ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಮಹೇಂದ್ರ ರೆಡ್ಡಿ ಫೋನ್ ಪೇಯಲ್ಲಿ ಪ್ರೇಯಸಿ ಜತೆಗಿನ ಗುಟ್ಟು ರಟ್ಟು

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಮಹೇಂದ್ರ ರೆಡ್ಡಿ ಫೋನ್ ಪೇಯಲ್ಲಿ ಪ್ರೇಯಸಿ ಜತೆಗಿನ ಗುಟ್ಟು ರಟ್ಟು

ಬೆಂಗಳೂರು, ಏಪ್ರಿಲ್​ 08: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ (Dr. Kruthika Reddy Murder Case) ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಸಹಜ ಸಾವು ಎಂದುಕೊಂಡಿದ್ದ ಪ್ರಕರಣ ಮರಣೋತ್ತರ ಪರೀಕ್ಷೆ ಬಳಿಕ ದಿಕ್ಕನ್ನೇ ಬದಲಿಸಿದ್ದು, ಪತಿಯ ಕಳ್ಳಾಟ ಬಯಲು ಮಾಡಿತ್ತು‌. ಸದ್ಯ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್​ನಿಂದ ಬಯಲಾಗಿದೆ. ಆಸಾಮಿಯ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ.

ಏಪ್ರಿಲ್ 2025ರಂದು ಮಾರತ್ತಹಳ್ಳಿಯಲ್ಲಿ ಚರ್ಮರೋಗ ವೈದ್ಯ ಕೃತಿಕಾ ರೆಡ್ಡಿ ಕೊಲೆಯಾಗಿತ್ತು. ಪತಿ ಮಹೇಂದ್ರ ರೆಡ್ಡಿಯೇ ಪ್ರೊಪೋಫೋಲ್ ಎಂಬ ಅನಸ್ತೇಶಿಯಾವನ್ನು ಐವಿ ಫ್ಲೂಯಿಡ್ ಮೂಲಕ ನೀಡಿ ಕೊಂದಿದ್ದ. ಮೊದಮೊದಲು ಕೃತಿಕಾ ರೆಡ್ಡಿ ಸಾವು ಸ್ವಾಭಾವಿಕ ಸಾವು ಎಂದುಕೊಳ್ಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ದೇಹದಲ್ಲಿ ಅನಸ್ತೇಶಿಯಾ ನೀಡಿರುವುದು ಗೊತ್ತಾಗಿತ್ತು. ಹಾಗಾಗಿ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣ ಎಂದು ಬದಲಾಯಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೃತಿಕಾ ಸಹೋದರಿ

ಪ್ರಕರಣದ ತನಿಖೆ ಮುಂದುವರೆಸಿರುವ ಮಾರತ್ತಹಳ್ಳಿ ಪೊಲೀಸರು ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿದ್ದಾರೆ. 2022ರಿಂದಲೇ ಪ್ರೀತಿಯಲ್ಲಿದ್ದ ಆಸಾಮಿ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದ. ಹಣದಾಸೆಗೆ ಕೃತಿಕಾ ರೆಡ್ಡಿ ಕೊಂದು ಪ್ರೇಯಸಿ ಜೊತೆಗಿರಲು ಹೊಂಚು ಹಾಕಿದ್ದ. ಅದಕ್ಕೆ ಪೂರಕ ಎಂಬಂತೆ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್​ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ಮೆಸೇಜ್​​ನಲ್ಲಿ ಏನಿದೆ?

ಮೆಸೇಜ್​​- 1:ಈ ಮೆಸೇಜ್​​ ನೋಡಿದ ನಂತರ ನನಗೆ ಎಲ್ಲಿಯೂ ಮೆಸೇಜ್​​ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ. ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನ ಕರೆಯಬಹುದು. ಆಗ ನಾವು ಸ್ನೇಹಿತರು ಅಂತಷ್ಟೇ ಹೇಳಿ. ನೀವು ಪದೇ ಪದೇ ನನಗೆ ಕರೆ ಮಾಡಿದ್ರಾ ಅಂತಾ ಕೇಳಿದರೆ ಹೌದು ಎಂತಾ ಹೇಳು. ನಾನು ಆಸ್ಪತ್ರೆಯ ಬಗ್ಗೆ ಸಹಾಯ ಕೇಳಿದೆ ಅಂತಾ ಹೇಳು.

ಮೆಸೇಜ್​​- 2: ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿರುವ ಮತ್ತು ನನ್ನ ಬಳಿ ಪುರಾವೆ ಇಲ್ಲ ಅಂತಾ. ಅಲ್ಲದೆ ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.

ಮೆಸೇಜ್- 3: ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಹೋಗಿ ನಿನ್ನ ಜೀವನವನ್ನು ಆನಂದಿಸು. ನೀನು ಬಯಸಿದಂತೆ ನಾನು ದುಖಃದಿಂದ ಬಳಲುತ್ತೇನೆ. ಮತ್ತು ನೀನು ಬಯಸಿದಂತೆ ಸಾಯುತ್ತೇನೆ, ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.

ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ

ಹೀಗೆ ಕೊಲೆ ಬಳಿಕ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ  ಫೋನ್ ಪೇನಲ್ಲಿ ಮೆಸೇಜ್ ಮಾಡಿದ್ದ. ಸದ್ಯ ಮೊಬೈಲ್ ಎಫ್ಎಸ್​​ಎಲ್​ಗೆ ಕಳುಹಿಸಿದ್ದ ಮಾರತ್ತಹಳ್ಳಿ ಪೊಲೀಸರು, ಈ ಎಲ್ಲಾ ಮೆಸೇಜ್​ಗಳನ್ನು ರಿಟ್ರೀವ್ ಮಾಡಿದ್ದಾರೆ. ಇದು ಕೃತಿಕಾ ರೆಡ್ಡಿ ಕೊಲೆ ಪ್ರಮುಖ ಟೆಕ್ನಿಕಲ್ ಸಾಕ್ಷ್ಯವಾಗಿದೆ.

ಫೋನ್ ಪೇನಲ್ಲಿ 485 ಚಾಟ್ ಪತ್ತೆ

ಇನ್ನು ಇಷ್ಟೇ ಅಲ್ಲದೆ ಆರೋಪಿ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್​ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್​ಗಳನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆರೋಪಿ ಪ್ರೇಯಸಿ ನರ್ಸ್, ವೈದ್ಯೆ ಕೃತಿಕಾ ಹಾಗೂ ಮಹೇಂದ್ರ ಮೊಬೈಲ್ ರಿಟೀವ್​ನಲ್ಲಿ ಒಟ್ಟು 10 ಲಕ್ಷ 34 ಸಾವಿರ ರೂ ದಷ್ಟು ಡಿಜಿಟಲ್ ಫೈಲ್​ಗಳನ್ನ ರಿಟ್ರೀವ್ ಮಾಡಿರುವ ಪೊಲೀಸರು ಪ್ರಮುಖ ಫೈಲ್​ಗಳನ್ನು ಹೆಚ್ಚುವರಿ‌ ಚಾರ್ಜ್ ಶೀಟ್​ನಲ್ಲಿ ಸಲ್ಲಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *