್ರ ಅವರ ಮನೆಯಲ್ಲಿ ಮಾಡುತ್ತಿದ್ದ ಮಾಂಸಾಹಾರದ ಊಟದ ರುಚಿಯನ್ನು ವಿಷ್ಣು ಸವಿಯುತ್ತಿದ್ದರು. ಹಾಗೆ ಅವರಿಗೆ ಮಾಂಸಾಹಾರ ಸೇವನೆ ಅಭ್ಯಾಸ ಆಯಿತು. ಇದನ್ನು ಅವರಿಗೆ ಯಾರೂ ಕಲಿಸಿರಲಿಲ್ಲ. ಭಾರತಿ ವಿವಾಹ ಆದ ಬಳಿಕ ಮನೆಯಲ್ಲೇ ನಾನ್ ವೆಜ್ ಅಡುಗೆ ಮಾಡುತ್ತಿದ್ದರಂತೆ.

ಇನ್ನು, ಆರ್ ಭಾರ್ಗವ್ ಅವರು ವಿಷ್ಣುವರ್ಧನ್ ಜೊತೆ ಕೆಲವು ಸಿನಿಮಾ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ವಿಷ್ಣು ಜೊತೆ ಅವರಿಗೆ ಸಾಕಷ್ಟು ಆಪ್ತತೆ ಇತ್ತು. ಅವರು ವಿಷ್ಣುನ ಹತ್ತಿರದಿಂದ ಬಲ್ಲವರಾಗಿದ್ದರು. ಹೀಗಾಗಿ, ಅವರ ಬಗ್ಗೆ ತಮಗೆ ತಿಳಿದ ವಿಚಾರ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು’; ಧನಂಜಯ್

ಅವರು ಹೇಳುವ ಪ್ರಕಾರ ಒಮ್ಮೊಮ್ಮೆ ನಾನ್ ವೆಜ್, ಸ್ಮೋಕಿಂಗ್​​ನ ಆರು ತಿಂಗಳು ಬಿಟ್ಟು ಬಿಡುತ್ತಿದ್ದರಂತೆ. ವಿಷ್ಣು ಕೆಲವೊಮ್ಮೆ ತಾವು ಶುದ್ಧ ಸಸ್ಯಹಾರಿ ಎನ್ನುತ್ತಿದ್ದರಂತೆ. ಆಮೇಲೆ ಇನ್ಯಾವಾಗಲೋ ನಾನ್ ವೆಜ್ ತಿನ್ನುತ್ತಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *