
ರೂರ್ಕೆಲಾ, ಮಾ.9: ಶಾಲೆ ಎಂದರೆ ದೇವಾಲಯ ಇದ್ದಂತೆ, ಇಲ್ಲಿ ಶಿಕ್ಷಕರು ಏನು ಕಲಿಸುತ್ತಾರೆ ಅದನ್ನೇ ಮಕ್ಕಳು ಕಲಿಯುತ್ತಾರೆ. ಮನೆಯವರು ಕೂಡ ಶಿಕ್ಷಕರ ಮೇಲಿ ನಂಬಿಕೆಯಿಂದ ಶಾಲೆಗೆ ಕಳುಹಿಸುತ್ತಾರೆ. ಆದರೆ ಶಿಕ್ಷಕರೇ ಕೆಟ್ಟಾಗಿ ನಡೆದುಕೊಂಡರೆ ಮಕ್ಕಳಿಗೆ ಏನು ಕಲಿಸುತ್ತಾರೆ. ಇದೀಗ ಒಡಿಶಾದ ರೂರ್ಕೆಲಾದಲ್ಲಿ ಹೆಡ್ ಮಾಸ್ಟರ್ ಶಾಲೆಯಲ್ಲಿ ಕೆಲಸ ಮಾಡುವ ಮಹಿಳೆಯ ಜತೆಗೆ ಸಂಬಂಧ ಇಟ್ಟುಕೊಂಡಿರುವ ಘಟನೆಯೊಂದು ನಡೆದಿದೆ. ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಬೆಳೆಸಿ ಸಿಕ್ಕಿಬಿದ್ದ ಘಟನೆ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ನಡೆದಿದೆ. ಆಕ್ರೋಶಗೊಂಡ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಮುಖ್ಯೋಪಾಧ್ಯಾಯನಿಗೆ ಚಪ್ಪಲಿ ಹಾರ ಹಾಕಿ ಊರ ತುಂಬಾ ಪರೇಡ್ ಮಾಡಿಸಿದ್ದಾರೆ.
ಈ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ ಅದೇ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷನ ಪತ್ನಿಯಾಗಿದ್ದಾರೆ. ಮುಖ್ಯೋಪಾಧ್ಯಾಯ ರೋಹಿತ್ ಕುಮಾರ್ ರೇ (45) ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ (ಅಧ್ಯಕ್ಷ) ಆರೋಪಿಸಿದ್ದಾರೆ. ಬಿಸಿಯೂಟದ ನಂತರ ಮುಖ್ಯೋಪಾಧ್ಯಾಯ ಮತ್ತು ಮಹಿಳಾ ಕುಕ್ ಒಂದೇ ಕೋಣೆಯಲ್ಲಿ ಇರುವುದನ್ನು ಗಮನಿಸಿದ ಅಧ್ಯಕ್ಷರು ಮತ್ತು ಗ್ರಾಮಸ್ಥರ ಗುಂಪು ಏಕಾಏಕಿ ದಾಳಿ ನಡೆಸಿದೆ. “ಮಕ್ಕಳಿಗೆ ಪಾಠ ಮಾಡುವ ಬದಲು ನನ್ನ ಪತ್ನಿಗೆ ಮಕ್ಕಳಾಟ ಕಲಿಸುತ್ತಿದ್ದಾನೆ” ಎಂದು ಅಧ್ಯಕ್ಷರು ಗರಂ ಆಗಿದ್ದಾರೆ.
ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್ ಮಹತ್ವದ ಎಚ್ಚರಿಕೆ
ಆಕ್ರೋಶಿತ ಗುಂಪು ಹೆಡ್ಮಾಸ್ಟರ್ಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದೆ. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಮಕ್ಕಳು ಭಯಭೀತರಾಗಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ರೋಹಿತ್ ಕುಮಾರ್ ರೇ ಈ ಹಿಂದೆ ಕೂಡ ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು ಎಂಬ ವಿಷಯ ತಿಳಿದುಬಂದಿದೆ. ಈ ಹಿಂದೆ ಅಸಿಸ್ಟೆಂಟ್ ಟೀಚರ್ ಜೊತೆ ಸರಸವಾಡಿ ಅರೆಸ್ಟ್ ಆಗಿದ್ದ ಈತ, ಶಿಕ್ಷೆ ಅನುಭವಿಸಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದ. ಆದರೂ ಹಳೇ ಬುದ್ಧಿ ಬಿಡದೆ ಈಗ ಅಧ್ಯಕ್ಷನ ಪತ್ನಿಯ ಜೊತೆಗೇ ಸರಸಕ್ಕಿಳಿದು ಧರ್ಮದೇಟು ತಿಂದಿದ್ದಾನೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ಮುಖ್ಯೋಪಾಧ್ಯಾಯನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಆರೋಪದ ಮೇಲೆ ಶಾಲಾ ಅಧ್ಯಕ್ಷ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ